• ನೂರು ಉಪದೇಶಗಳಿಗಿಂತಲೂ ಆಪತ್ಕಾಲದಲ್ಲಿ ಮಾಡಿದ ಒಂದು ಸಹಾಯವು ಶ್ರೇಷ್ಠವಾದದ್ದು.
  • ಸೂರ್ಯ, ಚಂದ್ರ ಮತ್ತು ಸತ್ಯವನ್ನು ಬಹಳ ಕಾಲ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. - ೧೪:೨೧, ೪ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಎಷ್ಟೇ ಮುಖ್ಯವಾದದ್ದಾಗಿರಲಿ, ಮತ್ತೊಬ್ಬರ ಕೆಲಸಕ್ಕಾಗಿ ತನ್ನ ಕೆಲಸವನ್ನು ಕೈಬಿಡುವುದು ಮೂರ್ಖತನವೇ ಸರಿ. - ೦೫:೩೪, ೧೬ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜೀವನದಲ್ಲಿ ನಾವೇನು ಸಾಧಿಸಿದ್ದೇವೆ ಎನ್ನುವುದು ಮುಖ್ಯವಲ್ಲ; ಇನ್ನೂ ಮಾಡುವುದೇನಿದೆ ಎಂದು ಚಿಂತಿಸುವುದು ಮುಖ್ಯ. - ೦೮:೫೯, ೧೩ ಸೆಪ್ಟೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಗತಿಸಿ ಹೋದದ್ದಕ್ಕಾಗಿ ಕಾಲಯಾಪನೆ ಮಾಡದಿರು, ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ಕೂರದಿರು, ಈ ಕ್ಷಣದ ಬಗ್ಗೆ ಮನಸ್ಸು ಕೇಂದ್ರೀಕರಿಸು. - ೧೧:೨೩, ೧೬ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬೆಂಕಿ ಇಲ್ಲದೆ ಮೇಣದ ಬತ್ತಿ ಸುಡುವುದಿಲ್ಲ. ಅಧ್ಯಾತ್ಮ ಇಲ್ಲದೆ ಮನುಷ್ಯನ ಜೀವನ ಇಲ್ಲ. - ೧೧:೦೪, ೨೭ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಮ್ಮ ಅಸುರಕ್ಷಿತ ಆಲೋಚನೆಗಳು ನಿಮಗೆ ಹಾನಿ ಮಾಡಿದಷ್ಟು, ಬದ್ಧ ವೈರಿಯೂ ಮಾಡಲಾರ. - ೦೨:೧೨, ೧೯ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸನ್ನಡತೆಯೇ ಉತ್ತಮವಾದ ವಿನಯ. - ೦೪:೫೭, ೧೯ ಏಪ್ರಿಲ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನಸ್ಸೇ ಸರ್ವಸ್ವ, ನಾವು ಏನನ್ನು ಯೋಚಿಸುತ್ತೇವೋ ಅದೇ ಆಗುತ್ತೇವೆ. - ೦೫:೪೧, ೨೧ ಏಪ್ರಿಲ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಅಸುರಕ್ಷಿತ ಆಲೋಚನೆಗಳು ನಮಗೆ ಹಾನಿ ಮಾಡಿದಷ್ಟು, ಬದ್ಧ ವೈರಿಯೂ ಮಾಡಲಾರ - ೦೭:೩೧, ೩ ಅಕ್ಟೋಬರ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾರು ಅಸಹನೆಯ ವಿಚಾರದಿಂದ ಮುಕ್ತರಾಗುತ್ತಾರೋ ಅಂಥವರಲ್ಲಿ ಶಾಂತಿ ಎನ್ನುವುದು ಸಹಜವಾಗಿ ಹುಟ್ಟುತ್ತದೆ.
  • ಪ್ರಪಂಚದಲ್ಲಿ ನಾಲಿಗೆಯ ಸವಿಗಿಂತ ಅನಿಷ್ಟವಾದುದು ಬೇರೆ ಯಾವುದು ಇಲ್ಲ.
  • ತಾಳ್ಮೆಯಿಂದ ಸಿಟ್ಟನ್ನು, ಒಳ್ಳೆಯದರಿಂದ ಕೆಟ್ಟದ್ದನ್ನು, ದಾನದಿಂದ ಜಿಪುಣತೆಯನ್ನೂ, ಸತ್ಯದಿಂದ ಸುಳ್ಳನ್ನೂ ಗೆಲ್ಲಬೇಕು.
  • ಬಹು ಜನರ ಹಿತಕ್ಕೂ, ಬಹು ಜನರ ಸುಖಕ್ಕೂ ಆಗಬೇಕು.