ಚಾರ್ಲಿ ಚಾಪ್ಲಿನ್
- ಬದುಕು ಎಂಬುದಕ್ಕೆ ವ್ಯಾಖ್ಯಾನ ಏಕೆ ಬೇಕು. ಬದುಕು ಎಂಬುದು ಒಂದು ಆಸೆಯೇ ಹೊರತು, ಅರ್ಥವಲ್ಲ. - ೦೭:೦೪, ೧೫ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕನ್ನಡಿ ನನ್ನ ನಿಜವಾದ ಸ್ನೇಹಿತ ಏಕೆಂದರೆ ಅದರ ಮುಂದೆ ನಾನು ಅತ್ತರೆ ಅಳುವುದು ನಕ್ಕರೆ ನಗುವುದು.
- ನನಗೇ ನನ್ನ ಕಣ್ಣೀರೇ ಆತ್ಮೀಯ ಗೆಳೆಯ. ಏಕೆಂದರೆ ನನ್ನ ನೋವು ಅರ್ಥ ಆದ ತಕ್ಷಣ ಅದು ಬಂದುಬಿಡುತ್ತದೆ.
- ನಗುವಿಲ್ಲದ ದಿನವನ್ನು ನೀವು ಕಳೆದಿರಿ ಎಂದರೆ ಆ ದಿನವನ್ನು ನೀವು ವ್ಯರ್ಥ ಮಾಡಿದಂತೆ.
- ನನ್ನ ಜೀವನದಲ್ಲಿ ನಾನಾ ಬಗೆಯ ಸಂಕಷ್ಟಗಳಿಗೆ ಗುರಿಯಾಗಿರುವೆ. ಆದರೆ ನನ್ನ ತುಟಿಗಳಿಗೆ ಅದು ಗೊತ್ತೇ ಇಲ್ಲ. ಅವು ಯಾವಾಗಲೂ ನಗುತ್ತಲೇ ಇರುತ್ತವೆ.