- ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ, ನಿಮ್ಮ ನಡೆತೆಯು ಶುದ್ಧವಾಗಿರುತ್ತದೆ.
- ಜ್ಞಾನದ ಅರಿವನ್ನು ಬಲ್ಲವನು ಜ್ಞಾನಿಯಲ್ಲ, ಜ್ಞಾನದ ಅಳವನ್ನು ಅರಿತವನೇ ನಿಜವಾದ ಜ್ಞಾನಿ.
- ವೈಫಲ್ಯವೇ ಯಶಸ್ಸಿನ ಕೀಲಿಯಾಗಿದೆ, ಪ್ರತಿಯೊಂದು ತಪ್ಪುಗಳು ನಮಗೆ ಏನನ್ನಾದರು ಕಲಿಸುತ್ತದೆ.
- "ಎಲ್ಲವನ್ನೂ ನಾನೇ ಮಾಡುವವನು" ಎಂಬ ಅಂಹಕಾರ ತೊರೆದು, "ನಾನು ನಿಮಿತ್ತ ಮಾತ್ರ" ಎಂಬುದನ್ನು ಅರಿತಾಗ ಮಾನವ ಪರಿಪೂರ್ಣನಾಗುತ್ತಾನೆ.
- ಯಾರು ತನ್ನನ್ನು ತಾನು ಅರಿತು ಪ್ರೀತಿಸುತ್ತಾನೋ, ಅವನು ಲೋಕವನ್ನು ಅರಿತು ಪ್ರೀತಿಸುತ್ತಾನೆ.
- ಬಯಿಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ, ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುವುದಿಲ್ಲ.
- ನಿಮ್ಮ ಮುಖವು ನಿಮ್ಮ ನಡೆತೆಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ, ನಿಮ್ಮ ವರ್ತನೆಯು ನಿಮ್ಮ ನಡತೆಯನ್ನು ತಿಳಿಸುತ್ತದೆ.
- ಗೌರವನ್ನು ಗಳಿಸಬೇಕೆಂದಿದ್ದರೆ ಮೋದಲು ನೀನು ಎಲ್ಲರನ್ನೂ ಗೌರವಿಸು.
- ಕಷ್ಟ ಕಲಿಸುತ್ತದೆ, ಸುಖ ಮೆರೆಸುತ್ತದೆ, ಒಳ್ಳೆಯತನ ಮತ್ತು ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಸುತ್ತದೆ.
- ಪ್ರತಿವರ್ಷ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಆದರೆ, ನಮ್ಮ ಬದಕು ಇದ್ದಲ್ಲೇ ಇರುತ್ತದೆ ಎಂಬ ಮಾತನ್ನ ಈ ವರ್ಷ ಸುಲ್ಮಾಗಿಸಿ.
- ಜೀವನ ಅಂದರೆ ಸಾಯುವವರೆಗು ಜೀವಿಸುವುದಲ್ಲ, ಅದೊಂದು ಅನುಭವಗಳ ಪಾಠಶಾಲೆ. ಆ ಅನುಭವ ಮತ್ತೊಬ್ಬರ ಜೀವನಕ್ಕೆ ನೆರವಾಗಲಿ.
- ವ್ಯಾಯಾಮ ಶರೀರವನ್ನು ಶುದ್ಧಿ ಮಾಡಿದರೆ, ಧ್ಯಾನ ಆಲೋಚನೆಯನ್ನು ಶುದ್ಧಿ ಮಾಡುತ್ತದೆ ಮತ್ತು ಪ್ರಾಣಯಾಮ ಪ್ರಾಣವನ್ನು ಶುದ್ಧಿ ಮಾಡುತ್ತದೆ.
- ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ನೋಡಲು ಮೊದಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ.
- ಕಷ್ಟಗಳು ಎದುರಾದಾಗ ದೇವರಲ್ಲಿ ಹರಕೆ ಹೋರುವ ಬದಲು, ಆ ಕಷ್ಟಗಳನ್ನು ಎದರಿಸಲು ಶಕ್ತಿಕೊಡಲು ದೇವರಲ್ಲಿ ಪ್ರಾರ್ಥಿಸಿ.
- ಪ್ರತಿಯೊಂದು ಸಾಧನೆಯ ಹಿಂದೆ ಸೋಲಿನ ಅನುಭವವೇ ಹೆಚ್ಛಾಗಿ ಅಪ್ತವಾಗಿರುತ್ತದೆ.
- ನಾವು ಧಾರ್ಮಿಕ ನಂಬಿಕೆಗಳ ಜೊತೆಗೆ ಮನುಷ್ಯತ್ವ ಎಂಬ ಮೂಲ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ನಮ್ಮ ನಂಬಿಕೆ ಪರಿಪೂರ್ಣವಾಗುವುದು.
- ತಮ್ಮ ಎಲ್ಲಾ ನಿಯಮಗಳನ್ನು ದಾಟಿ ನಿಯಮಾತೀತನಾಗುವುದೇ ಅವಧೂತ ಸ್ಥಿತಿ.
- ಯೋಗ್ಯತೆ ಮಾನವನ ಉಡುಗೆ ತೋಡುಗೆಯಲ್ಲ ನಿಜವಾಗಿಯೂ ಅವನ ವರ್ತನೆಯಲ್ಲಿ ನೆಲೆಸಿರುತ್ತದೆ.
- ಸದಾ ಸತ್ಕಾರವನ್ನು ಅಪೇಕ್ಷಿಸುವನು ಸನ್ಯಾಸಿ ಆಗಲು ಸಾಧ್ಯವಿಲ್ಲ.
- ಗೆಲ್ಲಬಲ್ಲೆ, ಧೈರ್ಯದಿಂದ ನಿಲ್ಲಬಲ್ಲೆ ಎಂದು ಸಧೃಡವಾಗಿ ನಿಲ್ಲುವುದೇ ನಿಜವಾದ ಗೆಲುವಿನ ಗುಣ.
- ನಿನಗೆ ನೀನು ಮಾಡುವ ಕೆಲಸಗಳು ಸರಿ ಎನಿಸಿದಾಗ ಯಾರ ಅಭಿಪ್ರಾಯಕ್ಕು ಕಾಯಬೇಡ.
- ಒಂದು ನಿರ್ದಿಷ್ಟ ಸನ್ನಿವೇಶವನ್ನು ನಿಭಾಯಿಸಲು ಅಸಾಧ್ಯವಾದಗ ಸಮಸ್ಯೆಯಾಗಿ ಗೋಚರಿಸುತ್ತದೆ.
- ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕಗೆ ಬೆಲೆ ಇರುತ್ತಿರಲಿಲ್ಲ, ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೋತ್ತಾಗುವುದಿಲ್ಲ.