ಸಜ್ಜನರ ಕೋಪ ನೀರಿನ ಮೇಲೆ ಗೆರೆ ಇದ್ದಂತೆ. ಕ್ಷಣದಲ್ಲಿಯೇ ಮಾಯವಾಗಿ ಬಿಡುತ್ತದೆ. - ೧೮:೨೨, ೨೨ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ನಂಬಿಕೆಯೇ ಜೀವನ, ಸಂದೇಹವೇ ಮೃತ್ಯು - ೦೬:೦೩, ೧೧ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಶ್ರೇಷ್ಠ ವಿಚಾರಗಳಿಂದ ತುಂಬಿರುವ ಪವಿತ್ರ ಗ್ರಂಥ ಓದಿದ ಮಾತ್ರಕ್ಕೇ ಮನುಷ್ಯ ಧಾರ್ಮಿಕ ವ್ಯಕ್ತಿ ಆಗುವುದಿಲ್ಲ. - ೧೦:೩೪, ೧೯ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಒಬ್ಬ ವ್ಯಕ್ತಿ ದೀಪದ ಬೆಳಕಿನಿಂದ ಭಾಗವತ ಓದಬಹುದು, ಮತ್ತೊಬ್ಬ ನಕಲಿ ದಾಖಲೆ ಸೃಷ್ಟಿಸಬಹುದು. ಆದರೆ ದೀಪಕ್ಕೆ ಏನೇನೂ ಆಗದು. ದುರುಳರು, ಸದ್ಗುಣಿಗಳು ಎಲ್ಲರ ಮೇಲೂ ಸೂರ್ಯ ಬೆಳಕು ಬೀರುತ್ತಾನೆ. - ೦೭:೧೮, ೩೧ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಪ್ರತಿಫಲಾಪೇಕ್ಷೆಯಿಲ್ಲದೆ ತೋರುವ ಪ್ರೀತಿ ಪರಿಶುದ್ಧವಾದುದು.
ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು. - ೦೫:೦೧, ೬ ಜುಲೈ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
ಫಲಭರಿತವಾದ ಮರದ ಕೊಂಬೆಗಳು ಬಗ್ಗುವುದು ಸಹಜ, ಅಂತೆಯೇ ನೀನು ಮಹಾನ್ ವ್ಯಕ್ತಿಯಾಗಬೇಕಾದಲ್ಲಿ ತಗ್ಗಿ ಬಗ್ಗಿ ನಡೆಯುವುದನ್ನು ಕಲಿ.
ಪ್ರೇಮ ಚಿಂತೆಯಂತಲ್ಲದೆ ಎಲ್ಲವನ್ನು ಪವಿತ್ರವನ್ನಾಗಿಸುತ್ತದೆ.
ಮನುಷ್ಯನ ಎಲ್ಲಾ ಸಂಬಂಧಗಳಲ್ಲಿ ಅತ್ಯಂತ ಪವಿತ್ರವಾದುದು ಪ್ರೇಮ.
ನಿನ್ನನ್ನು ನೋಡಿ ಚಪ್ಪಾಳೆ ಬಾರಿಸುವ ಹತ್ತು ಬೆರಳುಗಳಿಗಿಂತಲೂ ಕಣ್ಣೀರುವರೆಸುವ ಒಂದು ಕೈ ಮೇಲು.
ಸ್ವರ್ಗವೆಂದರೆ ಮತ್ತೇನೂ ಅಲ್ಲ ಯಾವಾಗಲೂ ಸಂತೋಷವಾಗಿರುವ ಮನಸ್ಸೇ.
ಉತ್ತಮರು ಆತ್ಮವಿಮರ್ಶೆ ಮಾಡಿಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳುತ್ತಾರೆ. ಅಧಮರು ಮಾತ್ರವೇ ಪರರ ನಿಂದನೆ ಮಾಡುತ್ತಾ ಕೆಳಗಿಳಿಯುತ್ತಾರೆ.
ಯಾವಾಗಲೂ ಒಬ್ಬರಿಗೆ ಕೊಡುವುದನ್ನು ಕಲಿತುಕೋ, ತೆಗೆದುಕೊಳ್ಳುವುದನ್ನಲ್ಲ.
ಸ್ವಾರ್ಥ ಭಾವನೆ ಇಲ್ಲದೆ ಇತರರಿಗಾಗಿ ಕೆಲಸ ಮಾಡುವುದು ನಮಗೆ ನಾವೇ ಉಪಕಾರ ಮಾಡಿಕೊಂಡಂತೆ.
ಮನುಷ್ಯನ ಮನಸ್ಸು ಯಾವಾಗಲೂ ದೇವರ ಕಡೆ ತಿರುಗಿದ್ದರೆ ಅವನು ಎಲ್ಲಾ ಅಪಾಯಗಳಿಂದಲೂ ಪಾರಾಗುವನು.
ಪ್ರಪಂಚದ ನಾಲ್ಕು ದಿಕ್ಕುಗಳಲ್ಲೂ ಸಂಚರಿಸಿ ಬನ್ನಿ ,ನಿಜವಾದ ಧರ್ಮ ನಿಮಗೆ ಎಲ್ಲಿಯೂ ಸಿಗುವುದಿಲ್ಲಏಕೆಂದರೆ ,ಅದು ಇರುವುದು ಇಲ್ಲಿ...ನಮ್ಮದೇ ಹೃದಯದಲ್ಲಿ.