ದಕ್ಷಿಣ ಕನ್ನಡ ಪ್ರಾಂತ್ಯದ ಹವ್ಯಕ ಭಾಷೆಯ ಗಾದೆಗಳು
- ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ?
- ಕುಂಡೆಗೆ ಹೆಟ್ಟಿ ಹಲ್ಲು ಉದುರ್ಸುಲೇ ಎಡಿಯ
- ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಪ್ರಯೋಜನಕ್ಕೆ ಬತ್ತು
- ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು
- ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ
- ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು
- ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ
- ಕಂಜಿ ಹಾಕಿರೆ ಸಾಲ, ನಕ್ಕುಲೂ ಅರಡಿಯಕ್ಕು
- ಕಾಸು ಕೊಟ್ಟು ಹೊಳೆ ನೀಂದುವ ಪಂಚಾಯತಿಗೆ ಆಗ!
- ತಲೆಲಿ ಬರದ್ದರ ಎಲೆಲಿ ಉದ್ದುಲೆ ಎಡಿಯ
- ಕೇರೆ ತಿಂಬ ಊರಿಂಗೆ ಹೋದರೆ ನಡು ತುಂಡು ತಿನ್ನಕ್ಕು
- ಬೆಲ್ಲಲ್ಲಿ ಕಡೆ ಕೊಡಿ ಇಲ್ಲೆ
- ಸೀವಿದ್ದು ಹೇಳಿ ಬೇರಿನವರೆಗೆ ಅಗಿವಲಾಗ
- ವಾಸನೆ ಬರಲೇಳಿ ಸಗಣನೀರು ಹಾಕಿದ್ದು ಶುದ್ದಾತು
- ಆನೆ ಹೋಪಗಳೂ ಗಂಟೆ ಕಟ್ಟಕ್ಕಾವುತ್ತು
- ತೌಡು ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬತ್ತ
- ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ
- ಬೆಂದಷ್ಟು ಸಮಯ ತಣಿವಲಿಲ್ಲೆ
- ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.
- ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ
- ಸ್ವರ್ಗದ ಬಾಗಿಲಿಲಿ ನರಕದ ನಾಯಿ
- ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಕೊಂಡ ಹಾಂಗೆ