ಬೀಚಿ (ಬೀchi)
ಬೀchi (ಬೀಚಿ,Rayasam Bheemasena Rao) (ಏಪ್ರಿಲ್ ೨೩, ೧೯೧೩ - ಡಿಸೆಂಬರ್ ೭, ೧೯೮೦) ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.
- ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆ ಮೇಲೆ! ಬೀಚಿ
- ಜೀವನವು ಬಸ್ಸಿನ ಪ್ರಯಾಣವಿದ್ದಂತೆ, ಒಡುವಾಗ ಗಾಳಿ ಬಹಳ, ನಿಂತಾಗ ವಿಪರೀತ ಸೆಕೆ..
- ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನು ಭಿಕ್ಷುಕನೆ..
- ಶ್ರೀಮಂತಿಕೆಯ ಗುಟ್ಟು ಗಳಿಸು ಎಂಬುದಲ್ಲ, ಉಳಿಸು ಎಂಬುದು.
- ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ, ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ.
- ಶ್ರೀಮಂತನ ಕ್ಷಯವೇ, ಡಾಕ್ಟರನ ಅಕ್ಷಯ ಪಾತ್ರೆ.
- ಗೆಳೆಯನನ್ನು ಉಪ್ಪಿನಂತೆ ಬಳಸಿಕೊಳ‍್ಳಬೇಕು, ಸಕ್ಕರೆಯಂತೆ ಸುರುವಿಕೊಳ್ಳಬಾರದು.
- ಕೆಲವೇ ಜಾಣರ ಲಾಭಕ್ಕಾಗಿ, ಹಲವಾರು ಮೂರ್ಖರು ಕಟ್ಟುವ ಗುಂಪು.
- ಎಮ್ಮೆಗು MLAಗೂ ಎನು ವ್ಯತ್ಯಾಸ?? ಎಮ್ಮೆ ತಿರುಗಾಡಿ ಮೇಯುತ್ತದೆ. MLA ಕುಳೆತಲ್ಲೇ ಮೇಯುತ್ತಾನೆ...
- ಮಾಡಬಹುದಾದಾಗ ಮಾಡದಿದ್ದರೆ, ಮಾಡಲೇಬೇಕಾದಾಗ ಮಾಡಲಾಗುವುದಿಲ್ಲ.
- ಮೂಕನ ಮಾತೃಭಾಷೆಯೇ ಮೌನ.
- ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ಕಟ್ಟಿದವನಿಗೆ ಜೀವಾವಧಿ ಶಿಕ್ಷೆ.
- ಹೆಣ್ಣು ಚಿನ್ನವನ್ನು, ರಾಜಕಾರಣಿ ಅಧಿಕಾರವನ್ನು, ಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ...
- ಹಲವರು ಹೆಚ್ಚು ಕಷ್ಟಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು ಉಂಡು ಕಷ್ಟ ಪಡುತ್ತಾರೆ.
- ಕೆಲಸವಿಲ್ಲದೆ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂಡುತ್ತಾನೆ.
- ರಜೆಯ ಮೇಲೆ ಬಂದಾಗ, ಕಳ್ಳರು ತಂಗುವ ಗೌರ್ಮೆಂಟ್ ಗೆಸ್ಟ್ ಹೌಸ್-ಜೈಲು.
- ಗಡ್ಡ ದೊಡ್ಡತನದ ಗುರುತಾಗಿದ್ದರೆ, ಮೇಕೆಯೇ ಮುಖ್ಯಮಂತ್ರಿಯಾಗಬೇಕಿತ್ತು...
- ಗಂಡನ ಮುಖ, ಹೆಂಡತಿಯ ಮನಸ್ಸಿನ ಕನ್ನಡಿ.
- ಪ್ರತಿಯೊಬ್ಬ ಜಾಣನಿಗೂ ಅಹಂಕಾರವಿದ್ದೇ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ...
- ಜಾಣರು ಗುದ್ದಾಡಿದರೆ ಚರ್ಚೆ ಆಗುತ್ತದೆ, ದಡ್ಡರು ಚರ್ಚೆ ಮಾಡಿದರೆ ಗುದ್ದಾಟ ಆಗುತ್ತದೆ...
- ಎಲ್ಲಾ ಹುಚ್ಚರದು, ಒಂದೇ ವಾದ ನಾನು ಹುಚ್ಚನಲ್ಲಾ..
- ಸಾರಾಯಿ ನಿಷೇಧ, ಕುಡಿದವರಿಗೆ ಮಾತ್ರ..
- ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
- ಹಸಿದ ಹೊಟ್ಟೆಗೆ, ಉಕ್ಕುವ ಪ್ರಾಯಕ್ಕೆ, ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ.
- ತಾನು ಮರೆತುದನ್ನು ಇತರರಿಗೆ ಕಲಿಸುವವನೇ ಮಾಸ್ತರ..
- ವಿವೇಕಿಯ ನಾಲಿಗೆ ಹೃದಯದಲ್ಲಿದೆ, ಅವಿವೇಕಿಯ ಹೃದಯವು ನಾಲಿಗೆಯಲ್ಲಿದೆ.
- ದೇವನೆಂಬ ಧಣಿಗೆ, ಮನುಷ್ಯನು ಕೊಡಬೇಕಾದ ಬಾಕಿ-ಕರ್ತವ್ಯ.
- ಸತ್ಯವನು ಅರಿತವನು, ಸತ್ತಂತೆ ಇರಬೇಕು...
- ಮದುವೆ ಹೇಗಾಯಿತು ಎಂಬುದಕ್ಕಿಂತ, ಮದುವೆ ಆದವರು ಹೇಗೆ ಬಾಳುವರು ಎಂಬುದು ಮುಖ್ಯ..
- ಹಸಿವು ಚೆನ್ನಾಗಿದ್ದರೆ, ಊಟ ಚೆನ್ನಾಗಿಯೇ ಇರುತ್ತದೆ.
- ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು, ನಿನ್ನೆ, ಇವತ್ತು ಮತ್ತು ನಾಳೆ.
- ಮನೆಯಾಕೆ ಸೃಷ್ಟಿಸುವ ವಾತಾವರಣವೇ.. ಮನೆಯ ವಾತಾವರಣ.
- ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು...
- ಡಾಕ್ಟರರ ಸುತ್ತ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತ ಕೆಟ್ಟವರೇ ಇರುತ್ತಾರೆ.
- ಸಾವಿಗೆ ತಾರತಮ್ಯವಿಲ್ಲ.
- ಬದುಕಿರುವಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ ಕೊಡುತ್ತಾನೆ..
- ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆಯ ಗುಣ ಹೆಂಡತಿಗೆ ಕಾಣುವುದಿಲ್ಲ.
- ಅಹಂಕಾರ ಅವಿವೇಕಿಗಳ ಆಸ್ತಿ...
- ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಬೇಕಾದರೆ, ಇರುವ ಒಂದೇ ಉಪಾಯ ಯಾವುದನ್ನೂ ಆಶಿಸಲೇಬಾರದು...
- ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂ ಸೊಪ್ಪು ಹಾಕುವುದಿಲ್ಲ.
- ತಿಳಿಯಬೇಕಾದ್ದು ಸಮುದ್ರದಷ್ಟು, ತಿಳಿದಿರುವುದು ಹನಿಯಷ್ಟು.
- ಜೀವನೋಪಾಯಕ್ಕಾಗಿ ಅಲ್ಲ, ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ ಹವ್ಯಾಸ...
- ಮಾವನ ಮನೆ ಸೇರೋ ಗಂಡ, ಗಂಡನ ಮನೆಗೆ ಬಾರದ ಹೆಣ್ಣು, ಇಬ್ಬರೂ ಭೂಮಿಗೆ ಭಾರ...
- ಚಿಕ್ಕ ಮಗು ಮಾತು ಮಾತಿಗೆ ಕೇಳುವ ಏಕೆಯಲ್ಲಿಯೆ ಎಲ್ಲ ತತ್ವಜ್ಞಾನದ ತತ್ವವು ಅಡಕವಾಗಿದೆ.
- ಬಳಸಿದಂತೆಲ್ಲಾ ಬೆಳೆಯುವ ಅಕ್ಷಯ ಪಾತ್ರೆ ನಗು.
- ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಮಾಣಿಕನಿಗೆ ರಾಜಕಾರಣ-ಅತ್ಯುತ್ತಮ ಆಯುಧಗಳು.
- ಒಂದು ಕೆಟ್ಟ ಮನಸ್ಸಿಗಿಂತಲೂ, ನೂರು ಕೆಟ್ಟ ಮುಖಗಳು ಮೇಲು...
- ಜೀವನವನ್ನು ಇದ್ದಂತೆ ನೋಡುವವನಲ್ಲ, ತನಗೆ ಬೇಕಾದಂತೆ ನೋಡುವವನು-ಕಲಾವಿದ.
- ತಾಯಿಯ ಪಾದದಡಿ ಇರುವ ದಿವ್ಯ ಲೋಕವೇ ಸ್ವರ್ಗ...
- ಮುಖ ತೊಳೆಯಲು ಮಳೆಯ ನೀರು ಸಾಕು, ಮನಸ್ಸು ತೊಳೆಯಲು ಕಣ್ಣೀರೇ ಬೇಕು.
- ಮತಗಳನ್ನಾಗಲಿ, ಮಗಳನ್ನಾಗಲಿ ಅಯೋಗ್ಯರಿಗೆ ಕೊಡಬಾರದು.
- ಬಡವನ ಏಕಮಾತ್ರ ಸಂಪತ್ತು ಬುದ್ಧಿ.
- ಕೀರ್ತಿ-ಇದನ್ನು ಗಳಿಸಲು ಮೊದಲು ಕಷ್ಟ, ನಂತರ ಉಳಿಸಲು ಕಷ್ಟ, ಕಳೆದುಕೊಂಡರಂತೂ ಕಡೆಯವರೆಗೂ ಕಷ್ಟ...
- ಮನುಷ್ಯನನ್ನು ದುಡಿಯಲು ಹಚ್ಚುವ ಏಕಮಾತ್ರ ದೇವರು ಸ್ವಾರ್ಥ...
- ಬರೆಯುವಾಗ ಅಲ್ಪವಿರಾಮ, ಪೂರ್ಣವಿರಾಮವನ್ನು ಬಿಡಬಾರದು. ಅವು ಮೂತ್ತೈದೆಗೆ ಅರಿಶಿಣ ಕುಂಕುಮ ಇದ್ದಂತೆ...
- ಮುಂದಿನ ಪೀಳಿಗೆಗೆ ಸಾಹಿತಿ ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ...
- ನೀವು ಓದಿ ಇಂಜಿನಿಯರ್ ಆಗಿ ಡಾಕ್ಟರ್ ಆಗಿ ಅಥವಾ ಯಾವ ಕೆಲ್ಸಾನು ಸಿಗ್ಲಿಲ್ಲ ಅಂದ್ರೆ ಕೊನೆಗೆ ಟೀಚರ್ ಆಗಿ, ದಯವಿಟ್ಟು ರಾಜಕಾರಣಿ ಮಾತ್ರ ಆಗಬೇಡಿ. ಯಾಕಂದ್ರೆ ರಾಜಕೀಯವು ಕೆಟ್ಟ ಕಿಡಿಗೇಡಿಗಳ ಕೊನೆಯ ಉಪಾಯವಾಗಿದೆ.
- ಮಿತ್ರ ಸಂಸ್ಕೃತ ಭಾಷೆಯಲ್ಲಿ ಸಾಲವನ್ನು ಕೇಳುವ ಗೆಳೆಯ...
- ನಮಗೆ ಬೇಕಾದಾಗಲೆಲ್ಲಾ ದೇವರು ಪ್ರತ್ಯಕ್ಷವಾಗುವುದಿಲ್ಲ, ದಿಢೀರೆಂದು ದೇವರು ಪ್ರತ್ಯಕ್ಷವಾಗುವುದು ಕೇವಲ ತಮಿಳು ಸಿನೆಮಾಗಳಲ್ಲಿ ಮಾತ್ರ!
- ಪ್ರತಿಯೊಬ್ಬ ಗಂಡಸಿಗೂ ಮನೆ ಮತ್ತು ಹೆಂಡತಿ ಇರಲೇಬೇಕು.. (ಸ್ವಂತವಾದಷ್ಟು ಒಳ್ಳೆಯದು)
- ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ ಜನ್ಮದಿನ.
- ಬಾಳಿನ ವ್ಯಾಕರಣ: ಹೆಣ್ಣು-ಪದ್ಯ, ಗಂಡು-ಗದ್ಯ, ಮಕ್ಕಳು-ರಗಳೆ.
- ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ...
- ಕಣ್ಣೀರು ಸುರಿಸುವುದೊಂದೇ ಹೆಣ್ಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳು ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನು ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು...
- ಜೀವನದ ದುರಂತವಿದು, ಎಂದೋ ಬಯಸಿದುದು ಇಂದು ಸಿಗುತ್ತದೆ, ಅದು ಅವನಿಗೆ ಬೇಡವಾಗಿ ಪರರಿಗೆ ಉಪಯೋಗವಾಗುವಾಗ. ಉದಾ: ಮುಪ್ಪಿನಲ್ಲಿ ಕಿರಿಯ ಹೆಂಡತಿ.
- ಕನ್ನಡದಲ್ಲಿ ನಾಲ್ಕು ಬಗೆ-ಹೋದದ್ದು ಹಳೆಗನ್ನಡ, ಹೋಗುತ್ತಿರುವುದು ನಡುಗನ್ನಡ, ನಡೆಯುತ್ತಿರುವುದು ಬಡಕನ್ನಡ, ಬರಲಿರುವುದು ಎಬಡ ಕನ್ನಡ...
- ಬಾಳಿನಲ್ಲಿ ಏನಿಲ್ಲ? ಕೊಲ್ಲಲು ವಿಷವಿದೆ, ಬದುಕಿಸಲು ಔಷಧಿಯೂ ಇದೆ, ಔಷಧದಲ್ಲೂ ವಿಷವಿದೆ. ಇದುವೇ ಜೀವನ...