ಸಮಾಜವಾದದ ಸಮಸ್ಯೆಯೆಂದರೆ, ಖರ್ಚು ಮಾಡಲು ಅಂತಿಮವಾಗಿ, ಬೇರೆ ಜನರ ಹಣ ಉಳಿಯುವುದಿಲ್ಲ.
ಹುಂಜ ಜಂಭ ಪಡಬಹುದು, ಆದರೆ ಮೊಟ್ಟೆ ಇಡುವುದು ಕೋಳಿ ಮಾತ್ರವೇ
ಸತ್ಯ, ಎಂದಿಗೂ "ಅದೇ ಹಳೇ ಸುದ್ದಿಯೇ......"
ಉನ್ನತ ಸ್ಥಾನ ಏರಲು ಬಹಳ ಶ್ರಮ ಬೇಕು ಮತ್ತು ಅಲ್ಲಿ ಜಾಗ ಬಹಳ ಕಡಿಮೆ ಎಂದು ಜನರ ಭಾವನೆ. ಅದು ತಪ್ಪು. ಅಲ್ಲಿ ಅಳತೆ ಮೀರಿದಷ್ಟು ಸ್ಥಳವಿದೆ.
ಒಮ್ಮತ ಎಂದರೆ ಎಲ್ಲಾ ನಂಬಿಕೆ, ತತ್ವ, ಮೌಲ್ಯ ಮತ್ತು ನೀತಿಗಳನ್ನು ತ್ಯಜಿಸುವುದು ಅಥವಾ ರಾಜಿ ಮಾಡಿಕೊಳ್ಳುವುದೇ ಆಗಿದೆ. ಹೀಗಾಗಿ ಒಮ್ಮತ ಎಂಬುದನ್ನು ಯಾರೂ ವಿರೋಧಿಸುವುದಿಲ್ಲ ಮತ್ತು ಯಾರೂ ಪಾಲಿಸುವುದಿಲ್ಲ.
ಮಧ್ಯಮ ಮಾರ್ಗ ಉತ್ತಮವಾದುದಲ್ಲ. ಎರಡು ಬದಿಯಿಂದಲೂ ಹೊಡೆತ ಬೀಳುವ ಸಂಭವ ಹೆಚ್ಚು.
ತೋಳಿನ ಮೇಲೆ ಎದೆ ಇಟ್ಟುಕೊಳ್ಳುವುದು (ಭಾವುಕವಾಗಿ ಯೋಚಿಸುವುದು) ತಪ್ಪು. ಭಾವುಕತೆ ಎದೆಯೊಳಗಿದ್ದೇ ಹೆಚ್ಚು ಪ್ರಯೋಜಕ.
ಅಧಿಕಾರದಲ್ಲಿರಲು ಸದಾ ಸುಳ್ಳು ಹೇಳಬೇಕಿಲ್ಲ, ಆದರೆ ಜಾರಿಕೊಳ್ಳುವುದು ಆವಶ್ಯಕ.
ಸಮಾಜ ಎನ್ನುವ ವಸ್ತು ಯಾವುದೂ ಇಲ್ಲ. ನಾವು- ನೀವು ಕೂಡಿದರೆ ಅದೇ ಸಮಾಜ.