ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ಮುಟ್ಟಬೇಕು. - ೧೬:೪೪, ೧೧ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಜನರಿಗೆ ತಮ್ಮ ಹಕ್ಕು, ಹೊಣೆಗಾರಿಕೆಯ ಅರಿವು ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ನಕಲಿ ಮಾಲು. - ೦೫:೪೬, ೪ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು, ತೂಗುವುದು, ಅಳೆಯುವುದು. - ೦೫:೩೨, ೧೮ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಒಂದು ಜಾತಿಯ ಜನ, ತಮ್ಮ ಸುತ್ತಲೂ ಇನ್ನೂ ಅನೇಕ ಜಾತಿಗಳಿವೆ ಎಂಬುದನ್ನು ಯಾವಾಗ ಮರೆಯುತ್ತಾರೋ ಆಗ ಜಾತಿಭಾವನೆ ಮಾರಕವಾಗುತ್ತದೆ. - ೧೬:೦೩, ೨೫ ಡಿಸೆಂಬರ್ ೨೦೧೩ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ. - ೦೫:೨೦, ೨೦ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಏನಾದರು ಮಾಡುತಿರು ತಮ್ಮ ಸುಮ್ಮನಿರಬೇಡ.
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.
ನೀತಿ ನಿಯಮಗಳ ಬೇಲಿ ಇಲ್ಲದೆ ಸಮಾಜ ಜೀವನವೇ ಅಸಾಧ್ಯ. - ೧೩ ಡಿಸೆಂಬರ್ ೨೦೧೬ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಬದುಕಿನ ಗದ್ದಲ ಹೆಚ್ಚಾಗಿದ್ದಾಗ ಬಹಳ ಜನರಿಗೆ ಸಾವಿನ ಸವಾಲು ಕೇಳಿಸುವುದಿಲ್ಲ. - ೧೭:೩೮, ೯ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಾವೆಲ್ಲರು ಒಂದೇ ಜಾತಿ, ಒಂದೇ ಮತ, ಒಂದೇ ಕುಲ,ನಾವು ಮನುಜರು.
ನಿನ್ನೆದೆಯ ಬಲ,ಒಂದೇ ನಿನ್ನ ಬೆಂಬಲವು.
ಒಂದು ಕವನ ಒಂದು ಶತಮಾನದ ಮೇಲೆಯೂ ಸಂತೋಷ ಕೊಟ್ಟು ಜುಮ್ಮು ದಟ್ಟಿಸುವುದು ಸಾಧ್ಯವಾದರೆ, ಒಂದು ಶತಮಾನದ ಹಿಂದೆ ಇದ್ದ ಕಾವ್ಯಪ್ರಿಯನೊಬ್ಬ ಎದ್ದು ಬಂದು ಇದನ್ನು ಓದಿ ಮೆಚ್ಚುವುದು ಸಾಧ್ಯವಾದರೆ ಆಗ ಮಾತ್ರ ಕೃತಿ ಕೃತಾರ್ಥ.
ದೇಶದ ಪರಿಸ್ಥಿತಿ ತುಂಬ ಕೆಡುತ್ತ ಬರುತ್ತಿದೆ -ಆರ್ಥಿಕವಾಗಿ, ನೈತಿಕವಾಗಿ ಯಾವ ಕಡೆ ಹೋಗುತ್ತದೆ, ಏನಾಗುತ್ತದೆ, ತಿಳಿಯುವುದಿಲ್ಲ.
ಹುಡುಗನಲ್ಲಿ ಕಪಿ ಅಂಶವೂ ಇದೆ, ಆಂಜನೇಯನಂತೆ ಅದ್ಭುತವಾಗಿ ಬೆಳೆಯಬಲ್ಲ ಸಾಧ್ಯತೆಯೂ ಇದೆ -"ಹನುಮದ್ವಿಲಾಸ".
ಕಾವ್ಯ ಸಂಪ್ರದಾಯಬದ್ಧವಾಗಬಾರದು, ಆಗ ಕಾವ್ಯದಲ್ಲಿ ಮುಗ್ಗಲು ವಾಸನೆ ಬರುತ್ತದೆ.
ಪಂಪ ಕುಮಾರವ್ಯಾಸರನ್ನು ಓದಿ ಸಂತೋಷಪಡಲಾರದವನು, ಆಧುನಿಕ ಕಾವ್ಯವನ್ನೋದಿ ನಿಜವಾಗಿಯೂ ಪುಳಕಿತನಾಗುತ್ತಾನೆ ಎಂದು ನಂಬುವುದು ಕಷ್ಟ.