• ಸುಟ್ಟ ಮಡಿಕೆ ಮುನ್ನಿನಂತೆ ಮರಳಿದರೆಯನಪ್ಪ ಬಲ್ಲದೆ.
  • ಚಂದನವ ಕಡಿದು ಕೊರೆದು ತೇದಡೆ;ನೊಂದೆನೆಂದು ಕಂಪ ಬಿಟ್ಟೀತೆ?ಸಂದು ಸಂದು ಕಡಿದು ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ,ಬೆಂದು ಪಾಕಗೊಳ್ಳೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟೀತೆ?
  • ಬಲ್ಲವರೊಡನೆ ಸಂಗವ ಮಾಡಿದರೆ ಮೊಸರು ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
  • ತಂದು ಸುವರ್ಣವ ಕಡಿದು ಒರೆದಡೆ ಬೆಂದು ಕಳಂಕ ಹಿಡಿದಿತ್ತೆ?
  • ಹೂವು ಕಂದಿದಲ್ಲಿ ಪರಿಮಳವನ್ನು ಅರಸುವರೆ.