ಶಿವರಾಮ ಕಾರಂತ

ಭಾರತೀಯ ಸಾಹಿತಿ

ಶಿವರಾಮ ಕಾರಂತ (K. Shivaram Karanth) (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರರಾಗಿದ್ದರು.

ನುಡಿಗಳು

ಸಂಪಾದಿಸಿ
  • ಬದುಕಿನಲ್ಲಿ ಪರಮಾವಧಿ ತೃಪ್ತಿ ನೀಡುವುದು ತಾನು ಸರಿಯಾಗಿ ನಡೆದುಕೊಂಡಿದ್ದೇನೆ ಎಂಬ ಆತ್ಮವಿಶ್ವಾಸ
  • ಇರುವಷ್ಟು ದಿನ ನಮಗೂ, ಇತರರಿಗೂ ಹಿತವಾಗುವ ಹಾಗೆ ಬದುಕುವುದು, ಪರರಿಗೆ ಸುಖ ಕೊಡಲಾಗದಿದ್ದರೂ ದುಃಖ ಕೊಡದಿರುವುದು
  • ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.
  • ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
  • ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
  • ಸುತ್ತಾಡು ನೋಡು, ನೋಡಿ ಕಲಿ
  • ನನ್ನ ಸುತ್ತಲ ಬದುಕು ಸಂತೋಷಕ್ಕಿಂತ ದುಃಖ ಹೆಚ್ಚಾಗಿದೆ. ಸಣ್ಣದಿದ್ದಾಗಿನ ಸತ್ಯ ಈಗಿಲ್ಲ. ಯಾರ ಕೈಗೆ ಈ ದೇಶವನ್ನು ಧಾರೆಯೆರೆದೆವೋ ಬಹುಮಟ್ಟಿಗೆ ಅವರೆ ಈ ಸ್ಥಿತಿಗೆ ಕಾರಣ
  • ಈ ದೇಶದ ಜನರನ್ನು ನಂಬುವವರೇ ಇಲ್ಲ. ಈ ದೇಶ, ಜನರನ್ನು ನಂಬುವಂತಾದರೆ ಅದೇ ದೊಡ್ಡ ಪರಮಾರ್ಥ
  • ಸರ್ಕಾರ ಎಂದರೆ ಅಲ್ಲಿರುವ ಸರ್ವತಂತ್ರ ಸ್ವತಂತ್ರ ಅಧಿಕಾರಿಗಳಷ್ಟೇ. - ೦೫:೧೬, ೩೧ ಡಿಸೆಂಬರ್ ೨೦೧೩ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. - ೧೦:೧೬, ೨೮ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
  • ನಾಲ್ಕು ಜನರಿಗೆ ಅನ್ಯಾಯವಾಗದಂತೆ ಬದುಕಬೇಕು. ಪರರಿಗೆ ಸುಖ ಕೊಡಲು ಆಗದಿದ್ದರೆ ದುಃಖ ಮಾತ್ರ ಕೊಡಬಾರದು. - ೧೭:೨೭, ೨೭ ಫೆಬ್ರುವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಾಳೆ ಏನೆಂಬ ಪ್ರಶ್ನೆಗಿಂತಲೂ ‘ಇಂದು ಹೇಗೆ?’ ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು. - ೦೭:೧೧, ೧೩ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮಕ್ಕಳನ್ನು ಕುಬ್ಜ ವೃದ್ಧರೆಂದು ತಿಳಿಯದ, ಅವರ ಸಹಜ ವಿಕಾಸಕ್ಕೆ ಹಾತೊರೆಯುವ ಶಿಕ್ಷಣ ಮತ್ತು ಶಿಕ್ಷಕರು ಬೇಕು. - ೦೪:೩೪, ೨೧ ಜುಲೈ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸತ್ಯವು ಕೂಡ ಆಯಾ ಕಾಲಮಾನದ ತುಲನೆಯಿಂದ ಬದಲಾಗುವ ಜೀವನ ನಿರ್ಣಯ. - ೦೬:೫೨, ೧೮ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು. - ೦೫:೪೫, ೧೦ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಹಂಕಾರಿ ಸದಾ ಸಂಶಯದ ಸ್ವಭಾವದವನಾಗಿರುತ್ತಾನೆ. - ೦೭:೩೫, ೫ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ, ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ. - ೧೩:೫೭, ೧೪ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಣ ಎಂದರೆ ಉಪ್ಪು ಇದ್ದಂತೆ. ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ.sirisoundarya.com
  • ಪ್ರಾಣಿ ಜೀವನ ಮಿತವಾದದು , ಮನುಷ್ಯ ಜೀವನ ಬಹುಮುಖವಾದದು.
  • ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ?
  • ಕಾಲ ಹಿಂದಕ್ಕೆ ಚಲಿಸುವುದಿಲ್ಲ. ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ. - ೧೦:೧೬, ೨೮ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಮ್ಮ ಬದುಕು ದೊಡ್ಡದಾಗದೆ ನಮ್ಮ ಸಾಹಿತ್ಯ ಎಂದೂ ದೊಡ್ಡದಾಗಲಾರದು.
  • ಸತ್ಯ ಕೂಡ ಆಯಾ ಕಾಲಮಾನದ ತುಲನೆಯಿಂದ ಬದಲಾಗುವ ಜೀವನ ನಿರ್ಣಯ. - ೦೪:೩೪, ೮ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ, ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ? - ೦೭:೩೩, ೩೧ ಮಾರ್ಚ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು. ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು. - ೦೨:೦೫, ೪ ಜುಲೈ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು. ೧೮:೪೮, ೨೯ ಅಕ್ಟೋಬರ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬಾಳು ಇರುವುದು ಬೆದರುವುದಕ್ಕಾಗಿ ಅಲ್ಲ, ಬದುಕುವುದಕ್ಕಾಗಿ.೧೬:೧೧, ೨೪ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ, ನಮ್ಮದೇ ಹುಚ್ಚುತನ ಕಾಣಿಸುತ್ತದೆಯೇ? ೦೭:೦೩, ೧೯ ಮೇ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.