ಅಡುಗೆಮನೆ ಗಾದೆಗಳು
- ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಳೆ.
- (ಉಪ್ಪು) ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
- ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
- ಕೆಟ್ಟ ಮೇಲೆ ಬುದ್ಧಿ ಬ೦ತು, ಅಟ್ಟ ಮೇಲೆ ಒಲೆ ಉರೀತು.
- ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೆ ಪ್ರೀತಿ.
- ಎಲ್ಲರ ಮನೆಯ ದೋಸೇನೂ ತೂತೇ.
- ಉಪ್ಪಿಗಿ೦ತ ರುಚಿಯಿಲ್ಲ, ತಾಯಿಗಿ೦ತಾ ದೇವರಿಲ್ಲ.
- ಮಾಡಿದ್ದುಣ್ಣೋ ಮಾರಾಯಾ.
- ಕೆಟ್ಟಡುಗೆ ಅಟ್ಟುವವಳೇ ಜಾಣೆ.
- ಉಪ್ಪು ತಿಂದವನು ನೀರು ಕುಡಿಯಲೇಬೇಕು.