ಗಾದೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
[[#ಗಾದೆಗಳ ಬಗ್ಗೆ ಇನ್ನೂ ಕೆಲವು ಪುಟಗಳು|ಗಾದೆಗಳ ಬಗ್ಗೆ ಇನ್ನೊಂದಿಷ್ಟು ಕೊಂಡಿಗಳು]] <br />
 
==ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ==
• ವೇದ ಸುಳ್ಳಾದರು ಗಾದೆ ಸುಳ್ಳಾಗದು.
• ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
• ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
• ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
• ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
• ಕೈ ಕೆಸರಾದರೆ ಬಾಯಿ ಮೊಸರು.
• ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
• ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
• ಮಾತು ಬೆಳ್ಳಿ, ಮೌನ ಬಂಗಾರ.
• ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
• ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
• ಮನೆಗೆ ಮಾರಿ, ಊರಿಗೆ ಉಪಕಾರಿ.
• ಆಳಾಗಬಲ್ಲವನು ಅರಸನಾಗಬಲ್ಲ.
• ಊರಿಗೆ ದೊರೆ ಆದರೂ ತಾಯಿಗೆ ಮಗನೆ.
• ಹೆತ್ತವರಿಗೆ ಹೆಗ್ಗಣ ಮುದ್ದು.
• ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
• ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
• ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
• ಮನಸಿದ್ದರೆ ಮಾರ್ಗ.
• ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
• ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
• ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
• ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
• ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
• ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
• ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
• ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
• ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
• ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
• ಜಲ ನೋದಿ ಭಾವಿ ತೆಗೀಬೇಕು, ಕುಲ ನೋಡಿ ಹೆಣ್ಣು ತರ್ಬೇಕು.
• ಚಿಂತೆ ಇಲ್ಲದವನಿಗೆ ಸ೦ತೇಯಲ್ಲೂ ನಿದ್ದೆ.
• ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
• ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
• ತುಂಬಿದ ಕೊಡ ತುಳುಕುವುದಿಲ್ಲ.
• ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
• ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
• ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
• ಮು೦ಡೆಯ ಮದುವೆಯಲ್ಲಿ ಉ೦ಡೋನೆ ಜಾಣ.
• ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
• ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
• ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
• ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ ಮೇಲೆ ಬಸಪ್ಪ ಒಳಗೆ ವಿಷಪ್ಪ ಹೊರಗೆ ಬೆಳಕು ಒಳಗೆ ಕೊಳಕು ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
• ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
• ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
• ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ
• ತಾಯಿಯಂತೆ ಮಗಳು ನೂಲಿನಂತೆ ಸೀರೆ
• ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
• ಅರಿತರೆ ಮಾತನಾಡು ಮರೆತರೆ ಕೂತು ನೋಡು
• ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
• ಹಾಲಿದ್ದ ಕ೦ಡಲ್ಲಿ ಬೆಕ್ಕು ಹೇಲು ಕ೦ಡಲ್ಲಿ ನಾಯಿ ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
• ಗಂಜಿಯ ಕುಡಿದರೂ ಗಂಡನ ಮನೆ ಲೇಸು
• ಒಲಿದರೆ ನಾರಿ ಮುನಿದರೆ ಮಾರಿ
• ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
• ಕಚ್ಚೋ ನಾಯಿ ಬೊಗಳುವುದಿಲ್ಲ
• ತುಂಬಿದ ಕೊಡ ತುಳುಕುವುದಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
• ತಾಳಿದವನು ಬಾಳಿಯಾನು
• ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
• ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
• ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
• ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
• ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
• . ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
• ಹಸಿದು ಹಲಸು, ಉಂಡು ಮಾವು
• ಹೋದರೆ ಶಾಟ, ಬ೦ದರೆ ಬೆಟ್ಟ.
• ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
• ಮನೆಗೆ ಮಾರಿ ಊರಿಗೆ ಉಪಕಾರಿ.
• ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
• ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
• ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
• ತಾನೂ ತಿನ್ನ, ಪರರಿಗೂ ಕೊಡ.
• ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
• ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ.
 
 
 
* ಅಜ್ಜಿಗೆ ಅಕ್ಕಿ ಚಿ೦ತೆಯಾದರೆ ಮೊಮ್ಮಗಳಿಗೆ ಮೂಗುತಿ ಚಿ೦ತೆ
"https://kn.wikiquote.org/wiki/ಗಾದೆಗಳು" ಇಂದ ಪಡೆಯಲ್ಪಟ್ಟಿದೆ