ಕಬೀರ್ ದಾಸ್
- ಮಾತಿನ ಬೆಲೆ ತಿಳಿದವರು, ಮಾತನ್ನು ಮೊದಲು ಹೃದಯದ ತಕ್ಕಡಿಯಲ್ಲಿ ತೂಗಿ, ಆನಂತರ ಹೊರಗೆ ಹಾಕುತ್ತಾರೆ.
- ಬೇಡುವುದಕ್ಕಿಂತ ಸಾಯುವುದು ಲೇಸು.
- ಸಹಜವಾಗಿ ಸಿಕ್ಕಿದ್ದು ಹಾಲಿಗೆ ಸಮ. ಬೇಡಿದ ಬಳಿಕ ದೊರೆತದ್ದು ನೀರಿಗೆ ಸಮ, ಎಳೆದಾಟದಿಂದ ದೊರೆತದ್ದು ರಕ್ತಕ್ಕೆ ಸಮ.
- ಕೆಟ್ಟವರನ್ನು ನೋಡಲು ಹೋದೆ, ನನಗೆ ಕೆಟ್ಟವರಾರು ಸಿಗಲಿಲ್ಲ. ನನ್ನ ಹೃದಯ ತೋರಿಸಿದೆ, ನನಗಿಂತ ಕೆಟ್ಟವರಾರೂ ಇಲ್ಲವೆಂದು ತಿಳಿಯಿತು.