ನೀರಿನಲ್ಲಿ ಎಣ್ಣೆ, ವಿವೇಕಿಯಲ್ಲಿ ತಿಳಿವು ಸ್ವಶಕ್ತಿಯಿಂದ ವಿಸ್ತಾರವಾಗುತ್ತದೆ. - ೦೬:೩೨, ೯ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸೌಂದರ್ಯ ಮತ್ತು ಯೌವನವನ್ನು ಸೋಲಿಸುವ ತಾಕತ್ತು ಇರುವುದು ಜ್ಞಾನಕ್ಕೆ. - ೦೭:೧೮, ೩ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸ್ವಹಿತಾಸಕ್ತಿ ಇಲ್ಲದ ಸ್ನೇಹ ಇಲ್ಲವೇ ಇಲ್ಲ. ಇದು ಕಹಿಯಾದ ಸತ್ಯ. - ೦೫:೧೬, ೧೨ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸಾವಿರ ಹಸುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಅನುಸರಿಸಿ ಹೋಗುವಂತೆ, ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನನ್ನು ಹಿಂಬಾಲಿಸುತ್ತವೆ. - ೦೪:೫೨, ೧೯ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಭೀತಿ ಹತ್ತಿರವಾಗುತ್ತಿರುವ ಸುಳಿವು ಸಿಕ್ಕಿದ ಕೂಡಲೇ ಆಕ್ರಮಣ ಮಾಡಿ ಅದನ್ನು ನಾಶ ಮಾಡು. - ೦೬:೫೭, ೨೪ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಯಾರ ಬಗ್ಗೆ ನಿನಗೆ ದ್ವೇಷವಿದೆಯೋ ಅವನ ಬಳಿ ಮಧುರವಾಗಿ ಮತ್ತು ಹಿತವಾಗಿ ಮಾತನಾಡು. - ೦೬:೩೩, ೨೭ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ವಿದ್ಯಾವಂತನಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ವಿದ್ಯೆ ಸೌಂದರ್ಯ ಮತ್ತು ಯೌವನಕ್ಕೂ ಮಿಗಿಲಾದದ್ದು - ೦೪:೦೮, ೨೪ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಮಕ್ಕಳನ್ನು ಐದು ವರ್ಷಗಳವರೆಗೆ ಮುದ್ದಿಸಬೇಕು, ಮುಂದಿನ ಹತ್ತು ವರ್ಷಗಳವರೆಗೆ ದಂಡಿಸಬೇಕು. ಹದಿನಾರರ ವಯಸ್ಸಿಗೆ ಬಂದ ನಂತರ ಮಿತ್ರರಂತೆ ಕಾಣಬೇಕು. - ೦೫:೩೭, ೧೫ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಹೂವಿನ ಸುಗಂಧವು ಗಾಳಿ ಬೀಸಿದ ಕಡೆ ಮಾತ್ರ ಪಸರಿಸಿದರೆ, ಉತ್ತಮ ಕಾರ್ಯವು ಎಲ್ಲೆಡೆ ಪಸರಿ. - ೦೫:೪೮, ೨೩ ಡಿಸೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ವ್ಯಕ್ತಿ ಕೆಲಸದ ಮೂಲಕ ದೊಡ್ಡವನಾಗುವನೇ ಹೊರತು ಹುಟ್ಟಿನಿಂದಲ್ಲ. - ೧೭:೦೫, ೧೬ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಒಂದು ಕೆಲಸ ಹಿಡಿದ ಮೇಲೆ ಬೆನ್ನು ಹತ್ತಿ ಅದನ್ನು ಮುಗಿಸಿಬಿಡಬೇಕು. - ೧೬:೩೭, ೧ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಶ್ರಮಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಕೊನೆಗೂ ಅತ್ಯಂತ ಸಂತೋಷದಿಂದ ಇರುತ್ತಾರೆ. - ೦೬:೨೦, ೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಕೆಲಸ ಮಾಡುತ್ತಿದ್ದರೆ ಬಡತನ ಇರುವುದಿಲ್ಲ. ಮೌನವಾಗಿದ್ದರೆ ಜಗಳ ಉಂಟಾಗುವುದಿಲ್ಲ.
ಯೌವನ ಮತ್ತು ಸ್ತ್ರೀ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಶಸ್ತ್ರಗಳಾಗಿವೆ.
ಮೊದಲ ಐದು ವರ್ಷಗಳ ಕಾಲ ನಿಮ್ಮ ಮಗುವನ್ನು ಪ್ರಿಯತಮೆಯಂತೆ ನೋಡಿಕೊಳ್ಳಿ. ಮುಂದಿನ ಐದು ವರ್ಷಗಳ ಕಾಲ ಅವರನ್ನು ಗದರಿಸಿ. ಹದಿನಾರನೆ ವರ್ಷಕ್ಕೆ ಕಾಲಿಡುವಾಗ ಅವರನ್ನು ಸ್ನೆಹಿತರಂತೆ ನೋಡಿಕೊಳ್ಳಿ. ನಿಮ್ಮ ಬೆಳೆದ ಮಕ್ಕಳು ನಿಮ್ಮ ಉತ್ತಮ ಸ್ನೆಹಿತರು.
ತನ್ನ ಹಲ್ಲಿನಲ್ಲಿ ವಿಷವಿಲ್ಲದಿದ್ದರೂ ಹಾವು ತನ್ನ ಆತ್ಮ ರಕ್ಷಣೆಗಾಗಿ ಬುಸುಗುಡಲೇ ಬೇಕು.
ಯಾವ ವ್ಯಕ್ತಿ ತನ್ನ ನಿಂದನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೋ ಅವನು ಇಡೀ ಜಗದ ಮೇಲೆ ವಿಜಯ ಸಾಧಿಸುತ್ತಾನೆ.
ಜೀವನದಲ್ಲಿ ಯಾರನಾದರೂ ನಂಬು... ಆದರೆ ನಂಬುವ ಮೊದಲು ಹತ್ತು ಬಾರಿ ಯೋಚಿಸು. ಎಕೆಂದರೆ ಕೆಲವೊಂದು ಸಲ ನಮ್ಮ ಹಲ್ಲು ನಮ್ಮ ನಾಲಿಗೆಯನ್ನೇ ಕಚ್ಚಿ ಬಿಡುತ್ತದೆ.
ಯಾವ ಮನುಷ್ಯನು ತನ್ನ ಗುಟ್ಟಿನ ವಿಚಾರಗಳನ್ನು ಎಲ್ಲರೆದುರು ಹೇಳಿಕೊಳ್ಳುತ್ತಾನೋ, ಅವನು ಇರುವೆಯ ಗೂಡಲ್ಲಿ ಹಾವು ಸಿಕ್ಕಿದಂತೆ ಸಾಯುತ್ತಾನೆ.
ಹಣವಿಲ್ಲದ ಪುರುಷನನ್ನು ವ್ಯೇಶ್ಯೆ ತೊರೆಯುತ್ತಾಳೆ, ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ, ಹಣ್ಣು ಬಿಡದ ಮರಗಳನ್ನು ಪಕ್ಷಿಗಳು ತೊರೆಯುತ್ತವೆ. ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೆ ನೋಡುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಜನಗಳಿಗೆ ಬೇಕಾದ್ದು ಇದೆಯೋ ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ.
ಚಿನ್ನದ ಅಸಲಿತನವನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ವ್ಯಕ್ತಿಗಳ ಮೆಲೆ ಬರುವ ಆಪಾದನೆಗಳು ಅವರ ಅಸಲಿಯತ್ತನ್ನು ತೋರಿಸುತ್ತವೆ.
ವೈಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖವಾಗಿರಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನ ಪೂರ್ತಿ ಸುಖ ಕೊಡುತ್ತಾಳೆ. ಮನಸಿನಲ್ಲಿ ಸುಂದರವಾಗಿರುವವಳನ್ನು ಮಡದಿಯಾಗಿ ಪಡೆಯುವುದು ಒಳ್ಳೆಯದು.
ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ ಸರ್ಪ ತನ್ನ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ, ಆದರೆ ದುರ್ಜನರು ಯಾವಗಲೂ ವಿಷ ಕಾರುತ್ತಿರುತ್ತಾರೆ.
ಶಿಕ್ಷಣವನ್ನು ಪಡೆಯುವುದು ತಪಸ್ಸಿದ್ದಂತೆ. ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗ ಮಾಡಬೇಕಾಗುತ್ತದೆ.
ರಾಜ,ವೈಶ್ಯ,ಯಮ,ಅಗ್ನಿ,ಕಳ್ಳ,ಬಾಲಕ,ಯಾಚಕ ಮತ್ತು ಗ್ರಾಮ ಕಂಟಕರು ಈ ಎಂಟೂ ಜನರಿಗೆ ಬೇರೆಯವರ ದುಃಖ ತಿಳಿಯುವುದಿಲ್ಲ.
ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು.
ಒಂದು ಒಣಗಿದ ಮರವು ಬೆಂಕಿಯಾದರೆ ಇಡೀ ಅರಣ್ಯವನ್ನೇ ಸುಟ್ಟುಹಾಕುವಂತೆ, ಒಬ್ಬ ದುಷ್ಟ ಮಗ ಇಡೀ ಕುಟುಂಬವನ್ನೇ ನಾಶ ಮಾಡುತ್ತಾನೆ.
ಒಬ್ಬ ಆಸೆಬುರುಕನನ್ನು ಹಣಕೊಟ್ಟು ಕೈವಶ ಮಾಡಿಕೊಳ್ಳಬೇಕಾಗುತ್ತದೆ ಆದರೆ ಒಬ್ಬ ಸಜ್ಜನನನ್ನು ಕೈವಶ ಮಾದಿಕೊಳ್ಳಬೇಕಾದರೆ ಕೇವಲ ಸತ್ಯವನ್ನೇ ನುಡಿಯಬೇಕಾಗುತ್ತದೆ.
ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು, ಅತಿಯಾದ ದಾನ ಬಲಿಯನ್ನು ನಾಶ ಮಾಡಿತು, ಆದ್ದರಿಂದ ಅತಿಯಾಗಿ ಯಾವುದನ್ನೂ ಮಾಡಬಾರದು.
ಹೇಗೆ ಒಬ್ಬ ಕುಡುಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದಿಲ್ಲವೋ ಅದೇ ರೀತಿ ಒಬ್ಬ ಸ್ವಾರ್ಥ ಸಾಧಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದಿಲ್ಲ.
ಊಟ ಮಾಡುವಾಗ ಮಾತ್ರ ದೊಡ್ಡದಾಗಿ ಬಾಯಿ ತೆರೆಯುವ ಮನುಷ್ಯ ನೂರು ವರ್ಷದ ಸುಖವನ್ನು ಒಂದೇ ವರ್ಷಕ್ಕೆ ಪಡೆದುಕೊಳ್ಳುತ್ತಾನೆ. ಅಂದರೆ ಮೌನವೇ ಮಹಾ ಅಸ್ತ್ರ. ಮಹಾಯುದ್ಧದಿಂದ ಗೆಲ್ಲಲಾಗದ್ದನ್ನು ಮೌನದಿಂದ ಗೆಲ್ಲಬಹುದು. ಹೆಚ್ಚಿಗೆ ಮಾತಾಡಿದಷ್ಟು ಹೆಚ್ಚಿನ ಸಮಸ್ಯೆಗಳು ಮೈಮೇಲೆ ಬರುತ್ತವೆ.
ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೆ ಹೊರತು ಹುಟ್ಟಿನಿಂದಲ್ಲ.
ಲಕ್ಷ್ಮೀ,ಪ್ರಾಣ,ಜೀವನ,ಶರೀರ ಎಲ್ಲವೂ ನಶ್ವರ, ಧರ್ಮ ಮಾತ್ರ ಸ್ಥಿರ.
ಒಬ್ಬ ಗುಣವಂತ ಪುತ್ರ ನೂರು ಮೂರ್ಖ ಪುತ್ರರಿಗಿಂತ ಉತ್ತಮ. ಒಬ್ಬ ಚಂದಿರ ಮಾತ್ರ ಅಂಧಕಾರವನ್ನು ನಾಶ ಮಾಡಬಲ್ಲ. ಆದರೆ ಸಾವಿರಾರು ನಕ್ಷತ್ರಗಳು ಇದನ್ನು ಮಾಡಲು ಸಾಧ್ಯವಿಲ್ಲ.
ಪುತ್ರನಿಗೆ ಉತ್ತಮ ಶಿಕ್ಷಣವನ್ನು ಕೊಡುವುದು ತಂದೆಯ ಮುಖ್ಯ ಕರ್ತವ್ಯ.
ದುಷ್ಟರು ಮತ್ತು ಮುಳ್ಳುಗಳನ್ನು ಚಪ್ಪಲಿಗಳಿಂದ ತಿಳಿಯಬೇಕು ಅಥವಾ ಅವುಗಳ ಮಾರ್ಗದಿಂದ ದೂರವಿರಬೇಕು.
ಅನ್ನ ನೀರು ಮತ್ತು ಶುಭಾಷಿತಗಳೇ ಪೃಥ್ವಿಯ ಮೂರು ರತ್ನಗಳು, ಮೂರ್ಖರು ವ್ಯರ್ಥವಾಗಿ ಕಲ್ಲಿನ ತುಂಡಿಗೆ ರತ್ನದ ಹೆಸರನ್ನು ಕೊಟ್ಟಿದ್ದಾರೆ.
ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು, ಶಕ್ತಿಶಾಲಿಗಳನ್ನಾಗಿಸಬಹುದು, ಇಲ್ಲ ದುರ್ಬಲರನ್ನಾಗಿಸಿ ಕೊಲ್ಲಬಹುದು, ಕಾಲ ಯಾರ ಕೈಯಲ್ಲೂ ಇಲ್ಲ. ಯಾರು ಯಾರಿಗೂ ಮಿತ್ರನೂ ಅಲ್ಲ ಶತ್ರುವೂ ಅಲ್ಲ, ಕಾಲ ಎಲ್ಲರನ್ನೂ ಮಿತ್ರ ಶತ್ರುವನ್ನಾಗಿಸುತ್ತದೆ.
ಯಾವಾಗಲೂ ಗುಣವಓತರ ಜೊತೆ ಸ್ನೇಹ ಬೆಳೆಸುವುದು ಶ್ರೇಯಸ್ಕರ, ಯಾಕೆಂದರೆ ಹಾಲಲ್ಲಿ ನೀರು ಹಾಲಾಗುವಂತೆ, ಗುಣವಂತರ ಜೊತೆ ಸೇರಿದರೆ ನಾವೂ ಗುಣವಂತರಾಗುತ್ತೇವೆ.
ದುರ್ಬಲ ವ್ಯಕ್ತಿಯನ್ನು ಗಮನಿಸಿ ನಿರ್ಲಕ್ಷಿಸಬೇಡಿ. ಏಕೆಂದರೆ ಅವರು ಅತಿ ಹೆಚ್ಚು ಸೇಡಿನ ಮನೋಭಾವನೆಯನ್ನು ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಹವಣಿಸುತ್ತಾರೆ.
ಅವಿವೇಕಿ ಜನರಿಗೆ ಸಲಹೆ ನೀಡಬೇಡಿ, ನೀವು ಅವರನ್ನು ಸರಿಪಡಿಸಲು ಸಹಾಯ ಮಾಡುತ್ತೇವೆ ಎಂದುಕೊಂಡರೆ ಅದು ನಮ್ಮ ಮೂರ್ಖತನ.
ಮತ್ತೊಬ್ಬರ ಸಹಾಯ ಪಡೆದು ಎದ್ದೇಳುವಷ್ಟು ಮಟ್ಟಿಗೆ ಯಾವ ಸಂಬಂಧದಲ್ಲಿಯೂ ಕುಸಿದು ಬೀಳದಿರಿ.