ಕಾರ್ಯ ಕುಶಲನಾದ ಮನುಷ್ಯನಿಗೆ ಯಶಸ್ಸು ಮತ್ತು ಹಣಕ್ಕೆ ಕೊರತೆ ಇರುವುದಿಲ್ಲ. - ೦೪:೫೦, ೨೧ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಹಳೆಯದು ಎಂದರೆ ಎಲ್ಲವೂ ಶ್ರೇಷ್ಠವಲ್ಲ, ಹೊಸತು ಎಂದ ಮಾತ್ರಕ್ಕೆ ತಿರಸ್ಕರಿಸಬೇಕಿಲ್ಲ. ತಿಳಿದವರು ಎರಡನ್ನೂ ಪರೀಕ್ಷಿಸಿಯೇ ಒಪ್ಪುತ್ತಾರೆ. ಮೂರ್ಖರಾದವರು ಈ ವಿಷಯದಲ್ಲಿ ಅವಿಚಾರಿಗಳಾಗಿರುತ್ತಾರೆ. - ೦೫:೧೮, ೧೨ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಗುರಿ ಮುಟ್ಟಲು ನಿರ್ಧರಿಸಿರುವ ಮನಸ್ಸನ್ನು, ಇಳಿಜಾರಿನಲ್ಲಿ ಹರಿಯುವ ನೀರನ್ನು ಯಾರು ತಾನೇ ತಡೆಯಲು ಸಾಧ್ಯ? - ೦೭:೩೯, ೧೦ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಇಂದಿನ ದಿನವನ್ನು ಚೆನ್ನಾಗಿ ಬದುಕಿದರೆ ನಿನ್ನೆಗಳು ಸುಂದರ ನೆನಪಾಗುತ್ತವೆ, ನಾಳೆಗಳು ಭರವಸೆಯ ಬೆಳಕಾಗುತ್ತವೆ. - ೦೮:೧೭, ೨೮ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಮನಸ್ಸನ್ನು ಚಂಚಲಗೊಳಿಸುವ ವಸ್ತು ಎದುರಿರುವಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲವೋ ಅವರೇ ಲೋಕದಲ್ಲಿ ಧೀರರು. - ೧೦:೪೩, ೨೭ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಆಸೆ ಇಲ್ಲದವನಿಗೆ ಜಗತ್ತೇ ತೃಣಸಮಾನ.
ದುರ್ಜನರು ಉಪಕಾರದಿಂದಲೇ ಶಾಂತರಾಗುವುದಿಲ್ಲ.
ಹುಲ್ಲು ಕೂಡ ಆಹಾರವಾಗಿ ಹಸುಗಳಿಗೆ ಒದಗುತ್ತದೆ. ಉಪಕಾರ ಬುಧ್ಧಿ ಇಲ್ಲದ ಮನುಷ್ಯ ಹುಲ್ಲಿಗಿಂತ ಕೀಳು.
ರತ್ನವನ್ನು ಇತರರು ಹುಡುಕಿಕೊಂಡು ಹೊಗುತ್ತಾರೆಯೇ ಹೊರತು ರತ್ನವೇ ಇತರರನ್ನು ಹುಡುಕಿಕೊಂಡು ಹೋಗುವುದಿಲ್ಲ.