ಮಹಾತ್ಮ ಗಾಂಧಿ
ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ಹಾಗೂ ಧೀಮಂತ ನಾಯಕ ಸ್ವರಾಜ್ಯ
- ಜಗತ್ತು ಹೇಗೆ ಬದಲಾಗಬೇಕೆಂದು ಬಯಸುತ್ತೀಯೋ ಹಾಗೆ ಬದಲಾಗು
- ಕಣ್ಣಿಗೆ ಕಣ್ಣು ಎನ್ನುವುದು ಇಡೀ ವಿಶ್ವವನ್ನು ಅಂಧವಾಗಿಸುವುದರಿಂದಲೇ ಕೊನೆಗೊಳ್ಳುವುದು
- ಮಾನವೀಯತೆಯ ಮೇಲೆ ನಂಬಿಕೆ ಕಳೆದುಕೊಳ್ಳ ಬಾರದು. ಮಾನವೀಯತೆಯ ಸಾಗರ. ಕೇವಲ ಕೆಲವು ಹನಿಗಳು ಮಲಿನವಾಗಿದ್ದ ಮಾತ್ರಕ್ಕೆ ಇಡೀ ಸಾಗರವು ಮಲಿನವಾಗುವುದಿಲ್ಲ.
- ಮಾನವನು ತನ್ನ ಯೋಚನೆ ಮತ್ತು ಕ್ರಿಯೆಯ ಮೊತ್ತವಾಗಿರುತ್ತಾನೆ.
- ದೇಶದ ಸಂಸ್ಕೃತಿಯು ಜನರ ಹೃದಯ ಮತ್ತು ಆತ್ಮದಲ್ಲಿರುತ್ತದೆ.
- ಸಾಸುವೆಯಷ್ಟು ಕಾರ್ಯವು ಬೆಟ್ಟದಷ್ಟು ಪ್ರವಚನಕ್ಕಿಂತ ಉತ್ತಮ.
- ನೆಡುವಳಿಕೆಯು ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
- ಹಲವು ಬಾರಿ ಹೇಳುವುದರಿಂದ ಸುಳ್ಳು ಸತ್ಯವಾಗುವುದಿಲ್ಲ; ಹಾಗೆಯೇ ಯಾರೂ ಗುರುತಿಸದಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ.
- ದುಡಿಯದೆ ಉಣ್ಣುವವನೂ ಕಳ್ಳನೇ. - ೦೪:೫೦, ೩೦ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ. - ೧೮:೦೦, ೧೩ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾರನ್ನೋ ಮೆಚ್ಚಿಸಲು, ಯಾವುದೇ ಸಮಸ್ಯೆ ಬಾರದಂತೆ ಮಾಡಲು, ‘ಆಯ್ತು ಸ್ವಾಮಿ’ ಎನ್ನುವುದಕ್ಕಿಂತ ಶುದ್ಧ ಮನಸ್ಸಿನಿಂದ ‘ನಾನಿದನ್ನು ಮಾಡಲಾರೆ’ ಎನ್ನುವುದು ಒಳಿತು. - ೦೬:೩೨, ೧೦ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬದುಕಿದ್ದಷ್ಟು ದಿನ ಕಾರ್ಯಪ್ರವೃತ್ತನಾಗಿರಬೇಕು. - ೦೭:೨೭, ೧೨ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದೇವರಿಗೆ ಧರ್ಮವಿಲ್ಲ. - ೦೭:೨೪, ೪ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸೋಮಾರಿತನ ಅನ್ನುವುದೂ ಒಂದು ಹಿಂಸೆ - ೧೬:೪೨, ೭ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ತರ್ಕವು ಕೇವಲ ಬುದ್ಧಿಯ ವಿಷಯ. ಬುದ್ಧಿಯ ವಿಷಯವನ್ನು, ಹೃದಯ ಒಪ್ಪದಿದ್ದರೆ ಅದನ್ನು ತ್ಯಜಿಸಬೇಕು. - ೦೬:೩೧, ೧೯ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಮಕ್ಕಳಿಗೆ ಮೊದಲು ಶಿಕ್ಷಣ ನೀಡಬೇಕು. - ೦೫:೧೮, ೨೮ ನವೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸತ್ಯಶೋಧಕನು ದೂಳಿನ ಕಣಕ್ಕಿಂತಲೂ ನಮ್ರನಾಗಿರಬೇಕು. - ೦೯:೨೭, ೨೫ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದವನಿಗೆ ಹಕ್ಕುಗಳು ತಾನಾಗಿಯೇ ಲಭಿಸುತ್ತವೆ. - ೦೯:೦೦, ೨೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ವಿಚಾರಗಳನ್ನು ಮಾತೃಭಾಷೆಯಲ್ಲಿ ಸರಳವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುವಂತೆ, ಬೇರೆ ಯಾವ ಭಾಷೆಯಲ್ಲೂ ವ್ಯಕ್ತಪಡಿಸಲು ಆಗುವುದಿಲ್ಲ. - ೦೫:೧೨, ೬ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವ್ಯಕ್ತಿಯಲ್ಲಿರುವ ಅತ್ಯುತ್ತಮವಾದುದನ್ನು ಬೆಳಕಿಗೆ ತರುವುದೇ ನಿಜವಾದ ಶಿಕ್ಷಣ. - ೦೬:೦೮, ೨೮ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೀತಿ ಬಹಳ ಪ್ರಬಲವಾದ ಶಕ್ತಿ. ಆದರೂ ಅದು ನಮ್ಮ ಕಲ್ಪನೆಗೂ ಬಾರದಷ್ಟು ವಿನಮ್ರ. - ೦೫:೫೯, ೧೦ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಬೇಡಿಕೆಗಳು ಮತ್ತು ಅಪೇಕ್ಷೆಗಳು ಕಡಿಮೆ ಇದ್ದಷ್ಟೂ ನಮ್ಮ ಸುಖ–ಸಂತೋಷಗಳು ಹೆಚ್ಚುತ್ತವೆ. - ೦೭:೪೧, ೧೭ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜೀವನದ ಸಂಕಷ್ಟಗಳನ್ನು ಸಹಿಸಿಕೊಳ್ಳಲು ಅಹಿಂಸೆಯು ಒಂದು ರಚನಾತ್ಮಕವಾದ ಪ್ರೇರಕಶಕ್ತಿ ಆಗಿದೆ. - ೦೬:೩೧, ೨೨ ಜೂನ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜನಪ್ರತಿನಿಧಿಗಳ ವೈಭವದ ಜೀವನ ಪ್ರಜಾದ್ರೋಹ. ಮಂತ್ರಿಗಳಿಗೇಕೆ ಈ ಅರಮನೆಗಳು? ಈ ವಿಜೃಂಭಣೆ? - ೧೧:೨೬, ೫ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ. - ೦೮:೦೪, ೧೪ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಿಂಸೆಯ ಆಧಾರದ ಮೇಲೆ ಶಾಶ್ವತವಾದುದನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. - ೦೬:೦೨, ೩೧ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ತೋಳ್ಬಲ ಇರುವುದೇ ಹಿಂದೆ ನಾಯಕತ್ವದ ಗುಣವಾಗಿತ್ತು. ಆದರೆ ಇಂದು ಜನರೊಂದಿಗೆ ಇರುವುದೇ ನಾಯಕತ್ವ. - ೦೯:೦೯, ೭ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಗುಬ್ಬಚ್ಚಿಗಳತ್ತ ದೃಷ್ಟಿಹರಿಸಿ; ಮುಂದಿನ ಕ್ಷಣದಲ್ಲಿ ತಾವೇನು ಮಾಡುತ್ತೇವೆ ಎಂಬುದೇ ಅವಕ್ಕೆ ತಿಳಿದಿರುವುದಿಲ್ಲ. ನಾವು ಸಹ ಅಕ್ಷರಶಃ ಹಾಗೇ ಬದುಕೋಣ. - ೦೩:೩೫, ೧೦ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲಿ ಪರಸ್ಪರ ಪ್ರೀತಿ, ವಿಶ್ವಾಸವಿರುತ್ತದೆಯೋ ಅಲ್ಲಿ ಬದುಕು ಕಷ್ಟವಾಗಲಾರದು. - ೦೩:೨೩, ೧೫ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸ್ತ್ರೀ ಮತ್ತು ಪುರುಷರಲ್ಲಿ ಸ್ತ್ರೀಯರೇ ಶ್ರೇಷ್ಠ. ತ್ಯಾಗ, ಕರುಣೆ, ನಂಬಿಕೆ, ಜ್ಞಾನ ಮತ್ತು ಕಷ್ಟ ಸಹಿಷ್ಣುತೆಯ ಸಾಕಾರ ರೂಪ ಸ್ತ್ರೀ. - ೦೬:೨೬, ೧೬ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸತ್ಯ ಇದ್ದಲ್ಲಿ ಜ್ಞಾನ ಇರುತ್ತದೆ ಎಂಬುದು ನಿಜವಾದ ಸಂಗತಿ. ಸತ್ಯ ಇಲ್ಲದೆ ನಿಜವಾದ ಅರಿವು, ನಿಜವಾದ ಜ್ಞಾನ ಇರಲು ಸಾಧ್ಯ ಇಲ್ಲ. - ೦೭:೫೩, ೨೫ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆತ್ಮಸಂಯಮ ಇಲ್ಲದೆ ಸೇವೆ ಸಾಧ್ಯ ಇಲ್ಲ. - ೦೬:೦೮, ೩೦ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮನುಷ್ಯತ್ವ ಎಂಬುದು ಸಾಗರದಂತೆ. ಕೆಲ ಹನಿಗಳು ಕಲುಷಿತಗೊಂಡ ಮಾತ್ರಕ್ಕೆ ಇಡೀ ಸಾಗರವೇ ಕಲುಷಿತಗೊಳ್ಳುವುದಿಲ್ಲ. - ೦೪:೫೫, ೨೮ ಅಕ್ಟೋಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪರರಲ್ಲಿ ಪರಮಾತ್ಮನನ್ನು ಕಂಡಾಗ ಹಿಂಸೆ, ಅಸಹಿಷ್ಣುತೆ ಇನ್ನಿಲ್ಲವಾಗುತ್ತದೆ. - ೦೪:೩೯, ೧೬ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲ ಕೋರ್ಟುಗಳಿಗಿಂತಲೂ ಉನ್ನತವಾದ ಕೋರ್ಟೊಂದಿದೆ; ಅದೇ ಆತ್ಮಸಾಕ್ಷಿ. ಅದು ಇತರ ಎಲ್ಲ ಕೋರ್ಟುಗಳನ್ನೂ ಮೀರಿಸುತ್ತದೆ. - ೦೫:೦೫, ೧೯ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜನಸಮುದಾಯದೊಡನೆ ಹಂಚಿಕೊಳ್ಳಲಾಗದ ಎಲ್ಲ ವಸ್ತುಗಳೂ ನನಗೆ ತ್ಯಾಜ್ಯ. - ೦೪:೧೮, ೮ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕಣ್ಣಿಗೆ ಕಣ್ಣು ಎಂಬ ಪ್ರತೀಕಾರದ ಕ್ರಮ ಇಡೀ ಜಗತ್ತನ್ನು ಅಂಧಕಾರದಲ್ಲಿ ಮುಳುಗಿಸುತ್ತದಷ್ಟೆ. - ೦೮:೪೬, ೨೮ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾಗರಿಕತೆ ಅಂದರೆ ತಾಳ್ಮೆ, ಸಹಿಷ್ಣುಗಳ ತವರು. ಹಿಂಸೆ, ಪ್ರತಿಹಿಂಸೆಗಳ ಸಮುದ್ರ ಅಲ್ಲ. - ೧೧:೩೨, ೧೭ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶಾಲೆಯ ಪರೀಕ್ಷೆಗಳು ಅಂತಿಮವಲ್ಲ. ಆತ್ಮಸಾಕ್ಷಿಯ ಪರೀಕ್ಷೆ ಎದುರು ಉಳಿದೆಲ್ಲವೂ ಗೌಣ. - ೦೫:೦೩, ೨೧ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದುರ್ಬಲರು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮೆ ಸಬಲರ ಲಕ್ಷಣ. - ೧೫:೦೨, ೨ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶಕ್ತಿ, ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ. - ೦೫:೩೮, ೭ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರಾರ್ಥನೆ ಮಾಡುವುದೆಂದರೆ ಬರೀ ಬೇಡುವುದಲ್ಲ; ಅದು ಆತ್ಮದ ಹಂಬಲ. ಪ್ರಾರ್ಥಿಸುವಾಗ ಹೃದಯವಿಲ್ಲದ ಮಾತುಗಳಿಗಿಂತ ಮಾತಿಲ್ಲದ ಹೃದಯ ಹೊಂದುವುದೇ ಲೇಸು. - ೦೫:೫೭, ೫ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಮೊದಲಿಗೆ ಭಾರತೀಯರು. ಆನಂತರ ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಕ್ರೈಸ್ತರು... - ೦೬:೦೯, ೭ ನವೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕಣ್ಣಿಗೆ ಕಣ್ಣು ಎಂದು ಹಗೆ ಸಾಧಿಸುತ್ತಾ ಹೊರಟರೆ ಇಡೀ ಜಗತ್ತೇ ಕುರುಡಾಗಬೇಕಾಗುತ್ತದೆ. - ೦೫:೦೫, ೧೮ ನವೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬೇರೆ ಸಂಸ್ಕೃತಿಯನ್ನು ಪ್ರೀತಿಸು, ಆದರೆ ನಿನ್ನ ಸಂಸ್ಕೃತಿಯಲ್ಲೇ ಜೀವಿಸು. - ೧೦:೪೦, ೨೩ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆಸೆ ಪ್ರಾಮಾಣಿಕವಾಗಿದ್ದರೆ ಅದು ಖಂಡಿತ ಈಡೇರುತ್ತದೆ. - ೦೭:೨೬, ೧೦ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆಡಳಿತದ ಹೆಸರಲ್ಲಿ ನಡೆಯುವ ದುಂದುವೆಚ್ಚ ಮಹಾನ್ ರಾಷ್ಟ್ರದ್ರೋಹ.- ೦೭:೨೬, ೦೩ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕಾಮವು ಸುಂದರವೂ, ಉದಾತ್ತವೂ ಆದ ವಸ್ತು. ಆ ವಿಷಯದಲ್ಲಿ ನಾಚಿಕೆ ಪಡಬೇಕಾದ್ದು ಏನೂ ಇಲ್ಲ. - ೧೦:೨೦, ೧೫ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ನಮ್ಮ ಮಾತಿಗಿಂತ ನಮ್ಮ ಜೀವನವನ್ನೇ ನಮ್ಮ ವಿಷಯವಾಗಿ ಮಾತನಾಡಲು ಬಿಡುವುದು ಉತ್ತಮ. - ೧೭:೫೬, ೨೨ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅರ್ಹರ ಮುಂದೆ ವ್ಯಂಗ್ಯವಿಲ್ಲದ ತಪ್ಪೊಪ್ಪಿಗೆ ಹಾಗೂ ಮತ್ತೆ ಅದೇ ತಪ್ಪು ಮಾಡುವುದಿಲ್ಲ ಎಂಬ ಭರವಸೆಯೇ ನಿಜವಾದ ಪಶ್ಚಾತ್ತಾಪ. - ೧೦:೫೩, ೧೫ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅಹಂಕಾರಿಗೆ ಜ್ಞಾನದೀಪದ ಬೆಳಕು ಕಾಣಿಸುವುದೇ ಇಲ್ಲ. - ೦೫:೧೮, ೨೧ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೃದಯಕ್ಕೆ ಭಾಷೆ ಇಲ್ಲ. ಅದು ಬೇರೊಂದು ಹೃದಯದೊಡನೆ ಭಾಷೆ ಇಲ್ಲದೆಯೇ ಮಾತಾಡುತ್ತದೆ. - ೦೫:೧೮, ೨೫ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದುರ್ಬಲ ವ್ಯಕ್ತಿಗೆ ಇನ್ನೊಬ್ಬನನ್ನು ಕ್ಷಮಿಸುವ ತಾಕತ್ತು ಇಲ್ಲ. ಅದು ಇರುವುದು ಶಕ್ತಿವಂತನಿಗೆ ಮಾತ್ರ.
- ಧರ್ಮವನ್ನು ಬಿಟ್ಟ ರಾಜಕೀಯ ಸಾವಿನ ಬಲೆಯೇ ಸರಿ. ಏಕೆಂದರೆ ಅದು ಆತ್ಮವನ್ನು ಕೊಲ್ಲುತ್ತದೆ. - ೦೭:೫೩, ೧೯ ಡಿಸೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಧರ್ಮ ಮತ್ತು ರಾಜಕೀಯದ ನಡುವೆ ಸಂಬಂಧ ಇಲ್ಲ ಎನ್ನುವವರಿಗೆ ಧರ್ಮ ಏನೆಂಬುದು ಗೊತ್ತಿರುವುದಿಲ್ಲ. - ೦೮:೫೪, ೨ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬಲಾತ್ಕಾರವು ಉದ್ದೇಶಕ್ಕೆ ಭಂಗ ತರುತ್ತದೆ.- ೧೨:೩೩, ೧೨ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಬೇಡಿಕೆ ಮತ್ತು ಅಪೇಕ್ಷೆಗಳು ಕಡಿಮೆ ಇದ್ದಷ್ಟೂ ನಮ್ಮ ಸುಖ–ಸಂತೋಷಗಳು ಹೆಚ್ಚುತ್ತವೆ. - ೦೯:೪೭, ೨೭ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅಹಂಕಾರಿಗೆ ಜ್ಞಾನದೀಪದ ಬೆಳಕು ಕಾಣಿಸುವುದೇ ಇಲ್ಲ.- ೦೯:೧೩, ೩ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸಭ್ಯ, ಶಾಂತ ರೀತಿಯಲ್ಲೇ ನೀವು ಜಗತ್ತನ್ನು ಅಲುಗಾಡಿಸಬಹುದು.- ೦೪:೦೪, ೧೩ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಮಾಡುವ ಪ್ರತಿ ಕೆಲಸವೂ ಉತ್ತಮವಾಗಿರಬೇಕು.- ೦೧:೪೫, ೨೮ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಂಬಿಕೆಯೇ ಬಾಳಿನ ಬೆಳಕು. - ೦೯:೪೨, ೮ ಮೇ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇಂದು ನಾವೇನು ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ.- ೦೯:೩೨, ೧೯ ಮೇ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶಕ್ತಿ ದೈಹಿಕ ಬಲದಿಂದ ಬರುವುದಿಲ್ಲ. ಅದು ಬರುವುದು ಅದಮ್ಯವಾದ ಇಚ್ಛಾಶಕ್ತಿಯಿಂದ. - ೦೩:೫೮, ೧೦ ಜುಲೈ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ. - ೦೬:೫೦, ೧೨ ಸೆಪ್ಟೆಂಬರ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಉತ್ತಮ ಶಿಕ್ಷಣದ ಉದ್ದೇಶವೆಂದರೆ ಕೇವಲ ಕಲಿಸುವುದಲ್ಲ, ಕಲಿಯುವ ಆಸೆಯನ್ನೂ ಹುಟ್ಟಿಸುವುದು. ೧೮:೫೫, ೧೮ ಏಪ್ರಿಲ್ ೨೦೧೮ (UTC)ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲಿ ಪ್ರೀತಿಯಿದೆಯೋ ಅಲ್ಲೇ ಜೀವನವಿದೆ.
- ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
- ಕೆಲಸವಿಲ್ಲದೆ ಕ್ಷಣ ಕಳೆಯುವುದು ಕಳ್ಳತನ ಮಾಡಿದಂತೆ.
- ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾದ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಕೂಡ ಬದುಕಲು ಸಾಧ್ಯವಿಲ್ಲ.
- ಹೆಣ್ಣುನ್ನು ಅಬಲೆ ಎಂದು ಕರೆಯುವುದು ನಿಂದನೆ; ಗಂಡು ಹೆಣ್ಣಿಗೆ ಮಾಡಿದ ಅನ್ಯಾಯವಿದು.
- ನಮಗಾಗಿ ನಾವು ಏನು ಮಾಡುತ್ತೇವೆ ಎಂಬುದು ನಮ್ಮೊಂದಿಗೆ ಕೊನೆಗೊಳ್ಳುತ್ತದೆ..ಇತರರಿಗೆ ಏನು ಮಾಡುತ್ತೇವೆ ಎಂಬುದು ಶಾಶ್ವತವಾಗಿರುತ್ತದೆ.
- ಮನುಷ್ಯನ ಹಿರಿಮೆ ಅವನ ಮೆದುಳಿನಲ್ಲಿ ಇಲ್ಲ.ಹೃದಯದಲ್ಲಿ ಇದೆ!
- ನಿಮಗೆ ಯಾರು ಮುಖ್ಯ ಎಂಬುದನ್ನು ನೀವು ಅವರನ್ನು ಕಳೆದುಕೊಳ್ಳುವ ತನಕ ತಿಳಿದುಕೊಳ್ಳಲಾರಿರಿ.
- ಮನುಷ್ಯ ಅವನ ಯೋಚನೆಗಳ ಉತ್ಪನ್ನವಾಗಿದ್ದಾನೆ.ಅವನ ಯೋಚನೆಯಂತೆ ಅವನಾಗುತ್ತಾನೆ.
- ಆತ್ಮಸಾಕ್ಷಿ ವಿಷಯದಲ್ಲಿ ಬಹುಮತದ ಯಾವ ಕಾನೂನಿಗೂ ಜಾಗವಿಲ್ಲ!
- ಇತರರು ಹೇಳಿದ್ದನ್ನು ಅಭ್ಯಾಸ ಮಾಡುವುದು ಅಥವಾ ಅನುಕರಿಸುವುದು ಅಲ್ಲ,ನಾವು ಸರಿ ಎಂದು ನಂಬಿದ್ದನ್ನು ಮಾಡುವುದುದರಲ್ಲಿ ನಿಜವಾದ ಸಂತೋಷ ಮತ್ತು ಶಾಂತಿ ಇದೆ!
- ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ.ಆದರೆ ದುರಾಸೆಗಳನ್ನಲ್ಲ!