ಮಾನವರ ವ್ಯಕ್ತಿತ್ವಕ್ಕೆ ಗೌರವ ತೋರಿಸದ ಯಾವುದೇ ಸಮಾಜವು ದರೋಡೆಕೋರರ ಒಂದು ತಂಡ ಅಷ್ಟೆ. - ೦೫:೦೭, ೧೮ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಬದುಕಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ಬಯಸುವವರು ಬೇರೆಯವರ ತಪ್ಪುಗಳಿಂದ ಕಲಿತ ಪಾಠಗಳನ್ನು ಸಮಯೋಚಿತವಾಗಿ ಉಪಯೋಗಿಸಬೇಕು. - ೦೭:೫೯, ೨೮ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಿಮ್ಮ ಹಣೆಬರಹದ ಮೇಲೆ ನಂಬಿಕೆ ಇಡಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. - ೦೮:೧೧, ೭ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಒಳ್ಳೆಯತನ ಅಪಾಯದಲ್ಲಿದ್ದಾಗ ಹೋರಾಟಕ್ಕೆ ಇಳಿಯಲು ಹಿಂಜರಿಯಬೇಡ. - ೦೪:೩೯, ೧೭ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಮನುಷ್ಯ ಮತ್ತು ನೈತಿಕತೆ ಧರ್ಮದ ಕೇಂದ್ರವಾಗಬೇಕು. ಇಲ್ಲವಾದಲ್ಲಿ ಧರ್ಮವೆಂಬುದು ಕಠೋರ ಅಂಧಶ್ರದ್ಧೆಯೆನಿಸುತ್ತದೆ. - ೦೭:೫೫, ೧೬ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಿರಾಸಕ್ತಿ ಅತಿಕೆಟ್ಟ ಜಾಡ್ಯ. ಅದರ ಸೋಂಕು ಇತರರಿಗೂ ಹರಡುತ್ತದೆ. - ೦೨:೫೯, ೧೧ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಜೀವನ ದೀರ್ಘವಾಗಿರುವುದಕ್ಕಿಂತ ಉನ್ನತವಾಗಿರಬೇಕು. - ೧೧:೩೬, ೫ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಮ್ಮ ಕೆಲಸ ಕಾರ್ಯಗಳು ಅಸಾಧಾರಣವಾಗಿದ್ದರೆ ಮಾತ್ರ ನಮಗೆ ಮನ್ನಣೆ ದೊರೆಯುವ ಅವಕಾಶವಿರುತ್ತದೆ. - ೦೩:೦೯, ೨ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಪ್ರತಿಯೊಂದು ಆಲೋಚನೆ,ಪ್ರತಿಯೊಬ್ಬರಿಗೂ ಒಪ್ಪಿಗೆಯಾಗುವುದಿಲ್ಲ.