ವಾಲ್ಮೀಕಿ ಜ್ಯೋತಿ

ಸಂಪಾದಿಸಿ
 
  • ಬಂಗಾರವೇ ಬದುಕಲ್ಲ, ಬದುಕು ಬಂಗಾರದಂತಿರಲಿ.
  • ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಯಾಕೆಂದರೆ ನಿನ್ನ ಬೆನ್ನೆ ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸು, ಗೆದ್ದೇ ಗೆಲ್ಲುವೆ...
  • ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ.
  • ಸಮಯಕ್ಕಿಂತ ಶಕ್ತಿಶಾಲಿ ದೇವತೆ ಮತ್ತೊಂದಿಲ್ಲ.
  • ಬೇರೆಯವರ ಬಗ್ಗೆ ಕೆಟ್ಟ ಭಾವನೆ, ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸೆ ಮಲಿನವಾಗುತ್ತದೆ.
  • ಪ್ರಶ್ನಿಸಿದರು ಎಂದು ಕುಗ್ಗಬೇಡ, ಪ್ರಶ್ನೆ ಯಾರಾದರೂ ಕೇಳುವರು, ಸಮಯ ನೋಡಿ ಉತ್ತರ ಕೊಡುವವನೇ ಚಾಣಕ್ಯ.
  • ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಬರುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತೇವೆ. ಧರ್ಮವೆ ಈ ಪ್ರಪಂಚದ ಸಾರವಾಗಿದೆ.
  • ವ್ಯಕ್ತಿಯು ಆನೆಯನ್ನೇ ಉಡುಗೊರೆಯಾಗಿ ನೀಡುವಾಗ, ಆನೆಯನ್ನು ಕಟ್ಟುವ ಹಗ್ಗದ ಮೇಲೆ ಮನಸ್ಸಿದ್ದರೆ ಏನು ಪ್ರಯೋಜನ. ಆನೆಯನ್ನೇ ಕಳೆದುಕೊಂಡಾಗ ಹಗ್ಗದ ಮೇಲಿನ ಬಾಂಧವ್ಯದಿಂದ ಏನು ಉಪಯೋಗ.
  • ನಿಮ್ಮನ್ನು ನೇರವಾಗಿ ಸೋಲಿಸಲು ಆಗದಿದ್ದಾಗ ಅವರು ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ, ನಿಮ್ಮನ್ನು ಗೆಲ್ಲಿಸಲು ಅವರೇ ನಿಮಗೆ ಪ್ರೇರಣೆ..!!
  • ವೈರಿಯನ್ನು ಇಲ್ಲವಾಗಿಸಲು ಅವನ ತಲೆ ತೆಗೆಯಬೇಕಾಗಿಲ್ಲ. ನಮ್ಮ ತಲೆಯಿಂದ ಅವನನ್ನು ತೆಗೆದು ಹಾಕಿದರೆ ಸಾಕು.
  • ಅತಿಥಿಯು ಕೆಟ್ಟ ನಡವಳಿಕೆ ಹೊಂದಿದ್ದರೂ, ವಿವೇಚನೆಯಿಂದ ಸ್ವಾಗತಿಸಲು ಅರ್ಹ.
  • ಯಾವಾಗಲೂ ಸಂತೋಷವಾಗಿರುವುದು ಕಷ್ಟಕರವಾದ ವಿಷಯ. ಒಬ್ಬರ ಜೀವನದಲ್ಲಿ ಸುಖ ಮತ್ತು ದುಃಖಗಳು ಪರ್ಯಾಯವಾಗಿರುತ್ತವೆ. ಜೀವನದಲ್ಲಿ ನಿರಂತರವಾಗಿ ಸಂತೋಷದಿಂದಿರಲು ಎಂದಿಗೂ ಸಾಧ್ಯವಿಲ್ಲ.
  • ಅಧಿಕಾರವನ್ನು ಒಬ್ಬರ ಎದೆಗೆ ಹೊಡೆಯುವ ಬಾಣದಂತೆ ಬಳಸಬೇಡಿ. ಮತ್ತೊಬ್ಬರ ದೇಹದ ಮಾನ ಮುಚ್ಚುವ ವಸ್ತ್ರದಂತೆ ಬಳಸಿ!
  • ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಉತ್ಸಾಹಿಗಳಿಗೆ ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ.
  • ಹರಿಯುವ ನದಿಯಂತೆ, ಹೋದದ್ದು ಮರಳಿ ಬರುವುದಿಲ್ಲ.
  • ರೆಕ್ಕೆಗಳನ್ನು ಕತ್ತರಿಸಿರುವ ಹಕ್ಕಿ ಏನನ್ನಾದರೂ ಸಾಧಿಸುವುದು ಹೇಗೆ?
  • ಯಾವುದನ್ನಾದರೂ ಅತಿಯಾಗಿ ಮಾಡುವುದು, ದುಃಖಕ್ಕೆ ಕಾರಣವಾಗುತ್ತದೆ.
  • ಸತ್ಯವು ಈ ಜಗತ್ತನ್ನು ನಿಯಂತ್ರಿಸುತ್ತದೆ ಮತ್ತು ಧರ್ಮವು ಸತ್ಯದಲ್ಲಿ ಬೇರೂರಿದೆ.
  • ಕೆಲವು ವಿಷಯಗಳನ್ನು ಒಪ್ಪಿಕೊಳ್ಳುವುದು ಮತ್ತು ಇತರರನ್ನು ತಿರಸ್ಕರಿಸುವುದು ಮನಸ್ಸಿನ ಸ್ವಭಾವ; ಇದು ಬಂಧನ, ಬೇರೇನೂ ಇಲ್ಲ.
  • ದುರದೃಷ್ಟವೇ ಅತ್ಯುತ್ತಮ ಅದೃಷ್ಟ. ಎಲ್ಲರ ನಿರಾಕರಣೆಯೇ ಗೆಲುವು.