ಕೇಶವ ಬಲಿರಾಮ್ ಹೆಡಗೇವಾರ್

  • ದೇಶಭಕ್ತರು ಸಹಜವಾಗಿಯೇ ಹುಟ್ಟುತ್ತಾರೆ. ಅವರನ್ನು ತಯಾರಿಸಲಾಗುವುದಿಲ್ಲಿ.
  • ದೇಶಭಕ್ತಿಯ ಶಿಕ್ಷಣ ತಾಯಿಯ ಮಡಿಲಿನಿಂದಲೇ ಆರಂಭವಾಗುತ್ತದೆ. ಅದು ಸ್ವಯಂಸಿದ್ಧವಾದ ಸಂಗತಿಯಾಗಿರಲೂಬೇಕು
  • ಇಂಗ್ಲೆಂಡನ್ನು ಪರತಂತ್ರಗೊಳಿಸಿ ಅಲ್ಲಿ ರಾಜ್ಯಭಾರ ಮಾಡಬೇಕೆಂಬ ಬಯಕೆ ಇಲ್ಲ. ಆದರೆ ಇಂಗ್ಲೀಷರು ಇಂಗ್ಲೆಂಡನ್ನು ಜರ್ಮನರು ಜರ್ಮನಿಯನ್ನು ಆಳುವಂತೆ ನಾವೂ ಇಲ್ಲಿ ನಮ್ಮದೇ ಆಳ್ವಿಕೆ ಬೇಕು ಎಂದು ಅಪೇಕ್ಷಿಸುತ್ತೇವೆ. ನಮಗೆ ಪೂರ್ಣವಾದ ಸ್ವಾತಂತ್ರ್ಯಬೇಕು ಮತ್ತು ಈ ವಿಡಯದಲ್ಲಿ ಯಾವಯದೇ ರಾಜಿಗೂ ಸಿದ್ಧರಿಲ್ಲ
  • ಸ್ವಾತಂತ್ರ್ಯಕ್ಕಾಗಿ ಆಸೆ ಪಡುವುದು ನೀತಿ ಮತ್ತು ಕಾನೂನಿಗೆ ವಿರುದ್ಧವೇನು ? ನನಗಂತೂ ಕಾನೂನು ಎಂಬುದು ನೀತಿಯ ಕೊಲೆಗಾಗಿ ಇರದೆ, ಅದರ ರಕ್ಷಣೆಗಾಗಿ ಇರುತ್ತದೆ ಎಂಬ ಬಗ್ಗೆ ಪೂರಾ ಭರವಸೆಯಿದೆ
  • ರಾಷ್ಡ್ರದ ಮುಂದೆ ಸದಾ ಅತ್ಯಂತ ಶುದ್ಧ ಹಾಗೂ ಉನ್ನತವಾದ ಧ್ಯೇಯವನ್ನೇ ಇರಿಸಬೇಕು
  • ಸ್ವಪ್ರೇರಣೆಯಿಂದ ಹಾಗೂ ಸ್ವಯಂಸ್ಪ್ಫೂರ್ತರಾಗಿ ರಾಷ್ಡ್ಟ್ರದ ಸೇವೆಗಾಗಿ ತಮ್ಮನ್ನು ಮುಡುಪಾಗಿರಿಸಿರುವಂತಹ ವ್ಯಕ್ತಿಗಳು ಸಂಪೂರ್ಣವಾಗಿ ರಾಷ್ಡ್ರಕಾರ್ಯಕ್ಕಾಗಿಯೇ ಕಟ್ಡಿರುವ ಸಂಘಟನೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ
  • ಸಂಘವು ಒಂದು ವ್ಯಾಯಾಮ ಶಾಲೆಯಲ್ಲ, ಅಥವಾ ಇದೊಂದು ಕ್ಲಬ್ ಅಲ್ಲ. ಅಥವಾ ಮಿಲಿಟರಿ ಸ್ಕೂಲ್ ಅಲ್ಲ. ಸಂಘವೂ ಹಿಂದೂಗಳ ರಾಷ್ಟ್ರನಿಷ್ಠ ಸಂಘಟನೆಯಾಗಿದೆ
  • ಸಂಘವು ತನ್ನ ಗುರುವಿನ ಸ್ಥಾನದಲ್ಲಿ ವ್ಯಕ್ತಿಯನ್ನು ಇರಿಸದೆ, ನಮ್ಮ ಪರಮ ಪವಿತ್ರ ಭಗವಾ ಧ್ವಜವನ್ನೆ ಗುರುವಾಗಿ ಸ್ವೀಕರಿಸಿದೆ
  • ವ್ಯಕ್ತಿಯೊಬ್ಬ ಎಷ್ಟೇ ಶ್ರೇಷ್ಠನಿರಲಿ, ಆತನ್ನು ಎಂದಿಗೂ ಪರಿಪೂರ್ಣ ಹಾಗೂ ಶಾಶ್ವತ ಎನ್ನಲಾಗುವುದಿಲ್ಲ
  • ಯಾವುದೇ ಒಬ್ಬ ನಾಯಕನನ್ನು ಆತನೇ ಸರ್ವ ಶ್ರೇಷ್ಠನೆಂದು ಬಗೆದು ಕಣ್ಣು ಮುಚ್ಚಿಕೊಂಡು ಸ್ವೀಕರಿಸಬೇಡಿ. ವ್ಯಕ್ತಿಯ ಬಗ್ಗೆ ಪೂರಾ ಸ್ವತಂತ್ರವಾಗಿ ಯೋಚಿಸಿ ಸಾಕಷ್ಟು ತಿಳಿದ ನಂತರವಷ್ಟೇ ನಿಮ್ಮದೇ ನಿಷ್ಕರ್ಷೆಗೆ ತಲುಪಿ