ಪುರಂದರದಾಸರು
- ಶಕ್ತನಾದರೆ ನೆಂಟರೆಲ್ಲ ಹಿತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು.
- ಬೆಲ್ಲದ ಕಟ್ಡೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನುಮಳೆ ಗರೆದರೆ ವಿಷ ಹೋಗುವುದೇನಯ್ಯಾ.
- ಪತಿಯನು ನಿಂದಿಸಿ ಬೊಗಳುವ ಸತಿಯು ಎಷ್ಟು ವೃತಗಳ ಮಾಡಿದರೇನು ಫಲ.
- ಕಮಲನಾಭನ ಪೊಗಳದ ಸಂಗೀತ ಗರ್ದಭ ರೋದನವೋ.
- ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ.
- ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ.
- ಧ್ಯೇಯಗಳಲ್ಲಿ ಕಲ್ಲಿನಂತಿರಬೇಕು, ಕಷ್ಟಗಳಲ್ಲಿ ಬಿಲ್ಲಿನಂತಿರಬೇಕು, ಜ್ಞಾನಿಗಳೊಡನೆ ಉತ್ತಮನಂತಿರಬೇಕು.