ಎ ಹ್ಯಾಂಡ್ಬುಕ್ ಆಫ಼್‌ ಕನ್ನಡ ಪ್ರಾವರ್ಬ್ಸ್ ಪುಸ್ತಕದಿಂದ ಗಾದೆಗಳು

ಎ ಹ್ಯಾಂಡ್ಬುಕ್ ಆಫ಼್‌ ಕನ್ನಡ ಪ್ರಾವರ್ಬ್ಸ್ ಪುಸ್ತಕದಿಂದ ಗಾದೆಗಳು

ಸಂಪಾದಿಸಿ

 • ಅಕ್ಕನ ಚಿನ್ನವಾದರೂ ಅಗಸಾಲೆ ಬಿಡಾ,ಅಣ್ಣನ ಚಿನ್ನವಾದರೂ ಅಗಸಾಲೆ ಗುಂಜಿ ತೂಕ ಕದಿಯದೆ ಬೆಡಾ.
 • ಅಕ್ಕನ ಹಗೆ ಭಾವನ ನೆಂಟು.
 • ಅಕ್ಕಿ ಯೆಂದರೆ ಪ್ರಾಣ ನೆಂಟರೆಂದರೆ ಜೀವ.ನೆಂಟರೆಲ್ಲಾ ಖರೆ ಕಂಟಲೆ ಚೀಲಕ್ಕೆ ಕೈ ಹಾಕ ಬೇಡಿ.
 • ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು.
 • ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು.
 • ಅಗಸತ ಕತ್ತೆ ಕೊಂಡು ಹೋಗಿ ಡೊಂಬರಿಗೆ ತ್ಯಾಗಾ ಹಅಕಿದ ಹಅಗೆ, ಹಳ್ಳಿ ದೇವರು ತಲೆ ಹೊಡೆದು ಡಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ.
 • ಅಗಸನ ಕತ್ತೆ ಕೊಂಡು ಹೋಗಿ ಡೊಂಬರಿಗೆ ತ್ಯಾಗಾ ಹಾಕಿದ ಹಾಗೆ.
 • ಅಗಸನ ಬಡಿವಾರವೆಲ್ಲಾ ಹೆರರ ಬಟ್ಟೆಯ ಮೇಲೆ.
 • ಅಗಸಾಲೆ ಕಿವಿ ಚುಚ್ಚಿದರೆ ನೋವಿಲ್ಲ.
 • ಅಗ್ಗಸೂರೆ ಅನ್ನವೆಂದು ಸೀರೆ ಬೀಚ್ಚಿ ಉಂಡಳು.
 • ಅಜ್ಜಿಗೆ ಅರಿವೆಯ ಚಿಂತೆ ಮಗಳಿಗೆ ಗಂಡನ ಚಿಂತೆ ಮೊಮ್ಮಗಳಗೆ ಕಜ್ಜಾಯದ ಚಿಂತೆ.
 • ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು.
 • ಅಡವಿಯ ಡೊಣ್ಣೆ ಪರದೇಶಿಯ ತಲೆ.
 • ಅಡಿಕೆ ಉಡಿಯಲ್ಲಿ ಹಾಕ ಬಹುದು ಮರವಾರ ಮೇಲೆ ಕೂಡದು, ಗಿಡವಾಗಿ ಬೊಗ್ಗದ್ದು ಮರವಾಗಿ ಬೊಗ್ಗೀತೇ.
 • ಅಡಿಕೆ ಕದ್ದವ ಆನೆ ಕದ್ದಾನು.
 • ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಂದೀತೇ.
 • ಅಡೋದು ಗಾಂಡಳಿಗೆ ಬಡಿಸೋದು ಬೀಸಳಿಗೆ.
 • ಅತಿ ಆಸೆ ಗತಿ ಕೇಡು
 • ಅತಿ ಸ್ಸೇಹ ಗತಿ ಕೇಡು.
 • ಅತ್ತೆಗೆ ಒಂದು ಮಾತು ಸೊಸೆಗೆ ಪ್ರಾಣ ಸಂಕಟ.
 • ಅತ್ತೆ ಯೊಡಡೆದ ಪಾತ್ತೆಗೆ ಬೆಲೆ ಇಲ್ಲ.
 • ಅಪ್ಪ ತಿಂದರೆ ಸಾಲದೋ ಕಾವಲಿ ಛಿದ್ರೆ ಏಕೆ.
 • ಅಪ್ಪ ನೆಟ್ಟಾಲದ ಮರವೆಂದು ನೇಣು ಮಾಕಿಕೊಳ್ಳ ಬಹುದೇ.
 • ಅಬಟೆ ಕಾಯಿ ಇಲ್ಲದೆದ್ದರೆ ಔತಣ ಉಳಿದೀತೇ.
 • ಅಬದ್ಧಕ್ಕೆ ಅಪ್ಪಣೆಯೇ ಅಂದರೆ ಬಾಯಿಗೆ ಬಂದಷ್ಟು.
 • ಅಮ್ಮನ ಮನಸ್ಸು ಬೆಲ್ಲದ ಹಾಗೆ ಮಗಳ ಮನಸ್ಸು ಕಲ್ಲಿನ ಹಾಗೆ.
 • ಅರಗಿನಂತೆ ತಾಯಿ ಮರದಂತೆ ಮಕ್ಕಳು.
 • ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ.
 • ಅರಸನ ಕುದುರೆ ಲಾಯದಲ್ಲೇ ಮುಪ್ಪಾಯಿತು.
 • ಅರಸನ ಕಂಡ ಹಾಗಾಯಿತು, ಬಿಟ್ಟೀಮಾಡಿದ ಹಾಗಾಯಿತು.
 • ಅರೆದವ ಕುಡಿದಾನು.
 • ಅರೆಪಾವಿನವರ ಆರ್ಭಟ ಬಹಳ.
 • ಅರ್ತಿಗೆ ಬಳೆ ತೊಟ್ಟರೆ ಕೈ ಕೊಡಹಿದರೆ ಹೋದೀತೇ.
 • ಅಲ್ಪಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ.
 • ಅಲ್ಪರ ಸಂಗ ಅಭಿಮಾನ ಭಂಗ.
 • ಅಲ್ಪ ವಿದ್ಯಾ ಮಹಾ ಗರ್ವಿ.
 • ಅವರವರಿಗೆ ಎಣ್ಣೆ ಸೀಗೆ.
 • ಅಳಿವುದೇ ಕಾಯ ಉಳಿವುದೇ ಕೀರ್ತಿ.
 • ಅಂಗಳ ಹಾರಿ ಗಗನ ಹಾರಬೇಕು.
 • ಅಂಜಿದವನಮೇಲೆ ಕಪ್ಪೆ ಬಿದ್ದ ಹಾಗೆ.
 • ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ.
 • ಅಂಬಲೀ ಕುಡಿಯುವವನಿಗೆ ಮೀಸೆತಿಕ್ಕುವವನೊಬ್ಬ.

ಸಂಪಾದಿಸಿ

 • ಆಕಳು ಕಪ್ಪಾದರೆ ಹಾಲು ಕಪ್ಪೇ.
 • ಆಗಕ್ಕೆ ಭೋಗವೇ ಸಾಕ್ಷಿ.
 • ಆಗೋ ಪೂಜೆ ಆಗುತ್ತಿತಲ್ಲಿ ಊದೋ ಶಂಖೂದಿ ಬಿಡುವ.
 • ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಹೆಚ್ಚು.
 • ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ.
 • ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ.
 • ಆಡುವದು ಮಡಿ,ಉಂಬೋದು ಮೈಲಿಗೆ.
 • ಆತ್ಮ ಕಾದು ಧರ್ಮ.
 • ಆದರೆ ಹೋದರೆ ಹತ್ತಿ ಬೆಳೆದರೆ ಅಜ್ಜಿ ನಿನಗೊಂದು ಪಟ್ಟಿ ಸೀರೆ.
 • ಆನ ಸಾಧುವಾದರೆ ಅಗಸ ಮೋಳಿಗೆ ಹೇರಿದ.
 • ಆನೆ ಮೆಟ್ಟದ್ದೇ ಸಂದು ಸಟ್ಟ ಕಟ್ಟದ್ದೇ ಪಟ್ಟಣ.
 • ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ.
 • ಆನೇ ಕೈಲಿ ಕಬ್ಬು ಕೊಟ್ಟ ಹಾಗೆ.
 • ಆಪತಿಗೆ ಹರಕೆ ಸಂಪತಿಗೆ ಮರವು.
 • ಆಯಗಾರನ ಮನೆಯ ಎತ್ತು ತೆಕ್ಕೊಳ್ಲಬಾರದು ಪೂಜಾರಿ ವಾನೆಯ ಹೆಣ್ಣ ತೆಕ್ಕೊಳ್ಳಬಅರದು.
 • ಆರು ಯತ್ನ ತನ್ನದು ಏಳನೇದು ದೈವೇಚ‍್ಛೆ'
 • ಆರು ಹಡದಾಕೆಯ ಮುಂದೆ ಮೂರು ಹಡದಾಕೆ ಆಚಾರ ಹೇಳಿದಳು.
 • ಆಲಸ್ಯದವರಿಗೆ ಎರಡು ಕೆಲಸ ಲೋಭಿಗೆ ಮೂರು ಖರ್ಚು.
 • ಆಲಸ್ಯಂ ಅಮೃತಂ ವಿಷಂ.
 • ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ ಹೇಸಿ ನನ್ನ ಜೀವ ಹೆಂಗಸಾಗ ಬಾರದೆ.
 • ಆಸೆಗೆ ನಾಶವಿಲ್ಲ.
 • ಆಸೆ ಹೆಚ್ಚಾಯಿತು ಆಯುಷ್ಯ ಕಮ್ಮಿಯಾಯಿತು.
 • ಆಂಡಿಗೆ ಅರಿವೆ ಇಲ್ಲಾ ತುಟಿಗೆ ತೆಳಿ ಇಲ್ಲಾ.

ಸಂಪಾದಿಸಿ

 • ಇಕ್ಕಲಾರದ ಕೈ ಎಂಜಲು.
 • ಇಕ್ಕುವವಳು ನಮ್ಮವಳಾದರೆ ಕೊಟ್ಟಗೆಯಾಲ್ಲಾದರೂ ಉಣಲಕ್ಕು.
 • ಇಕ್ಕೇರಿ ತನಕ ಬಳಗ,ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ.
 • ಇಡೀ ಮುಳುಗಿದರೂ ಮೂಗು ಮೇಲೆ.
 • ಇತ್ತಿತ್ತ ಬಾ ಅಂದರೆ ಹೆಗಲೇರಿ ಕೂತ.
 • ಇದ್ದ ಊರು ಸುದ್ದಿ ಇದ್ದಲ್ಲಿ ತಿಗೆಯ ಬಾರದು. ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು.
 • ಇದ್ದದ್ದು ಹೇಳಿದರೆ ಹದ್ದಿನಂತೆ ಮೋರೆಯಾಯಿತು.
 • ಇದ್ದದ್ದು ಹೋಯಿತು ಮದ್ದಿನ ಗುಣ.
 • ಇದ್ದಲು ಮಶಿಯಂಥಾ ಮೆಯ್ಯ ಉಜ್ಜಿ ಉಜ್ಜಿ ತೊಳೆದರೂ ಇದ್ದ ರೂಪವಲ್ಲದೆ ಪ್ರತಿ ರೂಪವಾಗದು.
 • ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ.
 • ಇದ್ದವರು ಮೂರು ಕದ್ದವರು ಯಾರು.
 • ಇಬ್ಬರ ನ್ಯಾಯ ಒಬ್ಬನಿಗೆ ಆಯ.
 • ಇಬ್ಬರಿದ್ದರೆ ಏಕಾಂತ ಮೂವರಿದ್ದರೆ ಲೋಕಾಂತ.
 • ಇಲಿಗೆ ಹೆದರಿ ಹುಲಿಯ ಬಾಯಿಯಲ್ಲಿ ಬಿದ್ದಾ.
 • ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ.
 • ಇಲಿ ಹೆಚ್ಚತೆಂದು ಮನೆಗೆ ಉರಿಯನಿಡ ಬಾರದು.
 • ಇಲ್ಲದ ಬದುಕುಮಾಡಿ ಇಲಿಯಪ್ಪಗೆ ಚಲ್ಲಣ ಹೊದಿಸಿದ.

ಸಂಪಾದಿಸಿ

 • ಈ ಕಾಲಕ್ಕೆ ಆಡ್ಡೆ ಬಿಡ್ಡೆ,ಮುಂದಕ್ಕೆ ಓಡಿನ ಉಪ್ಪರಿಗೆ.

ಸಂಪಾದಿಸಿ

 • ಉಗಿದರೆ ತುಪಪ್ಪ ಕೆಡುತ್ತದೆ ನುಂಗಿದರೆ ಗಂಟ್ಲು ಕೆಡುತ್ತದೆ.
 • ಉಗುರಿನಲ್ಲಿ ಹೋಗುವದಕ್ಕೆ ಕೊಡಲಿ ಯಾಕೆ.
 • ಉಡೋಕೆ ಇಲ್ಲದವ ಮೈಲಿಗೆಗೆ ಹೇಸ,ಉಂಬೋಕೆ ಇಲ್ಲದವ ಎಂಜಲಿಗೆ ಹೇಸು.
 • ಉಣದಿದ್ದವನ ಹಸಿವೆ ಉಂಡವನು ಅರಿಯನಾ.
 • ಉಣ್ಣ ಬೇಡ ತಿನ್ನ ಬೇಡ ಹೊಗೆಯ ಬಾಯಿಯಲ್ಲಿ ಸತ್ತೆ.
 • ಉತ್ತಮನೆತ್ತ ಹೋರೂ ಶುಭವೇ.
 • ಉತ್ತಮ ಹೊಲ,ಮಧ್ಯಮ ವ್ಯಾಪಾರ,ಕನಿಷ್ಠ ಚಾಕರಿ.
 • ಉತ್ತರಾಸ್ಯಾಸ ಹೋಗುವಾಗ ಉಪ್ಪರಿಗೆ ಹಿಡಿದರೆ ತಡದೀತೇ.
 • ಉದ್ಯೋಗಂ ಪುರುಷ ಲಕ್ಷಣಂ.
 • ಉರಿಗೊಬ್ಬ ಹೆಗ್ಗಡೆ ಗೋಲೆಗೊಂದು ಬಸವ.
 • ಉರಿಯುವ ಬೆಂಕಿಯಲ್ಲಿ ಎಣ್ಣೆ ಹೊಯಿದ ಹಾಗೆ.
 • ಉಳಿ ಸಣ್ಣದಾದರೂ ಮರಾ ಕಡಿಯೋದು ಬಿಡದು.
 • ಉಂಡದ್ದು ಉಂಡ ಹಾಗೆ ಹೋದರೆ ವೈದ್ಯನ ಹಂಗೇನು.
 • ಉಂಡ ಮನೆಗೆರಡನ್ನು ಬಗೆವಾತನೆ ಮೂರ್ಖ.
 • ಉಂಡವನಿಗೆ ಊಟ ಬೇಡ ಗುಂಡು ಕಲ್ಲಿಗೆ ಎಣ್ಣೆ ಬೇಡ.
 • ಉಂಡವನಿಗೆ ಹಸಿವೆ ಇಲ್ಲ.
 • ಉಂಡಿಯೇನೋ ಗುಂಡಾ ಅಂದರೆಮುಂಡಾಸು ಮೂವತ್ತು ಮೂಳೆ.
 • ಉಂಬಾಗ ಉಡುವಾಗ ಊರೆಲ್ಲಾ ನೆಂಟರು.
 • ಉಂಬೋಕೆ ಉಡೋಕೆ ಟಣ್ಣಪ್ಪ ಕೆಲಸಕ್ಕೆ ಮಾತ್ರ ಡೊಣ್ಣಪ್ಪ.

ಸಂಪಾದಿಸಿ

 • ಊಟಕ್ಕಿಲ್ಲದ ಉಪ್ಪಿನ ಕಾಯಿ ಯಾತಕ್ಕೂ ಬೇಡ.
 • ಊಟ ಬಲ್ಲವನಿಗೆ ರೋಗವೆಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ.
 • ಊರ ಮುಮದೆ ನೇಗಲು ಹೂಡಿದರೆ ಕಂಡ ಕಂಡವರಿಗೆಲ್ಲಾ ಒಂದು ಮಾತು.
 • ಊರ ಮುಂದೆ ಕುಂಟೆ ಇಟ್ಟರೆ ಒಬ್ಬ ಕಡದು ಅಂದ,ಒಬ್ಬ ಬಳದು ಅಂದ
 • ಊರು ದೂರವಾಯಿತು ಕಾಡು ಹತ್ತರವಾಯಿತು
 • ಊರುಬಿಟ್ಟರೆ ನಗೆ, ಗಡ್ಡಾ ಹತ್ತಿದರೆ ಜಗೆ,ಇದ್ದಲ್ಲಿ ಇದ್ದರೆ ಒಂದು ಬಗೆ.
 • ಊರೆಲ್ಲಾ ಸಾರೆ ಆದ ಮೇಲ ಬಾಗಲು ಮುಚ್ಚಿದರು.

ಸಂಪಾದಿಸಿ

 • ಎಡರಿನೊಳ್ ಎದೆ ಗುಂದ ಬಾರದು.
 • ಎಡವಿದ ಕಾಲು ಎಡವುದು ಹೆಚ್ಚು.
 • ಎಣ್ಣೆ ಅಳೆದ ಮಾನದ ಜಿಡ್ಡು ಹೋದೀತೇ.
 • ಎತ್ತ ಬಿದ್ದರೂ ಮೂಗು ಮೇಲೆ.
 • ಎತ್ತ ಹೋದರೂ ಮೃತ್ಯ ಬಿಡದು
 • ಎತ್ತ ಹೋದರೂ ಮೃತ್ಯು ಬಿಡದು.
 • ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ ಹಾಗೆ.
 • ಎತ್ತು ಎರೆಗೆ ಎಳೆಯಿತು ಕೋಣ ಕೆರೆಗೆ ಎಳೆಯಿತು.
 • ಎತ್ತು ಒಳ್ಳೇದಾದರೆ ಇದ್ದೆ ಊರಲ್ಲೇ ಗಿರಾಕಿ.
 • ಎರಡು ದಾಸರಿಗೆ ನಂಬಿ ಕುರುಡ ದಾಸ ಕೆಟ್ಟ.
 • ಎರದೂ ಕೈ ತಟ್ಟಿದರೆ ಶಬ್ದ.
 • ಎರವಿನವರು ಎರವು ಕಸಕೊಂಡರೆ ಕೆರೆವಿನ ಹಾಗೆ ಮೋರೆಯಾಯಿತು.
 • ಎರವು ಸಿರಿಯಲ್ಲಾ ಬಾವು ಡೊಳ್ಳಲ್ಲ. ನೆರೆಮನೆಯ ಅಕ್ಕನ ಗಂಡ ಭಾವನಲ್ಲ.
 • ಎಲ್ಲಾ ಬಣ್ಣ ಮಶಿ ನುಂಗಿತು.ಹಲವು ಚಿತ್ತಾರ ಮಶಿ ನುಂಗಿತು.
 • ಎಷ್ಟು ನೂತರೂ ಹಂಜಿಯಲ್ಲದೆ ನೂಲಲ್ಲ.

ಸಂಪಾದಿಸಿ

 • ಏರಿದವ ಇಳಿದಾನು.
 • ಏಳರಲ್ಲಿ ನರಲೋ ಎಪ್ಪತ್ತರಲ್ಲಿ ಬರಲೋ.

ಸಂಪಾದಿಸಿ

 • ಒಡಂಬಡಿಕೆಯಿಂದ ಆಗುವದು ದಡಂಬಡಿಕೆಯಿಂದ ಆದೀತೇ.
 • ಒಬ್ಬನಿಗಿಂತ ಇಬ್ಬರು ಲೇಸು.
 • ಒರಳಲ್ಲಿ ಕೂತರೆ ಒನಿಕೇ ಪೆಟ್ಟು ತಪ್ಪಿಸ ಬಹುದೇ.
 • ಒಲ್ಲದ ಗಂಡಗೆ ಬೆಣ್ಣೆಯಲ್ಲಿ ಕಲ್ಲು.
 • ಒಳಗೆ ಬಂದರೆ ಮಾಯಿಯ ಅಲೆ ಹೊರಗೆ ಹೋದರೆ ಚವುಳಿ ಅಲೆ.
 • ಒಂದು ಅತ್ತೆ ಕಾಲ ಒಂದು ಸೊಸೆ ಕಾಲ.
 • ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸಿಣ್ಣ ತೊಡೆಯಬಹುದೇ.
 • ಒಂದು ಸಾರಿ ಬಿದ್ದ ಬಾವಿಗೆ ಹಂದಿಯಾದರೂ ಬೀಳದು.
 • ಒಂದು ಸಿಟ್ಟಿನಲ್ಲಿ ಬಾವಿಗೆ ಬಿದ್ದರೆ ಏಳು ಸಿಟ್ಟಿನಲ್ಲಿ ಏಳಕೂಡದು.

ಸಂಪಾದಿಸಿ

 • ಓಡಕ್ಕೆ ಆಗುವ ಮರ ಕೀಲಿಗೆ ಕಡಿಯ ಬಾರದು.
 • ಓಡಲಾರದವ ಒರಳು ಹೊತ್ತು ಒಡೇನೆಂದನಂತೆ.
 • ಓದಿ ಓದಿ ಮರುಳಾದ ಕೋಚ ಭಟ್ಟ.

ಸಂಪಾದಿಸಿ

 • ಕಚ್ಚೂವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು.
 • ಕಣ್ಣ ಮುಂದೆ ಇದ್ದರೆ ದನ ಬೆನ್ನ ಹಿಂದೆ ಇದ್ದರೆ ಮಗಳು.
 • ಕಣ್ಣಾರೆ ಕಂಡರೂ ಪರಾಮರಿಸಿ ನೋಡಿ ಕೊಳ್ಳ ಬೇಕು.
 • ಕತ್ತೆ ಕರ್ಕಿಗೆಮರುಳು ಗೊಡ್ಡೆಮ್ಮೆ ಹಿತ್ತಲಿಗೆ ಮರುಳು.
 • ಕತ್ತೆ ಕಸ್ತೂರಿ ಹೊತ್ತ ಹಾಗೆ.
 • ಕದಾ ತಿನ್ನುವವರ ಮನೇಲಿ ಹಪ್ಪಳ ಬಾಳುವದೇ.
 • ಕನ್ನವಿಡುವ ಕಳ್ಳನಿಗೆ ಮನ್ನಿಸಿ ತಂದಹಾಗೆ.
 • ಕಪ್ಪರ ತಿಪ್ಪೇಲಿಟ್ಟರೂ ತನ್ನ ವಾಸನೆ ಬಿಟ್ಟೀತೇ.
 • ಕಪ್ಪೆ ಕೂಗಿ ಮಳೆ ಬರಸಿತು.
 • ಕಬ್ಬು ಡೂಂಕಾದರೆ ಸವೆ ಡೊಂಕೇ.
 • ಕರಣ ತಪ್ಪಿದರೆ ಮರಣ
 • ಕರಿಯದ ಮನೆಗೆ ಕಳಸಗಿತ್ತಿಯಾಗಿ ಹೋದಂತೆ.
 • ಕರೆದು ಉಣ್ಣುವ ಮೊಲೆ ಕೊಯಿದು ಉಣ್ಣ ಬಾರದು.
 • ಕಲ್ಲು ಇದ್ದಾಗನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ.
 • ಕಷ್ಟವಿಲ್ಲದೆ ಇಷ್ಟವಿಲ್ಲಾ.
 • ಕಸ ತಿನ್ನುವದಕ್ಕಿಂತ ತುಸ ತಿನ್ನ ಬೇಕು.
 • ಕಸವನ್ನು ರಸಮಾಡ ಬೇಕು
 • ಕಳೃ ಕಲೃಗೆ ನೆಂಟು ಹುಳಿ ಮೆಣಸಿಗೆ ನಂಟು.
 • ಕಳ್ಳನ ಹೆಜ್ಜೆ ಕಳ್ಳನೇ ಬಲ್ಲಾ
 • ಕಳ‍್ಳನಿಗೆ ಕಡು ನಾಲಿಗೆ.
 • ಕಾಡಿನಲ್ಲಿ ತಿರುಗಿ ಕಟ್ಟಿಗೆ ಇಲ್ಲ ಅಂದ ಹಾಗೆ.
 • ಕಾಲ ತೊಂಕಿದರೆ ಹಾವು ಕಚ್ಚದೆ ಬೆಡದು.
 • ಕಾಂಚನಂ ಕಾರ್ಯಸಿದ್ಧಿ.
 • ಕೀಲು ಸಣ್ಣದಾದರೂ ಗಾಲಿ ನಡಿಸುತ್ತದೆ.
 • ಕುಣಿಕಲಿಕ್ಕೆ ತಿಳಿಯದಿದ್ದರೆ ಅಂಗಳ ಓರೆ.
 • ಕುಮಬಾರನ ಆವಿಇಗೆಯಲ್ಲಿ ತಾಂತ್ರದ ಚೆಮಬು ಹುಡುಕಿದಂತೆ.
 • ಕುರಿ ನಂದುವರು ಕಟುಗ.
 • ಕುರುಡ ಕಣ್ಣಿಗಿಂತ ಮೆಳ್ಳೆಗಣ್ಣು ವಾಸಿ.
 • ಕುರುಡಗೆ ಹಗಲೇನು ಇರುಳೇನು.
 • ಕುರುಡರೊಳಗೆ ವಿರಾಳನೇ ಶ್ರೇಷ್ಠ.
 • ಕುರುಡಿಯಾಗಲಿ ಕುಂಟಿಯಾಗಲಿ ಮದುವೆ ಹೆಂಡತಿ ಲೇಸು.
 • ಕುರುವಿನ ಬೇನೆ ಗುರುವೇ ಬಲ್ಲ
 • ಕುಲಕಂಮಡು ಹಣ್ಣು, ಮರಕಂಡು ಬಳ್ಳಿ, ಜಲನೋಡಿ ಭಾವಿ.
 • ಕುಲವನ್ನು ನಾಲಿಗೆ ಹೇಳಿವದು
 • ಕುಂಡೆ ಬೆಳೆದರೆ ಗೌಡನಾದಾನೇ.
 • ಕುಂಬಳಕಾಯಿ ಕ‍ಳ್ಳ ಅಂದರೆ ಹೆಗಲು ಮುಟ್ಟಿ ನೋಡಿದ.
 • ಕುಂಬಾರಗೆ ವರುಷ ದೊಣ್ಣೆಗೆ ನಿಮಿಷ.
 • ಕೂತು ಉಣ್ಣುವವನಿಗೆ ಕುಡಿಕೆ ಹಣಸಾಲದು.
 • ಕೂಸು ಕಾಸ ಹಡೆಯದು ಜೋಗುಳು ಮುಗಿಲ ಮುಟ್ಟತು.
 • ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ.
 • ಕೆಟ್ಟನಕ ಬುದ್ದಿ ಬಾರದು ಹೆಟ್ಟನಕ ಯೆಣ್ಣೆ ಬಾರದು.
 • ಕೆಟ್ಟ ಮೇಲೆ ಬುದ್ಧಿ ಬಂತು.
 • ಕೆಟ್ಟವನಿಗೆ ಬೆಟ್ಟವಿಲ್ಲಾ ಕಣ್ಣು.
 • ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ.
 • ಕೆಮ್ಮುವವಳಾದರೂ ನಮ್ಮವಳೇ ಲೇಸು.
 • ಕೆರೆಯ ಮುಂದೆ ಅರವಟ್ಟಗೆಯೇ,ಸಮುದ್ರದ ಮುಂದೆ ಅರವಟ್ಟಗೆಯೇ.
 • ಕೆರೇ ಹಾವು ಓಡುತ್ತದೆಂತ ಕಕ್ಕಳು ಓಡಿತಂತೆ.
 • ಕೆಂಬೋತ ಕುಣಿಯುತ್ತದೆಂತ ಕಸಬಾರಿ ಕುಣಿದು ಒಲೆಯಲ್ಲಿ ಬೆತ್ತು.
 • ಕೇಡು ಬರುವ ಕಾಲಕ್ಕೆ ಕೂಡುವದು ದುರ್ಬುದ್ಧಿ.
 • ಕೈಗೆ ನಿಲುಕದ್ದು ಸರ್ವ ಮಾನ್ಯ.
 • ಕೈಗೆ ಬಂದ ತುತ್ತು ಬಾಯಿಗೆ ಇಲ್ಲ.
 • ಕೈ ತಣ್ಣಗೆ ಮಾಡು.
 • ಕೊಟ್ಟ ಕೈ ಆಸೆ ಕೊಡದ ಕೈ ಹೆದರಿಕೆ.
 • ಕೊಟ್ಟು ಕೆಟ್ಟವರಿಲ್ಲ ತಿರಿದು ಬದುಕಿದವರಿಲ್ಲ.
 • ಕೊಡಲಿ ಕಾವು ಕುಲಕ್ಕೆ ಮೃತ್ಯು.
 • ಕೊಡುವವನು ಕಂಡರೆ ಬೇಡುವವರು ಬಹಳ
 • ಕೊಂದವನಿಗೆ ಕೊಲೆ ತಪ್ಪದು
 • ಕೋಟಿ ವಿದ್ಯೆಯೂ ಕೂಳಿಗೋಸ್ಕರವೇ.
 • ಕೋಲು ಮುರಿಯ ಬಾರದು ಹಾವು ಸಾಯ ಬಾರದು.
 • ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೇ ಕೆರೆಯದೆ ಬಿಟ್ಟೀತೇ.
 • ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು.
 • ಕಂಡವರ ಮಕ್ಕಳನ್ನು ಬಾವಿಯಲ್ಲಿ ಬೂಡಿ ಆಳಾ ನೋಡಿದ ಹಾಗೆ.
 • ಕಂಡು ಸಾಕಿದ ಮಕ್ಕಳ ಕಣ್ಣು ಕುರುಡು.

ಸಂಪಾದಿಸಿ

 • ಖಜ್ಜಿ ಇದ್ದವನಿಗೆ ಲಜ್ಜೆ ಇಲ್ಲ ಸಾಲ ಇದ್ದವನಿಗೆ ಸಡ್ಡೆ ಇಲ್ಲ.

ಸಂಪಾದಿಸಿ

 • ಗಾಣತಿ ಅಯ್ಯೋ ಅಂದರೆ ನೆತ್ತಿ ಗಾಗದು.
 • ಗಾರ್ಧಭ ಗಾಯನ ಮಾಡುತ್ತಾನೆ.
 • ಗಾಳಿ ಇಲ್ಲದೆ ಎಲೆ ಅಲ್ಲಾಡದು.
 • ಗಾಳಿಗೆ ಬಂದದ್ದು ನೀರಿಗೆ ಹೋಯಿತು.
 • ಗಾಳಿ ಬಂದಾಗಲೇ ತೂರಿ ಕೊಳ್ಳಬೇಕು.
 • ಗುಡಕ್ಕೆ ಗುಡ್ಡ ಅಡ್ಡ ಉಂಟು.
 • ಗುಬ್ಬಿ ಮೇಲೆ ಬ್ರಹ್ಮಾಸ್ತವೇ.
 • ಗುರುವಿನಂತೆ ಶಿಷ್ಯ ತಂದೆಯಂತೆ ಮಗ.
 • ಗೇಣು ತಪ್ಪಿದರೆ ಮಾರು ತಪ್ಪುವದು
 • ಗೇಣೆಗೆ ತಪ್ಪಿದರೆ ಮಾರಿಗೆ ತಪ್ಪಿ ಊರಿಗೆ ತರಿಸಿದಾ.
 • ಗೋಮುಖದ ವ್ಯಘ್ರು.
 • ಗಂಜಿ ಬಿಸಿಯಾದರೆ ಉಪ್ಪಿನ ಕಾಯಿ ಕಚ್ಚಿದ ಹಾಗೆ.
 • ಗಂಡನಿಗೆ ಹೊರಸು ಆಗದು ಹೆಂಡತಿಗೆ ನೆಲ ಆಗದು
 • ಗಂಡ ಪಟ್ಟೆ ತರುತ್ತಾನೆಂದು ಇದ್ದ ಬಟ್ಟೆ ಸುಟ್ಟಳಂತೆ.
 • ಗಂಡ ಪಟ್ಟೆ ತರುತ್ತಾನೆಂದು ಇದ್ದ ಸೀರೆ ಸುತ್ತಳಂತೆ.

ಸಂಪಾದಿಸಿ

 • ಚರ್ಮ ತೊಳೆದರೆ ಕರ್ಮ ತಪ್ಪಿತೇ.
 • ಚಳಿಗೆ ಇಲ್ಲದ ಕಂಬಳಿ ಮೆಳೇ ಮೇಲೆ ಬಿದ್ದರೇನು ಮುಳ್ಳಿನ ಮೇಲೆ ಬಿದ್ಧರೇನು.
 • ಚಿನ್ನದ ಚೂರಿ ಎಂದುಉ ಕುತ್ತಿಗೆ ಕೊಯಿಸಿ ಕೊಳ್ಳ ಬಹುದೇ.
 • ಚಿಂತೆಯೇ ಮುಪ್ಪು ಸುಕವೇ ಯೌವನ.
 • ಚೇಳಿನ ಮಂತ್ರ ತಿಳಿಯದವ ಹಾವಿನ ಗುದ್ದಿನಲ್ಲಿ ಕೈ ಹಾಕಿದ.
 • ಚೋಟು ಉದ್ದ ಮಗುವುಗೆ ಗೇಣು ಉದ್ದ ಕುಲಾವಿ.

ಸಂಪಾದಿಸಿ

 • ಜಗದೀಶ್ಯರನ ದಯೆಯಿದ್ದರೆ ಜಗತ್ತೆಲ್ಲಾ ನನ್ನದು
 • ಜಗಲಿ ಹಾರಿ ಗಗನ ಹಾರಬೇಕು.
 • ಜನ ವಾಕ್ಯಂ ಜನಾರ್ಧನ.
 • ಜಾಗ ನೋಡಿ ಪಾಗ ಹಾಕಬೇಕು.
 • ಜಾಣ ಕೆಲ್ಲ ತಿಂದು ಹೆಡ್ಡನ ಬಾಯಿಗೆ ಒರಸಿದಂತೆ.
 • ಜಾಲಿ ಬಿತ್ತಿದರೆ ಕಾಲಿಗೆ ಮೂಲ.
 • ಜೋಗಿಗೆ ಜೋಗಿ ತಬ್ಬಿದರೆ ಮೈ ಎಲ್ಲಾ ಬೂದಿ.

ಸಂಪಾದಿಸಿ

 • ಠಾಣ್ಯದಲ್ಲಿದ್ದರೆ ಮಾನ್ಯ.

ಸಂಪಾದಿಸಿ

 • ಡೊಣ್ಣೆ ಹಿಂಡಿದರೆ ಎಣ್ಣೆ ಬರುವದೇ.

ಸಂಪಾದಿಸಿ

 • ತಚ್ಧನ ಸಂಗಡ ಬಾಳುವದಕ್ಕಿಂತ ಹುಚ್ಚನ ಸಂಗಡ ಬೀಳುವದು ವಾಸಿ.
 • ತಟಸ್ಥನಾದವನಿಗೆ ತಂಟೆ ಏನು.
 • ತಣ್ಣೀರಾದರೂ ತಣಿಸಿ ಕುಡಿಯಬೇಕು.
 • ತನಗಲ್ಲದ ಕಣ್ಣು ಹೂಟ್ಟಿದರೇನು ಸೀರಿದರೇನು?
 • ತನಗೆ ತಾನೇ ತಲೆಗೆ ಎಣ್ಣೆ.
 • ತನುವರಿಯದ ನೋವಿಲ್ಲಾ, ಮನವರಿಯದ ಪಾಪವಿಲ್ಲಾ, ಶಿವನರಿಯದ ಸಾವಿಲ್ಲಾ.
 • ತನ್ನ ಕಾಲಡಿಯಲ್ಲಿ ಕೊಳೆಯುವ ಕುಂಬಳಕಾಯಿ ಕಾಣದೆ ಪರರ ಸಾಸಿವೆ ಹಕ್ಕಿದನಂತೆ.
 • ತನ್ನಕ್ಕನ ಅರಿಯದವಳು ನೆರೆಮನೆಯ ಬೂಮ್ಮಕ್ಕನ ಬಲ್ಲಳೇ.
 • ತನ್ನ ತಾನರಿತರೆ ತಾನಾದಾನು ತನ್ನ ತಾಮರೆತರೆ ತಾಹೋದಾನು.
 • ತನ್ನ ತೋಟದಲ್ಲಿ ತಾನು ಕೈ ಹೇಗೆ ನೀಸಿದರೇನು
 • ತನ್ನ ಬೆನ್ನು ತನಗೆ ಕಾಣದ ಗುರುಗುಂಜಿಗೆ ಕಪ್ಪು ಕಾಣದು.
 • ತನ್ನ ಮರಿ ಹೊನ್ನ ಮರಿ ಪರರ ಮರಿ ಕಾಗೆ ಮರಿ.
 • ತನ್ನ ಹೊಟ್ಟೆ ತಾನು ಹೊರದವನು ಮುನ್ನಾರ ಸಲಹುವನು.
 • ತಲೆ ಗಟ್ಟ ಎಂದು ಕಲ್ಲಾ ಹಾಯಬಾರದು.
 • ತಲೆ ಚನ್ನಾಗಿದ್ದರೆ ಎತ್ತ ಬೇಕಾದರೂ ತುರುಬು ಕಟ್ಟ ಕೊಳ್ಳಬಹುದು.
 • ತಾ ಕಳ್ಳ ನಾದರೆ ಪರರ ನಂಬಾ.
 • ತಾ ಕಳ್ಳೆ ಆದರೆ ಪರರ ನಂಬಳು.
 • ತಾಗದೆ ಬಾಗದು ಬಿಸಿಯಾದಗೆ ಬೆಣ್ಣೆ ಕರಗದು.
 • ತಾಗಿ ಬಾಗುವ ಮುನ್ನ ಬಾಗಿ ನಡೆವುದೇ ಲೇಸು.
 • ತಾನಾಗಿ ಬೀಳುವ ಮರಕ್ಕೆ ಕೊಡಲಿ ಯಾಕೆ?
 • ತಾನು ಕದಿಯಲಲ್ಲಾ ಅರಸಗೆ ಅಂಜಲಿಲ್ಲಾ
 • ತಾನು ಗರ್ತಿಯಾದರೆ ಸೂಳೆ ಗೇರಿಯಲ್ಲಿ ಮನಕಟ್ಟು.
 • ತಾನು ನಟ್ಟ ಬೀಳು ತನ್ನ ಎದೆಗೆ ಹಂಬಿತು.
 • ತಾನು ಬೂದಿ ತಿನ್ನುತ್ತಾನೆ ಪರರಿಗೆ ಹಿಟ್ಟು ಕೊಟ್ಟಾವ?
 • ತಾನು ಮಾಡಿದ ರೊಟ್ಟಿ ತಲೆಗೆ ಬಡಿಯಿತು.
 • ತಾನು ಮಾಡಿದ್ದು ಉತ್ತಮ, ಮಗ ಮಅಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು.
 • ತಾನು ಹಿಡಿದ ಮೊಲಕ್ಕೆ ಮೂರೇ ಕಾಲು.
 • ತಾನೂ ಕುಡಿಯ ಕುಡಿಯುವವನಿಗೂ ಬಿಡ.
 • ತಾನೆದ್ದು ಜೇಯಬೇಕು ಬಾನ ಹರಿದು ಬೀಳಬೇಕು.
 • ತಾಯಿ ತಲೆ ಒಡೆದರೂ ಲೋಕ ಎರಡು ಪಕ್ಷ.
 • ತಾಯಿಯನ್ನು ನೋಡಿ ಮಗಲನ್ನು ತೆಗೆದುಕೊ, ಹಾಲು ನೋಡಿ ಎಮ್ಮೆ ತೆಗೆದುಕೊ.
 • ತಾಳಿದವ ಬಾಳ್ಯಾನು.
 • ತಿನ್ನುವನಕ ಡೊಂಬರಸನ್ನೆ ತಿಂದಮೇಲೆ ಪಾರಣ ವೇಷ.
 • ತುತ ಕಟ್ಟದ ಮೇಲೆ ಮಠದ ಭೋಜನವೇಕೆ.
 • ತುತ್ತ ಕದ್ದವ ಎತ್ತು ಕದಿಯದೆ ಬಿಟ್ಟಾನೇ
 • ತುತ್ತು ಹೆತ್ತಾಯಿಯ ಮರೆಸಿತು ತಾಂಬ್ರದ ದುಡ್ಡು. ತಾಯಿ ಮಕ್ಕಳನ್ನು ಮರೆಸಿತು.
 • ತುಂಟ ಕುದುರೆಗೆ ಗಂಟು ಲಗಾಮು.
 • ತುಂಡಿಲ್ಲದವನಿಗೆ ತುಂಟನ ಭಯವೇನು?
 • ತುಂಡು ದೇವರಿಗೆ ಪುಂದು ಪೂಜಾರಿ.
 • ತುಂಬಿದ ಕೊಡ ತಡೆದೀತು ಅರೆ ಕೊಡ ಬಡೆದೀತು.
 • ತುಂಬಿದ ಕೊಡ ತಳುಕುವುದಿಲ್ಲ.
 • ತೋಳ ಕುಣೆಗೆ ಬಿದ್ದರೆ ಆಳಿಗೆ ಒಂದು ಕಲ್ಲು.
 • ತಂಗಳು ಉಂಡ ಬಡ್ಡಿ ಗಂಡನ ಹಸಿವೆ ಬಲ್ಲಳೇ?
 • ತಂತ್ರಗಾರನನ್ನು ಕುತಂತ್ರಗಾರ ಜಯಿಸಿದ.

ಸಂಪಾದಿಸಿ

 • ದಣಿದ ಎತ್ತೆಗೆ ಮಣುವೇ ಭಾರ.
 • ದಾಹ ಹತ್ತಿದವನಿಗೆ ಹತ್ತಿ ಕುಡಿವುದಕ್ಕೆ ಕೊಟ್ಟ ಹಾಗೆ.
 • ದಿಕ್ಕಿಲ್ಲದ ಮನುಷ್ಯನಿಗೆ ದೇವರೇ ಗತಿ.
 • ದೀವಟಿಗೆಯ ಮುಂದೆ ದೀಪವೇ.
 • ದುಡ್ಡಿಗೆ ನೂರು ಕುರುಳು, ಸುಟ್ಟು ಕೊಂಡು ಸಾಯುವವರ್ಯರು.
 • ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೇ
 • ದೂರಕ್ಕೆ ಬೆಟ್ಟ ನುಣ್ಣಗೆ.
 • ದೂರದ ನಯ ಕಲ್ಲಿಗಿಂತ ಸಮಿಪದ ಗೋರ್ಕಲ್ಲೇ ಲೇಸು.
 • ದೇವರ ಕಡೆಗೆ ಕೈ ಮನೆ ಕಡೆಗೆ ಮೈ.
 • ದೇವರು ಕೊಟ್ಟರೂ ಪೂಜಾರಿ ಬಿಡಾ.
 • ದೊಡ್ಡವನು ತಿಂದರ ಮದ್ದಿಗೆ ತಿಂದ,ಬಡವೆನು ತಿಂದರೆ ಹೊಟ್ಟೆ ಇಲ್ಲದೆ ತಿಂದ.
 • ಧರ್ಮಕ್ಕೆ ಕೊಟ್ಟ ಎಮ್ಮೆಯ ಹಲ್ಲು ಹಿಡಿದು ನೋಡುವರೇ.
 • ಧರ್ಮಕ್ಕೆ ಕೊಟ್ಟ ಧಟ್ಟ ಹಿತ್ತಲಿಗೆ ಹೋಗಿ ಮೊಳಾ ಹಾಕಿ ನೋಡಿದ.
 • ಧೈರ್ಯ ಉಂಟಾದವಗೆ ದೈವ ಸಹಾಯ ಉಂಟು.
 • ಧೋತ್ರ ದೊಡ್ಡದಾದರೆ ಗೋತ್ರ ದೊಡ್ಡದೇ.

ಸಂಪಾದಿಸಿ

 • ನಚ್ಚಿದ ಎಮ್ಮೆ ಕೋಣನಾಯಿತು.
 • ನಡುಗುವವನಮೇಲೆ ಸತ್ತ ಹಾವು ಬಿದ್ದ ಹಾಗೆ.
 • ನತ್ಯ ಹೋದರೆ ನುಚ್ಚಿಗೆ ಸಮ.
 • ನಮ್ಮ ಗಡ್ಡವೇ ಗಡ್ಡ ಪರರ ಗಡ್ಡ ಇವ್ವಣ ವಡ್ಡ.
 • ನಯವಿದ್ದಲ್ಲಿ ಭಯ ವಿಲ್ಲ.
 • ನಯಶಲಿ ಯಾದವ ಜಯಶಾಲಿ ಯಾದಾನ.
 • ನರಕಕ್ಕೆ ನವದ್ಯಾರ ನಾಕಕ್ಕೆ ಒಂದೇದ್ಯಾರ.
 • ನರ್ಮದೆಗೆ ಹೋದರೆ ಕರ್ಮ ತಪ್ಪೀತೇ.
 • ನವಿಲು ಕುಣಿಯುತ್ತದೆಂತ ಕೆಂಂಬೋತ ಕುಣಿಯಿತು.
 • ನಳಚಕ್ರವರ್ತಿಯಾದರೂ ಅಳಿವು ತಪ್ಪಲಿಲ್ಲ.
 • ನಾಗಮಲ್ಲಿಗೆ ಹೂವು ವೂಗವಾದೀತೇ.
 • ನಾಚಿಕೆ ಇಲ್ಲದವರ ಕಂಡರೆ ಆಚೆಗೆ ಹೋಗಬೇಕು.
 • ನಾಡಿಗೆ ಇಬ್ಬರು ಅರಸುಗಳಾದರೆ ಕೇಡು ಒಪ್ಪುದು ರಪ್ಪದು.
 • ನಾನೂ ನಾಯಕ ನೀನೂ ನಾಯಕ ದೋಣಿ ಒತ್ತುವ ಡೊಣ್ಣಪ್ಪ.
 • ನಾನೊಂದೆಣಿಸಿದರೆ ದೈವವೊಂದೆಣೆಸಿತು.
 • ನಾಯಿಗೆ ಕೆಲಸವಿಲ್ಲ ಕೂಡಿರಲಿಕ್ಕೆ ಸಮಯವಿಲ್ಲ.
 • ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ.
 • ನಾಯಿಯ ಬಾಲ ನಳಗೇಲ ಹಾಕಿದರೆ ಡೋಂಕು ಬಿಟ್ಟೀತೇ.
 • ನಾಳೆ ಎಂಬುದು ಗಣಪತಿಯ ಮದುವೆ.
 • ನಿತ್ಯ ದರಿದ್ರಗೆ ನಿಶ್ಚಿಂತೆ.
 • ನಿದ್ದೆಬಂದವವನನ್ನು ಎಬ್ಬಿಸಬಹುದು ಎಚ್ಚರಇದ್ದವನನ್ನು ಎಬ್ಬಿ ಸಕೂಡದು.
 • ನಿನಗೆ ಕೋಪ ವಾದರೆ ನನಗೆ ಸಂತೋಷ.
 • ನಿನ್ನ ಜುಟ್ಟು ನನ್ನ ಕೈಯಲ್ಲಿ ಸಿಕ್ಕಿದೆ.
 • ನಿಮ್ಮ ನಿಮ್ಮ ಸ್ನೇಹ ನನ್ನ ಕೊಟ್ಟು ಕೋಡು.
 • ನೀತಲ್ಲಿ ಬರದ ಬರಹದ ಹಾಗೆ.
 • ನೀರಿನ ಮೇಲಣ ಗುಳ್ಳೆಯ ಹಾಗೆ.
 • ನೀರುಳ್ಳಿಯವನ ಸಂಗಡ ಹೋರಾಟಕ್ಕೆ ಹೋದರೆ ಮೋರೆಯೆಲ್ಲಾ ನಾರದೇ.
 • ನೂರು ಮಂದಿ ವೂಂಡರು ಕೂಡಿ ಓಂದು ಕರಾ ಕಟ್ಟಲಿಲ್ಲ.
 • ನೂರು ಹಾರಿ ಹೋಯಿತು ಎರಡು ಬೆರಸಿ ಬಂತು.
 • ನೆರೆಮನೆ ಹಾಳಾದರೆ ಕರುಗಳು ಕಟ್ಟೇನು.
 • ನೋಟ ನೆಟ್ಟಗಿದ್ದರೆ ಕಾಟ ಹೇಗೆ ಬಂದೀತು.
 • ನೋಡಿಕೋತಾ ಹೋದರೆ ಮದುವೆ ಹೆಂಡತಿ ಕುರುಡಿ.
 • ನೋಡಿ ನಡೆವನಿಗೆ ಕೇಡು ಬಾರದು.
 • ನೋಡಿ ಬರೆದರೆ ಪರರ ಅನ್ನ ತಿಂದಿತು ನೋಡದೆ ಬರೆದರೆ ತನ್ನ ಅನ್ನ ತಿಂದಿತು.
 • ನೋಯುವ ಕಾಲ ತಪ್ಪಿದರೂ ಸಾಯುವ ಕಾಲ ತಪ್ಪದು.

ಸಂಪಾದಿಸಿ

 • ಪಡಿಗೆ ಬಂದವನಿಗೆ ಕಡಿ ಅಕ್ಕಿ ಆಗದೇ.
 • ಪರಡಿಯ ರುಚಿ ಕರಡಿಗೆ ತಿಳದೀತೇ.
 • ಪಾಪ ಪ್ರಕಟ ಪುಣ್ಯ ಗೋಪ್ಯ.
 • ಪಾಪಿ ಹೋದಲ್ಲಿ ಪಾತಾಳ.
 • ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ಯರ ಕೊಟ್ಟೀತೇ.
 • ಫಲಕ್ಕೆ ತಕ್ಕ ಬೀಜ ನೆಲಕ್ಕೆ ತಕ್ಕ ನೀರು.

ಸಂಪಾದಿಸಿ

 • ಬಕ ಧ್ಯಾನದಂತೆ.
 • ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು.
 • ಬಟ್ಲು ಮುರಿದು ಕಂಚು ಮಾಡಿದ.
 • ಬಡವನ ಸಿಟ್ಟು ದವಡೆಗೆ ಮೂಲ.
 • ಬಡವರ ಮಕ್ಕಳಿಗೆ ಬಂಗಡೆ ಮೀನು ಕಜ್ಜಾಯ.
 • ಬತ್ತಿ ನೂಕಲಾರದ ಬಂಟ ದಳ ಬಡಿಸ್ಯಾನೇ.
 • ಬಲ್ಲವರ ಮಾತು ಬೆಲ್ಲ ಸವದಂತೆ.
 • ಬಸವನ ಹಿಂದೆ ಬಾಲ.
 • ಬಾಡಿಗೆ ಎತ್ತು ಎಂದು ಬಡಿದು ಬಡಿದು ಹೂಡ ಬಾರದು.
 • ಬಾನ ಹರಿದು ಬೀಳುವಾಗ ಅಂಗೈ ಒಡ್ಡಿದರೆ ತಡದೀತೇ.
 • ಬಾಯಾರಿದಾಗ ಬಾವಿ ತೋಡಿದ ಹಾಗೆ.
 • ಬಾಯಿ ಇದ್ದರೆ ಮಗ ಬದುಕ್ಯಾನು.
 • ಬಾಯಿಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷೆಪ್ಪ.
 • ಬಾಯಿಯಲ್ಲಿ ಬೆಲ್ಲ ಕರುಳು ಕತ್ತರಿ.
 • ಬಾಳುವ ಮನೆಗೊಂದು ಬೊಗಳುವ ನಾಯಿ.
 • ಬಾಳೇ ಹಣ್ಣಿಗೆ ಗರಗಸ ವೇಕೆ.
 • ಬಿತ್ತುವಾಗ ಮಲಗಿದರೆ ಕೊಯ್ಯುವಾಗ ಹಗುರವಾಯಿತು.
 • ಬಿಸಿ ಪರಮಾನ್ನದಲ್ಲಿ ಸಿಟ್ಟುಕೊಂಡ ಮಗ ಮೊಸರನ್ನು ಊದಿತು.
 • ಬಿಸಿಯ ತೋರಿದ ಬೆಕ್ಕು ಒಲೆಯ ಬಳಿಯ ಸೇರದು.
 • ಬಿಸಿಲು ಬಂದ ಕಡೆಗೆ ಕೊಡೆ ಹಿಡಿ.
 • ಬೀಜಕ್ಕೆ ತಕ್ಕ ಫಲ.
 • ಬುದ್ಧಿ ಬಲ್ಲಾದನವನಿಗೆ ಮನ ಎಲ್ಲಾ ಸೌದೆ.
 • ಬೂರುಗದ ಮರವನ್ನು ಗಿಣಿ ಕಾದ ಹಾಗೆ.
 • ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.
 • ಬೆಕ್ಕಿಲ್ಲದ ಮನೆಯಲ್ಲಿ ಇಲಿ ಲಾಗ ಹೊಡೆಯಿತು.
 • ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಹೊಕ್ಕವರಿಗೆ ಕಾಣದೇ.
 • ಬೆಟ್ಟಾ ಅಗಿದು ಇಲಿ ಹಿಡಿದ.
 • ಬೆರಳು ತೋರಿಸಿದರೆ ಕೈ ನುಂಗುತ್ತಾನೆ.
 • ಬೆಲ್ಲವಿಲ್ಲದಿದ್ದರೆ ಬೆಲ್ಲದಂಥಾ ಮಾತು ಇಲ್ಲವೆ.
 • ಬೆಳಗಿಂದ ರಾಮಾಯಣ ಕೇಳಿ ಸಿತೆಯೂ ರಾಮನೂ ಏನಾಗ ಬೇಕೆಂದ ಹಾಗೆ.
 • ಬೆಳೇ ಸಿರಿ ವೂಳೆಲೇ ಕಾಣುವದು.
 • ಬೆಂಕಿ ಇದ್ದಲ್ಲಿ ಬೆಳಕು ನೀರಿದ್ದಲ್ಲಿ ಕೆಸರು.
 • ಬೇವೂರ ಲಾಭಕ್ಕಿಂತ ಇದ್ದ ಊರ ನಷ್ಟ ಲೇಸು.
 • ಬೋರೇ ಗಿಡದಲ್ಲಿ ಕಾರೆ ಹಣ್ಣಾದೀತೇ.
 • ಬಂದ ದಿವಸ ನೆಂಟ, ಮರು ದಿವಸ ಬಂಟ ಮೂರನೇ ದಿವಸ ಕಂಟ.
 • ಬಂದದ್ದು ಬಿಡ ಬಾರದು ಬಾರದ್ದು ಬಯಸ ಬಾರದು.
 • ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ.
 • ಬಂದ ಹಾಗೆಯೇ ಹೋಯಿತು.

ಸಂಪಾದಿಸಿ

 • ಭಲರೇ ಬೋನಗಿತ್ತಿ ಅಂದರೆ ಮೈ ಎಲ್ಲಾ ಆಮ್ರ.
 • ಭಾರ್ಯ ರೂಪವತೀ ಶತ್ರು.
 • ಭೋಗಿಗೆ ಯೋಗಿ ಮರುಳು ಯೋಗಿಗೆ ಭೋಗಿ ಮರುಳು.

ಸಂಪಾದಿಸಿ

 • ಮಗ್ಗುಲಲ್ಲಿ ಶಿಶು ಇಟ್ಟುಕೊಂಡು ಹಗಲೆಲ್ಲಾ ಹುಡುಕಿದಳು.
 • ಮಟ್ಟು ತಿಳಿಯದೆ ಮಾತಾಡ ಬಾರದು.
 • ಮಣ್ಣಿನ ಕಾಲು ನೀರಿಗೆ ಆಗದು ಮರದ ಕಾಲು ಬೆಂಕಿಗೆ ಆಗದು.
 • ಮತ್ತನಾದವನ ಹತ್ತಿರ ಕತ್ತಿ ಇದ್ದರೇನು.
 • ಮನಸ್ಸಿನಂತೆ ಮಹಾದೇವ.
 • ಮನೆ ಕಟ್ಟದವನೇ ಬಲ್ಲ ಮದುವೆ ಮಾಡಿದವನೇ ಬಲ್ಲ.
 • ಮನೆಗೆ ಮಾರಿ ಪರೋಪಕಾರಿ.
 • ಮನೆ ಮುರಿದರೆ ಕಟ್ಟಬಹುದು ಮನ ಮುರಿದರೆ ಕಟ್ಟಲು ನಲ್ಲಾ.
 • ಮನೆಯ ದೀಪವೆಂದು ಮುದ್ದಿಟ್ಟರೆ ಗಡ್ಡ ಮೀಸೆ ಸುಟ್ಟತು.
 • ಮಮತೆಯಿಂದ ಕೊಟ್ಟದ್ದು ಅಮೃತ.
 • ಮರ ಹತ್ತಿದವನ ಕಾಲು ಕೆಳಗೆ.
 • ಮಲ್ಲಿಗೆ ಹೂವಿನಿಂದ ಬಾಳೆ ಹಗ್ಗ ಪಾವನವಾಯಿತು.
 • ಮಳಲಿನಿಂದ ತೈಲ ತೆಗೆದ ಹಾಗೆ.
 • ಮಳೆಗೆ ಹೆದರಿ ಹೊಳೆಯಲ್ಲಿ ಹಾರಿದಾ.
 • ಮಳೆ ನೀರು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದನಂತೆ.
 • ಮಾಡ ಬಾರದ್ದನ್ನು ಮಾಡಿದರೆ ಆಗ ಬಾರದ್ದು ಆಗುವದು.
 • ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ತೋಡಿದ ಭಾವಿಗೆ ಜಲವೇ ಸಾಕ್ಷಿ.
 • ಮಾಡಿದ್ದು ಆಟ ಆಗದ್ದು ಕಾಟ.
 • ಮಾಡಿದ್ದು ಉಣ್ಣೊ ಮಹಾರಾಯಾ.
 • ಮಾಡುವದು ದುರಾಚಾರ ಮನೆಯ ಮುಂದೆ ವೃಂದಾವನ.
 • ಮಾಡೋದಕ್ಕಿಂತ ಆಡೋದು ಸುಲಭ.
 • ಮಾಣಿಕ ಮಸೀ ಅರಿವೆಯಲ್ಲಿ ಕಟ್ಟದಹಾಗೆ.
 • ಮಾತು ಬಲ್ಲವಗೆ ಜಗಳವಿಲ್ಲ ಊಟ ಬಲ್ಲವಗೆ ರೋಗವಿಲ್ಲ.
 • ಮಾತು ಬಾರದಿದ್ದರೆ ಸುಮ್ಮನಿರುವವ ಜಾಣ.
 • ಮಾತು ಮನೆವಾರ್ತೆಗೆ ಕೇಡು ತೂತು ಮಡಿಕೆಗೆ ಕೇಡು.
 • ಮಾನ ಹೋದ ಮೇಲೆ ಮರಣ ಆದ ಹಾಗೆ.
 • ಮುಗ್ಗಿದವ ಹಿಗ್ಗ್ಯಾನು.
 • ಮುತ್ತಿನ ಚವು ಕತ್ತೆಗೆ ತಿಳಿದೀತೇ.
 • ಮುತ್ತು ಕೆಟ್ಟರೆ ಭತ್ತಕ್ಕಿಂತ ಕಡೆಯೇ.
 • ಮುಳ್ಳಿನಿಂದ ಮುಳ್ಳು ತೆಗೆಯ ಬೇಕು.
 • ಮುಂದಣ ಬುದ್ಧಿ ತಪ್ಪಿದರೆ ಮೂರು ದಾರಿ ಮಣ್ಣು.
 • ಮೂಡಣ ಸಂತೆಗೆ ಹೋಗ ಬೇಡ ಮುಂಡೆ ಮಗಳನ್ನು ತರಬೇಡ.
 • ಮೂರು ವರ್ಷದ ಬುದ್ದಿ ನೂರು ವರ್ಷದ ತನಕ.
 • ಮೂರ್ಖಗೆ ಹೇಳಿದ ಬುದ್ಧಿ ಘೋರ್ಕಲ್ಲ ಮೇಲೆ ಹೊಯಿದ ಮಳೆ.
 • ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು.
 • ಮೂವರೆ ಕಿವಿಗೆ ಮುಟ್ಟದ್ದು ಮೂರು ಲೋಕಕ್ಕೆ.
 • ಮೆಚ್ಚಿದವನಿಗೆ ಮಸಣ ಸುಖ.
 • ಮೆಚ್ಚಿದ ಹೆಣ್ಣಿಗೆ ಮರನ ಓಲೆ ಸಾಕು.
 • ಮೆಟ್ಟದಾಕ್ಷಣ ಘಟ್ಟ ತಗ್ಗೀತೇ.
 • ಮೆಟ್ಲುಗಲ್ಲು ಚಿನ್ನವಾದರೆ ನಿನಗೆ ಅರೆವಾಸಿ ನನಗೆ ಅರೆವಾಸಿ.
 • ಮೆದ್ದು ನೋಡು ಮದ್ದಿನ ಗುಣ.
 • ಮೈರ ವಿದ್ದವಿನಿಂದ ಕ್ಷೌರಾ ಮಾಡಿ ಕೊಂಡ ಹಾಗೆ.
 • ಮೋಟು ಮರ ಗಾಳಿಗೆ ಮಿಂಡ.
 • ಮೋರೆ ಕಂಡರೆ ಮನಸ್ಸು ತಿಳಿದೀತೇ.
 • ಮೌನಂ ಸರ್ವತ್ರ ಸಾಧನಂ.
 • ಮಂಗನ ಕೈಯಲ್ಲಿ ಮಾಣಿಕ ಕೊಟ್ಟ ಹಾಗೆ.
 • ಮಂಗನ ಪಾರು ವತ್ಯ ಹೊಂಗೇ ಮರದ ಮೇಲೆ.
 • ಮಂಡೆ ಮಾಸಿತು ಅನ್ನುವವರಿದಾರೆ ಎಣ್ಣೆ ಇಕ್ಕುವವರಿಲ್ಲ.

ಸಂಪಾದಿಸಿ

 • ಯಥ ರಾಜಾ ತಥಾ ಪ್ರಜಾ.
 • ಯಾವ ಕಾಲ ತಪ್ಪಿದರೂ ಸಾಯುವ ಕಾಲ ತಪ್ಪದು.

ಸಂಪಾದಿಸಿ

 • ರಾವಣನ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ.

ಸಂಪಾದಿಸಿ

 • ಲಂಘನಂ ಪರಮೌಷಧೊ.

ಸಂಪಾದಿಸಿ

 • ವಾವ ರಾಯನಿಗೆ ರಾಜ್ಯವಾದರೂ ರಾಗಿ ಬೀಸೋದು ತಪ್ಪದು.
 • ವಿದ್ಯಾದನಂ ಸರ್ವಧನೇಮ ಪ್ರಧಾನಂ.
 • ವಿಧ ತಿಳಿದವನಾದರೊ ವಿಧಿ ಬಿಡದು.
 • ವಿನಾಶ ಕಾಲೇ ವಿಪರೀತ ಬುದ್ಧಿ.

ಸಂಪಾದಿಸಿ

 • ಶರಣ ಗುಣ ಮರಣದಲ್ಲಿ ನೋಡು.
 • ಶೀಲವಂತರ ಓಣಿಯಲ್ಲಿ ಕೋಳಿ ಮಾಯೆ ಯಾಯಿತು.
 • ಶೀಸದ ಉಳಿಯಲ್ಲಿ ಶೈಲ ವೊಡಿಯ ಬಹುದೇ.
 • ಶುಭಸ್ಯ ಶೀ‍ಘಂ.
 • ಶೋಧಿಸಿ ನೋಡಿದರೆ ಸುಣ್ಣವೆಲ್ಲಾ ಹೊಲಸು.
 • ಶ್ಯಾನ ಭೋಗರ ಸಂಬಳ ಸಂತೋ ಕೇಳ ಬೇಡಾ.
 • ಸಣ್ಣ ತಲೆಗೆ ದೊಡ್ಡ ಮುಂಡಾಸು.

ಸಂಪಾದಿಸಿ

 • ಸತ್ತ ಎಮ್ಮೆಗೆ ಹತ್ತು ಹಾನೆ ಹಾಲು.
 • ಸತ್ತ ಕುರಿ ಕಿಚ್ಚಗೆ ಅಂಜೀತೇ.
 • ಸತ್ತಮೇವ ಜಯತೇ.
 • ಸತ್ಯವಿದ್ದರೆ ಎತ್ತಲೂ ಭಯವೆಲ್ಲ.
 • ಸಮಯಕ್ಕಾಗದ ಅರ್ಧ ಸಹಸ್ರವಿದ್ದರೂ ವ್ಯರ್ಧ.
 • ಸಮಯಕ್ಕಾದವನೇ ನಂಟ ಕೆಲನಕ್ಕೊದಗಿದವನೇ ಬಂಟ.
 • ಸರಿಮನೆಯಾಕೆ ಸರಿಗೆ ಹಾಕಿ ಕೊಂಡರೆ ನರೆಮನೆಯಾಕೆ ಉರ್ಲು ಹಾಕಿ ಕೊಳ್ಳ ಬೇಕೇ.
 • ಸಾಧಿಸಿದರೆ ಸಬಳಾ ನುಂಗ ಬಹುದು.
 • ಸಾಯದಿದ್ದರೆ ಸಾವಿರ ಸೋಜಿಗ ಕಂಡೇನು.
 • ಸಾರಿ ದೂರಿ ಕೊಂದರೆ ಪಾಪವಿಲ್ಲ.
 • ಸಾಲವೋ ಶೂಲವೋ.
 • ಸಾವಿರ ಕುದುರೆಗೆ ಸರದಾರನಾದರೂ ಮನೆ ಹೆಂಡತಿಗೆ ಕಾಸ್ತಾರ.
 • ಸಾವಿರ ಜನ ಹೋದ ದಾರಿಯಲ್ಲಿ ಹುಲ್ಲೂ ಬೆಳೆಯದು.
 • ಸಾವಿರ ತನಕ ಸಾಲ ಅಮೇಲೆ ಲೋಲ.
 • ಸಾವಿರ ವರ್ಷವಾದರೂ ಸಾವು ತಪ್ಪದು.
 • ಸಿಟ್ಟು ತನಗೆ ಕೇಡು ಸಮಾಧಾನ ವರರಿಗೆ ಕೇಡು.
 • ಸುಖದ ಮೇಲೆ ದುಃಖ ದುಃಖದ ಮೇಲೆ ಸುಖ.
 • ಸುಮ್ಮನಿದ್ದರೆ ಒಡಂಬಟ್ಟಾ.
 • ಸೂರ್ಯನ ಮೇಲೆ ಸುರೇ ಚೆಲ್ಲಿದರೆ ಮೋರೇ ಮೇಲೆ ಬೀಳುವದು.
 • ಸೂಳೆಗೆ ಕೊಟ್ಟ ಹಣ ಸುಡುಗಾಡಿಗೆ ವೈದಹಣ.
 • ಸೂಳೆ ಬಾಗಲಿಗೆ ಆನೆ ಕಟ್ಟದರೆ ಸಿಂದ.
 • ಸೂಳೆ ಯಾರಿಗೆ ಹೆಂಡತಿ ಧೊರೆ ಯಾರಿಗೆ ಅಪ್ಪ.
 • ಸೋದರ ಅತ್ತೆಗೆ ಮೀಸೆ ಬಂದರೆ ಚಿಕ್ಕಪ್ಪ ಅನ್ನಿಸಿ ಕೊಂಡಾಳೇ.
 • ಸಂಕಟ ಬಂದರೆ ವೆಂಕಟರಮಣ.
 • ಸಂಕ ಮುರಿದಲ್ಲೇ ಸ್ಸಾನ.
 • ಸಂಗತಿ ದೋಷ ಕೊರಳಿಗೆ ದೊಣ್ಣೆ.

ಸಂಪಾದಿಸಿ

 • ಹಗ್ಗಕ್ಕೆ ಹಾರದ ಮೂಳೆ ಸಗ್ಗಕ್ಕೆ ಹಾರೇನು ಅಂದ.
 • ಹಣ ಕಂಡರೆ ಹೆಣ ಬಾಯಿ ಬಿಡುತ್ತೆ.
 • ಹಣವಿದ್ದವನಿಗೆ ಗುಣವಿಲ್ಲಾ ಗುಣವಿದ್ದವನಿಗೆ ಹಣವಿಲ್ಲಾ.
 • ಹಣವಿಲ್ಲದವ ಹೆಣಕ್ಕಿಂತ ಕಡೆ.
 • ಹಣ್ಣು ಜಾರಿ ಹಾಲಲ್ಲಿ ಬಿದ್ದ ಹಾಗೆ.
 • ಹಣ್ಣೆಲೆ ಉದುರುವಾಗ ಕಾಯೆಲೆ ನಗುವದು.
 • ಹಣ್ಣೆಂದು ಶಲಭ ದೀಪದ ಮೇಲೆ ಬಿದ್ದು ಸತ್ತ ಹಾಗೆ.
 • ಹತ್ತರ ಹುಲ್ಲು ಕಡ್ಡಿ ಒಬ್ಬನ ತಲೆ ಹೊರೆ.
 • ಹತ್ತು ಕಲ್ಲು ಎಸೆದರೆ ಓಂದಾದರೂ ತಗಲುವದು.
 • ಹತ್ತು ದುಡಿಯೋದು ನಿನ್ನಿಂದ ಮತ್ತೆ ನೋಡೋದು ನನ್ನಿಂದ.
 • ಹತ್ತು ಮಂದಿಯ ತಾಯಿ ಹೊಳೆಯಲ್ಲಿ ಬಿದ್ದು ಸಾಯಿ.
 • ಹತ್ತು ಮಂದಿಯ ಮಾತು ಮೀರ ಬೇಡಾ ರಾಯರಿಗೆ ಬೇವರಿಗೆ ಸುಳ್ಳಾಡ ಬೇಡಾ.
 • ಹನಿ ಕೂಡಿ ಹಳ್ಳ ತೆನೆ ಕೂಡಿ ಭತ್ತ.
 • ಹಬೆಗೆ ತಾಖದೆ ಉರಿಯೊಳಗೆ ಬಿದ್ದಾ.
 • ಹರಿದದ್ದೇ ಹಳ್ಳ ಉಳಿದದ್ದೇ ತೀರ್ಥ.
 • ಹರಿಯುವವರೆಗೆ ಎಳೆಯ ಬಾರದು ಮುರಿಯಿವವರೆಗೆ ಬೊಗ್ಗಿಸ ಬಾರದು.
 • ಹಲವು ಸಮಗಾರರು ಕೂಡಿ ತೊಗಲು ಹದಾ ಕೆಡಿಸಿದರು.
 • ಹಲ್ಲಿದ್ದಾಗಲೇ ಕಡಲೇ ತೆನ್ನ ಬೇಕು.
 • ಹಸಿವಿಗೆ ಸಾಗರ ಬೇಡ ನಿದ್ದೆಗೆ ಹಾಸಿಗೆ ಬೇಡಾ.
 • ಹಳ್ಳಿ ಕುರುಬರಿಗೆ ಗಾತೇ ಮಾಣಿಕ್ಯ.
 • ಹಳ್ಳಿ ದೇವರಿಗೆ ಕೊಳ್ಳಿ ದೀಪ ಹಾಡಿ ದೇವರಿಗೆ ಸೂಡಿ ದೀಪ.
 • ಹಳ್ಳಿಯವರು ದೊಂಬಿ ಮಾಡಿದರೆ ಪೇಟೆಯವರು ದೇಡಾ ತೆತರು.
 • ಹಾಗದ ಕೋತಿ ಮುಪಾದ ಬೆಲ್ಲ ತಿಂದಿತು.
 • ಹಾಡಿದ್ದೇ ಹಾಡುವದು.
 • ಹಾದಿ ಜಗಳ ಹಣ ವಡ್ಡಕ್ಕೆ ಕೊಂಡ ಹಾಗೆ.
 • ಹಾಲಿದ್ದಾಗಲೇ ಹಬ್ಬಾ ಮಾಡು.
 • ಹಾಲು ಕಂಡಲ್ಲಿ ಬೆಕ್ಕು ಕೂಳು ಕಂಡಲ್ಲಿ ನಾಯಿ.
 • ಹಾವಿಗೆ ಹಾಲೆರೆದರೆ ತನ್ನ ವಿಷ ಬಿಟ್ಟೀತೇ.
 • ಹಾವಿನ ಕೂಡೆ ಕಪ್ಪೆಗೆ ಸರಸವೇ.
 • ಹಾಸಿಗೆ ಅರಿತು ಕಾಲು ನೀಡ ಬೇಕು.
 • ಹಾಳು ತೋಟಕ್ಕೆ ನೀರು ಹಾಕಿ ಬೀಳು ರೆಟ್ಟೆ ಬಿದ್ದು ಹೋಯಿತು.
 • ಹಿರಿಯಕ್ಕನ ಚಾಳಿ ಮನೆ ಮಂದಿಗಿಲ್ಲಾ.
 • ಹುಚ್ಚು ತಿಳಿಯಿತು ಒನಕೆ ತಾ.
 • ಹೆತ್ತವರಿಗೆ ಕೋಡಗ ಮುದ್ದು.
 • ಹೆಂಡತಿಯ ದೆಸೆಯವರು ಉಂಡರೋ ಕೇಳ ಬೇಡಾ
 • ಹೊಟ್ಟು ಕುಟ್ಟ ಕೈಯಲ್ಲಿ ಗುಳ್ಳೆ.
 • ಹೊಲೆಯನ ಸಂಗ ಉಪ್ಪಿನ ಕಾಯಿಗೆ ಕೇಡು.
 • ಹಂಗಾಳಾದ ಮೇಲೆ ಮಂಗನ ಹಾಗೆ ಮಾಡಬೇಕು.
 • ಹಂದಿ ಹಾದವನಿಗೆ ಕಗ್ಗಲ್ಲು ಕಂಡರೆ ಭಯ.
 • ಹಂಸೇ ಹಾಗೆ ನಡಿಯಲಿಕ್ಕೆ ಹೋಗಿ ಗುಬ್ಬಿ ಕುಪ್ಪಳಿಸಿಬಿತ್ತು.