ನಂಬಿಕೆ, ರಾಷ್ಟ್ರೀಯತೆ ಮತ್ತು ಸಂಪ್ರದಾಯದ ಮೂಲಕ ಇತರ ಮಾನವಕೋಟಿಯಿಂದ ನಿನ್ನನ್ನು ನೀನು ಪ್ರತ್ಯೇಕಿಸಿಕೊಳ್ಳುವುದು ಹಿಂಸೆಗೆ ಎಡೆ ಮಾಡುತ್ತದೆ. - ೦೬:೧೨, ೧೮ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉತ್ತರ ಅದರ ಒಳಗಿಂದಲೇ ಸಿಗುತ್ತದೆ. ಏಕೆಂದರೆ ಉತ್ತರ ಸಮಸ್ಯೆಯಿಂದ ಬೇರೆಯಲ್ಲ. - ೦೭:೫೭, ೧೮ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಸತ್ಯ ಪಥವಿಲ್ಲದ ತಾಣ. ಸತ್ಯವನ್ನು ಅರಿಯಲು ಸಂಘಟನೆ ಬೇಕಿಲ್ಲ.
ಇರುವುದನ್ನು ಸ್ವೀಕರಿಸದೆ ಇರುವದೇ ಭಯ.
ಅಂಜಿಕೆ ಬುದ್ಧಿವಂತಿಕೆಯನ್ನು ಕ್ಷುದ್ರಗೊಳಿಸುತ್ತದೆ. ಮಾನವನ ಸ್ವಾರ್ಥಮಯ ಕಾರ್ಯಗಳಿಗೆಲ್ಲಾ ಅಂಜಿಕೆಯೇ ಕಾರಣ.
ನಿಮ್ಮನ್ನು ಅರಿಯಲು ಯಾವುದೇ ಗುರು, ಪುಸ್ತಕ ಹಾಗೂ ಮನಶ್ಯಾಸ್ತ್ರಜ್ಞರ ಹತ್ತಿರ ಹೋಗಬೇಕಾಗಿಲ್ಲ, ನಿಮ್ಮ ಅಂತರಂಗದಲ್ಲಿ ನಿಮ್ಮನ್ನು ಅರಿಯುವ ಸರ್ವಸಂಪತ್ತು ಹುದುಗಿದೆ.
ನೀವೇ ಜಗತ್ತು. ನೀವು ಬದಲಾಗದೆ ಯಾವುದು ಬದಲಾಗದು.
ನನಗೆ ಕೇವಲ ಒಂದೇ ಉದ್ದೇಶವಿದೆ. ಅದುವೇ ಮಾನವನನ್ನು ಮುಕ್ತನನ್ನಾಗಿಸುವದು. ಈ ಮುಕ್ತಿಯೆಡೆಗೆ ಸಾಗಲು ಮಾನವನನ್ನು ಹುರಿದುಂಬಿಸುವದು. ಎಲ್ಲ ಬಂಧನಗಳನ್ನು ಕಿತ್ತೆಸುವದು. ಸಹಾಯ ಮಾಡುವದು. ಏಕೆಂದರೆ ಇದುವೇ ಮಾನವನಿಗೆ ಅನಂತವಾದ ಸುಖ ಕೊಡುವುದು.