ಫ್ರಾನ್ಸಿಸ್ ಬೇಕನ್
ಪ್ರಾನ್ಸಿಸ್ ಬೆಕನ್ (22 January 1561 – 9 April 1626) ಎಲಿಜಬೆಥನ್ ಕಾಲದ ಲೇಖಕ,ತತ್ವಜ್ಞಾನಿ.
- ಓದು, ಏಕಾಂತದಲ್ಲಿ ವಿಶ್ರಮಿಸುವಾಗ ಸಂತೋಷ ಕೊಡುತ್ತದೆ; ಸಂಭಾಷಣೆಯಲ್ಲಿ ಭೂಷಣವಾಗುತ್ತದೆ; ಕೆಲಸ ಕಾರ್ಯಗಳಲ್ಲಿ ದಕ್ಷತೆ ಉಂಟುಮಾಡುತ್ತದೆ. - ೦೬:೪೪, ೧೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಾದ ಮಾಡಲು ಓದಬೇಡ; ನಂಬಲು ಓದಬೇಡ; ಮಾತನಾಡಲು ಓದಬೇಡ; ತೂಗಿ ನೋಡಲು ಓದು. - ೧೧:೧೦, ೨೦ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬರವಣಿಗೆ ನಮ್ಮನ್ನು ಕರಾರುವಾಕ್ಕಾದ ಮನುಷ್ಯರನ್ನಾಗಿಸುತ್ತದೆ. - ೧೦:೩೧, ೮ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸದ್ಗುಣವೆಂಬುದು ಸುಗಂಧ ದ್ರವ್ಯದಂತೆ. ಉರಿದಾಗ, ಅರೆದಾಗ ಸುವಾಸನೆ ಹೆಚ್ಚು. - ೦೭:೩೬, ೨೨ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸುಖದಲ್ಲೂ ಭಯ, ಅಪಾಯ ಇದೆ. ಕಷ್ಟದಲ್ಲೂ ಹಿತ, ಭರವಸೆ ಇದೆ. - ೦೪:೦೭, ೧೩ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ್ಚಿಸುತ್ತದೆ.ಹಣದ ಹಸಿವು
- ಅಧಿಕಾರಕ್ಕಾಗಿ ಆಸೆಪಟ್ಟು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಒಂದು ವಿಚಿತ್ರ ಬಯಕೆ.
- ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ನುಂಗಬೇಕು, ಎಲ್ಲೋ ಕೆಲವನ್ನು ಓದಿ, ಜೀರ್ಣಿಸಿಕೊಂಡು ಸುಖಿಸಬೇಕು. - ೦೪:೧೨, ೧೭ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ಕೀರ್ತಿ ಎನ್ನುವುದು ನದಿ ಇದ್ದಂತೆ, ಹಗುರವಾಗಿರುವ ವಸ್ತುಗಳನ್ನು ಮೇಲಕ್ಕೆ ಎತ್ತಿ ಹಿಡಿಯುತ್ತದೆ. ತೂಕದ ಮತ್ತು ಗಟ್ಟಿಯಾದ ವಸ್ತುಗಳನ್ನು ಮುಳುಗಿಸಿಬಿಡುತ್ತದೆ. - ೦೭:೦೪, ೧೦ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. - ೦೫:೧೯, ೧೭ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೊಸ ಪರಿಹಾರಗಳನ್ನು ಕಂಡುಕೊಳ್ಳದವನನ್ನು ಹೊಸ ತೊಂದರೆಗಳು ಕಾಡುತ್ತವೆ. ೧೮:೦೧, ೮ ಡಿಸೆಂಬರ್ ೨೦೧೬ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.