ಪ್ರತಿಫಲದ ಅಪೇಕ್ಷೆಯಿಲ್ಲದೆ ಕೇವಲ ಆತ್ಮತೃಪ್ತಿಗಾಗಿ ಕೆಲಸ ಮಾಡಿದಾಗ, ಮೋಸ ಹೋದಾಗಲೂ ದುಃಖವಾಗುವುದಿಲ್ಲ. - ೧೮:೧೭, ೨೪ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರೋ ಅಥವಾ ಬೇರೆಯವರ ಕಣ್ಣೀರೋ! - ೦೫:೦೧, ೨೦ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಿರ್ಭಯವೂ, ನಿಷ್ಪಕ್ಷಪಾತವೂ ಆದ ಜಗತ್ಸತ್ಯಾನ್ವೇಷಣೆಯೇ ವಿಜ್ಞಾನ. - ೧೭:೫೫, ೨೭ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಮ್ಮ ಬಾಳು ನಿತ್ಯದ ಕುಸ್ತಿ. ಅದಕ್ಕೆ ನಾವು ಹತ್ತೆಂಟು ಕೈಪಟ್ಟು, ಕಾಲು ವರಸೆಗಳನ್ನು ಅಭ್ಯಾಸ ಮಾಡಿಕೊಂಡಿರಬೇಕು. - ೧೬:೩೬, ೧೦ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಮ್ಮ ಸ್ವಭಾವ, ಸಂದರ್ಭ– ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು, ತಕ್ಕ ದಾರಿ ಯಾವುದು ಎಂಬುದನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು. - ೧೪:೫೫, ೫ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು.kannadahanigalu.com
ವಿದ್ವತ್ತು ಸಂತೆಯ ಸರಕಾಗಲೊಲ್ಲದು. ಸಂತೆಗೆ ವಿದ್ವತ್ತಿನ ಬೆಲೆ ತಿಳಿಯದು.
ಮನಸ್ಸೇ ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸದ ಹೊರತು ಇನ್ನಾವುದೂ ಸರಿಯಾಗಲಾರದು. - ೦೧:೫೧, ೧೮ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಹೊಸತನವೇ ಬಾಳು. ಹಳಸಿಕೆಯೆಲ್ಲ ಸಾವು ಬಿಡು.- ೦೩:೩೨, ೩೦ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಇರುವ ಭಾಗ್ಯವ ನೆನೆದು ಬಾರನೆಂಬುವುದನ್ನು ಬಿಡು ಹರುಷಕ್ಕಿದೆ ದಾರಿ.
ಒಳ್ಳೆಯ ಮಾತುಗಳನ್ನು ಆಡಿದರೆ ಸಾಲದು.ಆ ಮಾತುಗಳು ಒಳ್ಳೆಯ ಕೆಲಸಕ್ಕೆ ಉತ್ತೇಜನ ನೀಡುವಂತೆ ಇರಬೇಕು.
ಕರ್ತವ್ಯವನ್ನು ಕುರಿತು ಮೊದಲು ಯೋಚನೆ ಮಾಡಿ,ಹಕ್ಕುಗಳು ಆಮೇಲೆ ಬರಲಿ.
ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು; ಲೋಕ ಧರ್ಮದ ಹಿತಕ್ಕಾಗಿಯಲ್ಲ.