ಎದೆಗಾರಿಕೆ (Edegarike) 2012 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

  • ಮುತ್ತಪ್ಪಾ ತಂದೆ :ನೀವ್ಗಳು ಯಂಗ್ಸ್ಟಾರ್ಸ್ ಇದಿರಲ್ಲ ನಿಮ್ಮ ಪ್ರಾಬ್ಲಮ್ ಏನು ಗೊತ್ತಾ? ರೈಟ್ ಅಂಡ್ ರಾಂಗ್ ಬಗ್ಗೆ ಸ್ಪಷ್ಟತೆ ಇಲ್ಲ .
  • ಶ್ರೀಧರ್ : ಇಲ್ಲ ಸರ್ , ನಾವುಗಳು ಯಾವುದೇ ಕೆಲಸ ಮಾಡ್ಬೇಕಾದ್ರೂ ರೈಟ್ ಅಂಡ್ ರಾಂಗ್ ಬಗ್ಗೆ ಬಹಳ ಢಿಸ್ಕಸ್ ಮಾಡಿ ನಿರ್ಣಯ ತೊಗೊಳೋದು ಸರ್. 
  • ಮುತ್ತಪ್ಪಾ ತಂದೆ : ಸರಿ ನಿನ್ನ ಪ್ರಕಾರ ರೈಟ್ ಅಂಡ್ ರಾಂಗ್ ಅಂದ್ರೆ ಏನು?
  • ಶ್ರೀಧರ್: ಸರ್ , ನಮಗೆ ಆಮೇಲೆ ಸುತ್ತಲಿನ ಜಗತ್ತ್ಗೆ ಒಳ್ಳೆದು ಆಗೋ ಕೆಲಸ ಮಾಡೋದನ್ನ ರೈಟ್ ಅನ್ಕೋತೀನಿ ಸರ್....
  • ಮುತ್ತಪ್ಪಾ ತಂದೆ: ಅದನ್ನ ಡಿಸೈಡ್ ಮಾಡೋದು ಯಾರು? ನೀವೇ... ಅದರ ವ್ಯತ್ಯಾಸ ಏನು ಅಂತ ನಾನು ಹೇಳ್ತೀನಿ.... ರೈಟ್ ಅನ್ನೋದು ಜಗತ್ತಿಗೆ ಕಾಣೋ ಹಾಗೆ ಕೆಲ್ಸ ಮಾಡ್ಸತ್ತೆ , ರಾಂಗ್ ಅನ್ನೋದು ಜಗತ್ತಿಗೆ ಕಾಣದ ಹಾಗೆ ಕೆಲ್ಸ ಮಾಡ್ಸುತ್ತೆ... ನೌ ಟೆಲ್ ಮೀ , ನಿಮ್ಮ ಲೈಫೂ ರೈಟೋ ರಾಂಗೋ ???