- ಯಾರಿಗೇತರಲಿ ಇಷ್ಟವೋ ಅದುವೇ ಸುಖ.
- - ೧೧:೩೮, ೬ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಬ್ಬರು ಮತ್ತೊಬ್ಬರನ್ನು ತುಳಿದು ಬದುಕಬಾರದು, ತಿಳಿದು ಬದುಕಬೇಕು.!!
- ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ.
- ಸಾವಿಗೆ ನಾ ಹೆದರುವುದಿಲ್ಲ. ಯಾಕೆಂದರ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರುವುದಿಲ್ಲ.
- ಲೇಸೆ ಕೇಳಿಸಲಿ ಕಿವಿಗಳಿಗೆ, ಲೇಸೆ ಕಾಣಿಸಲಿ ಕಂಗಳಿಗೆ
- ಮನುಷ್ಯ ದುಖಃ ಬೇಕಾದಷ್ಟು ತಡೆದುಕೊಳ್ಳಬಹುದು, ಆದರೆ ಸುಖ ತಡೆದುಕೊಳ್ಳೋದು ಬಹಳ ಕಷ್ಟ.
- ಕಾಯಿಸಿದ್ದರೆ ಮರಳು ಕೂಡ ಸುಗಂಧವುಳ್ಳದ್ದಾಗುತ್ತದೆ.
- ಭಿನ್ನಮತಗಳ ಹಿಂದೇ ಒಂದೇ ಒಂದು ಬುದ್ಧಿಯನ್ನು ಕಂಡು ಹಿಡಿಯುವುದೇ ಜ್ಞಾನ
- ಜ್ಞಾನ ಎಂಬುದು ಸೂರ್ಯನ ಹಾಗೆ, ನಾವಿರುವಲ್ಲಿಗೆ ಬಂದು ನಮ್ಮನ್ನು ಕೊರೆಯುತ್ತದೆ
- ಅನ್ಯರನು ಹಾಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.
- - ೦೫:೨೬, ೧೩ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರಕೃತಿಯ ಮೇಲೆ ಮಾನವ ಗೆಲುವು ಸಾಧಿಸಿದ ಕ್ರಮಬದ್ಧ ಕಥೆಯೇ ಸಂಸ್ಕೃತಿ.
- - ೦೩:೧೦, ೨೫ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.
- ಅನ್ಯರನು ಆಳುಮಾಡದೆ, ತನ್ನ ತಾನಾಳಿದರೆ ಅದೇ ಬಿಡುಗಡೆ.
- - ೦೫:೨೬, ೬ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೊs
- ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ (ಯುಗಾದಿ)
- ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು,ತಿಳಿದು ಬದುಕಬೇಕು.
- ರಸವೇ ಜನನ, ವಿರಸ ಮರಣ, ಸಮರಸವೇ ಜೀವನ.
- ನಕ್ಕ ಸಾಯ್ರೊ, ನಕ್ಕ ಸಾಯ್ರಿ, ನಕ್ಕ ಸತ್ರ, ನಕ್ಷತ್ರ ಅಕ್ಕೀರೀ.
- ಗೆಲ್ಲುತ್ತೇನೆ ಎಂದು ಬಂದವನು ಸೋಲುವುದಕ್ಕೂ ಸಿದ್ಧವಿರಬೇಕು.
- ಸಾವಿಗೆ ನಾ ಹೆದರೋದಿಲ್ಲ. ಯಾಕಂದರ ನಾ ಇರೋತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರೋದಿಲ್ಲ.
- ನಿನ್ನೊಳಗೆ ನೀ ಹೊಕ್ಕು ನಿನ್ನ ನೀನೇ ಕಂಡು ನೀನು ನೀನಾಗು ಗೆಳೆಯ.