[ಶರ್ಮಾ] ಅವರು ಕೆನಡಾದ ಲೇಖಕರು ಹಾಗೂ ವೃತ್ತಿಯಲ್ಲಿ ವಕೀಲರು.
ಒಬ್ಬ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಯೊಚಿಸುತ್ತಿಲ್ಲವೆಂದರೆ, ಆತ ಸ್ವತಂತ್ರನಾಗಿದ್ದಾನೆ ಎಂದರ್ಥ.
ಎಲ್ಲಾ ಬದಲಾವಣೆಗಳು ಮೊದಲಿಗೆ ಕಷ್ಟ, ಮಧ್ಯದಲ್ಲಿ ಗೊಂದಲಮಯ ಮತ್ತು ಕೊನೆಯಲ್ಲಿ ಅತ್ಯಂತ ಸುಂದರವಾದದ್ದು.
ನಿಮ್ಮ ಜೀವನದಲ್ಲಿ ನೀವು ಯಾವುದನ್ನು ಮರಳಿ ಪಡೆಯಲು ಬಯಸುವಿರೋ ಅದನ್ನೇ ಹೆಚ್ಚಾಗಿ ನೀಡಿ.
ನಿಮ್ಮ ಬುದ್ದಿಮತ್ತೆಗಿಂತ,ನಾನು ಮಾಡಬಹುದು ಎಂಬ ಆತ್ಮವಿಶ್ವಾಸ ಮುಖ್ಯ.
ನಾವೆಲ್ಲರೂ ಇಲ್ಲಿ ಯಾವುದೋ ಒಂದು ವಿಶೇಷ ಕಾರಣಕ್ಕಾಗಿ ಇಲ್ಲಿದ್ದೇವೆ. ಕಳೆದುಹೋದ ದಿನಗಳ ನೆನಪಿನಲ್ಲಿ ಬಂಧಿಯಾಗುವುದನ್ನು ನಿಲ್ಲಿಸಿ ನಿಮ್ಮ ಭವಿಷ್ಯವನ್ನು ರೂಪಿಸುವ ಶಿಲ್ಪಿಯಾಗಿ.
ಎಲ್ಲಾ ವಿಷಯಗಳು ಎರಡು ಬಾರಿ ಪ್ರಸ್ತುತಗೊಳ್ಳುತ್ತವೆ. ಮೊದಲು ಯೋಚನೆಯಲ್ಲಿ ಇನ್ನೊಮ್ಮೆ ಕ್ರಿಯೆಯಲ್ಲಿ.
ನೀವು ಮಾಡುವ ಅತ್ಯುತ್ತಮ ಹೂಡಿಕೆಯೆಂದರೆ ಅದು ನಿಮ್ಮನ್ನು ನೀವೇ ಹೂಡಿಕೆ ಮಾಡಿಕೊಳ್ಳುವುದು. ಅದು ನಿಮ್ಮಅ ಜೀವನವನ್ನು ಮಾತ್ರ ಸುಧಾರಿಸುವುದಿಲ್ಲ ಬದಲಿಗೆ ನಿಮ್ಮ ಸುತ್ತಲಿರುವ ಎಲ್ಲರ ಜೀವನವನ್ನು ಸುಧಾರಿಸುತ್ತದೆ.
ಸಂತೋಷವೂ ಕೂಡ ಒಂದು ಪ್ರಯಾಣ, ಗಮ್ಯಸ್ಥಾನವಲ್ಲ.
ಉದಾತ್ತ ಉದ್ದೇಶಗಳಿಗಿಂತ ಚಿಕ್ಕದಾದ ಕ್ರಿಯೆಗಳು ಯಾವಾಗಲೂ ಉತ್ತಮವಾಗಿರುತ್ತವೆ.
ನಮ್ಮ ಬಗ್ಗೆ ನಾವು ಒಳ್ಳೆಯದನ್ನು ಯೋಚಿಸುವವರೆಗೆ, ಬೇರೆಯವರನ್ನು ಕೂಡ ಅವರ ಕುರಿತು ಒಳ್ಳೆಯದನ್ನು ಯೋಚಿಸುವಂತೆ ಪ್ರೇರೇಪಿಸಲು ಸಾಧ್ಯವಿಲ್ಲ.
ಹೆಚ್ಚಿನದನ್ನು ಮಾಡಲು ಮತ್ತು ಹೆಚ್ಚು ಅನುಭವಿಸಲು ನಿಮ್ಮನ್ನು ಪ್ರೇರೇಪಿಸಿಕೊಳ್ಲಿ. ನಿಮ್ಮ ಕನಸುಗಳನ್ನು ವಿಸ್ತರಿಸಲು ನಿಮ್ಮ ಶಕ್ತಿಯನ್ನು ಬಳಸಿಕೊಳ್ಳಿ, ನಿಮ್ಮ ಕನಸುಗಳನ್ನು ವಿಸ್ತರಿಸಿ, ನಿಮ್ಮ ಮನಸ್ಸಿನ ಕೋಟೆಯೊಳಗೆ ನೀವು ಅಂತಹ ಅನಂತ ಸಾಮರ್ಥ್ಯವನ್ನು ಹೊಂದಿರುವಾಗ ಸಾಧಾರಣ ಜೀವನವನ್ನು ಸ್ವೀಕರಿಸಬೇಡಿ ಬದಲಾಗಿ ನಿಮ್ಮ ಶ್ರೇಷ್ಠತೆಯನ್ನು ಸ್ಪರ್ಶಿಸಲು ಧೈರ್ಯ ಮಾಡಿ.
ಸರಳತೆಯ ಶಕ್ತಿಯನ್ನು ಎಂದಿಗೂ ಕಡೆಗಣಿಸಬೇಡಿ.
ನಿಮ್ಮ ಕಳೆದುಹೋದ ದಿನಗಳ ಬಗ್ಗೆ ಎಂದಿಗೂ ವಿಷಾದಿಸಬೇಡಿ ಬದಲಿಗೆ ಅದನ್ನು ಪಾಠವಾಗಿ ಸ್ವೀಕರಿಸಿ.
ಚಿಂತೆ ತನ್ನ ಮನಸ್ಸಿನ ಶಕ್ತಿಯನ್ನು ಬರಿದು ಮಾಡುತ್ತದೆ ಮತ್ತು ಅದು ಆತ್ಮವನ್ನು ಘಾಸಿಗೊಳಿಸುತ್ತದೆ.
ನಗು ನಿಮ್ಮ ಹೃದಯವನ್ನು ತೆರೆಯುತ್ತದೆ ಮತ್ತು ನಿಮ್ಮ ಆತ್ಮವನ್ನು ಶಮನಗೊಳಿಸುತ್ತದೆ. ನಗುವುದನ್ನೇ ಮರೆತುಬಿಡುವಷ್ಟು ಜೀವನವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು.
ಎಲ್ಲಾ ಮಹಾನ್ ಚಿಂತಕರು ಆರಂಭದಲ್ಲಿ ಅಪಹಾಸ್ಯಕ್ಕೊಳಗಾಗುತ್ತಾರೆ - ಮತ್ತು ಅಂತಿಮವಾಗಿ ಗೌರವಿಸಲ್ಪಡುತ್ತಾರೆ.
ನಾನು ಜೀವನದ ದೊಡ್ಡ ಸಂತೋಷವನ್ನು ಬೆನ್ನಟ್ಟಲು ತುಂಬಾ ಸಮಯ ಕಳೆಯುವುದನ್ನು ನಿಲ್ಲಿಸಿದ ಕ್ಷಣ ನಾನು ಚಿಕ್ಕಚಿಕ್ಕ ವಿಷಯಗಳನ್ನು ಆನಂದಿಸಲು ಪ್ರಾರಂಭಿಸಿದೆ. ಆಕಾಶದಲ್ಲಿ ನಕ್ಷತ್ರಗಳು ನೃತ್ಯ ಮಾಡುವುದನ್ನು ನೋಡುವುದು ಅಥವಾ ಅದ್ಭುತವಾದ ಬೇಸಿಗೆಯ ಬೆಳಿಗ್ಗೆ ಸೂರ್ಯನ ಕಿರಣಗಳಲ್ಲಿ ಮೈ ಒಡ್ಡುವುದು.
ನಾವು ಆಧ್ಯಾತ್ಮಿಕ ಅನುಭವವನ್ನು ಹೊಂದಿರುವ ಮನುಷ್ಯರಲ್ಲ ಆದರೆ ಮಾನವ ಅನುಭವವನ್ನು ಹೊಂದಿರುವ ಆಧ್ಯಾತ್ಮಿಕ ಜೀವಿಗಳು.
ಇತರರನ್ನು ಅಧ್ಯಯನ ಮಾಡುವವರು ಬುದ್ಧಿವಂತರು ಆದರೆ ತಮ್ಮನ್ನು ತಾವು ಅಧ್ಯಯನ ಮಾಡುವವರು ಪ್ರಬುದ್ಧರು.
ಸಮಾಜ ಏನು ಯೋಚಿಸುತ್ತದೆಯೋ ಅದರ ಕುರಿತು ನನಗೆ ಆಸಕ್ತಿಯಿಲ್ಲ. ನಾನು ನನ್ನನ್ನು ಹೇಗೆ ನೋಡುತ್ತೇನೆ ಎಂಬುದು ಮುಖ್ಯ. ನಾನು ಯಾರೆಂದು ನನಗೆ ತಿಳಿದಿದೆ ಮತ್ತು ನನ್ನ ಕೆಲಸದ ಮೌಲ್ಯ ನನಗೆ ತಿಳಿದಿದೆ.