ಕೆ.ಎಸ್. ನಿಸಾರ್ ಅಹಮದ್
(ಪ್ರೊ. ಕೆ.ಎಸ್.ನಿಸಾರ್ ಅಹಮದ್ ಇಂದ ಪುನರ್ನಿರ್ದೇಶಿತ)
- ಕಾಲಪ್ರಜ್ಞೆ ಇಲ್ಲದವನಿಗೆ ಗಡಿಯಾರ ಬರಿ ಅಲಂಕಾರವಷ್ಟೇ.
- - ೦೩:೨೩, ೧೩ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪರಾನುಕರಣೆಯ ಪರಮಾನ್ನಕ್ಕಿಂತ ಸ್ವಸಾಧನೆಯ ಸಾರನ್ನ ಸ್ವಾದಿಷ್ಟ.
- - ೦೩:೨೩, ೩ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಂಸ್ಕೃತಿಯ ಮಹೋನ್ನತವಾದ ಮಹಲಿಗೆ ನೀತಿ ನೆಲಗಟ್ಟು, ಅನುಭವ ಆವಾರ.
- - ೧೦:೩೬, ೬ ಮಾರ್ಚ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬಾಳನ್ನು ಹಸನಾಗಿಸಿಕೊಳ್ಳಬೇಕು, ಪ್ರಹಸನವಾಗಿಸಿಕೊಳ್ಳಬಾರದು.
- ಮನುಷ್ಯನನ್ನು ಕಡೆಗಣಿಸಿ ಮಾಡಿದ ಯಾವುದೇ ಸತ್ಕರ್ಮ ನಿರರ್ಥಕ, ಅಪ್ರಯೋಜಕ.
- - ೧೮:೩೩, ೨ ಮೇ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮುಂದಿರುವ ಹುಣ್ಣಿಮೆಯ ಸೊಬಗನ್ನು ಸವಿಯದೆ, ಮುಂಬರಲಿರುವ ಅಮಾವಾಸ್ಯೆಯನ್ನು ನೆನೆದು ಕೊರಗುತ್ತಾ ಕೂರುವುದು ವಿವೇಕವೆನ್ನಿಸದು.
- - ೧೭:೫೫, ೩೧ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.