- ಅಗ್ನಿಯು ಚಿನ್ನದ ಪರೀಕ್ಷೆಯನ್ನು ಮಾಡುತ್ತದೆ. ಆಪತ್ಕಾಲ ಧೀರರನ್ನು ಪರೀಕ್ಷೆ ಮಾಡುತ್ತದೆ. - ೦೬:೨೬, ೩ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೆಲಸ ಮಾಡುತ್ತಿರುವಷ್ಟು ಕಾಲ ಮಾತ್ರ ಕನಸು ನಿಮ್ಮದು. ಕೆಲಸ ನಿಂತ ಕ್ಷಣ ಕನಸು ಮಾಯ.
- ಕೆಲಸವನ್ನು ಸರಿಯಾಗಿ ಪ್ರಾರಂಭಿಸಿದರೆ ಅರ್ಧ ಮುಗಿಸಿದಂತೆ.
- ನಮ್ಮ ಶಕ್ತಿಯಲ್ಲಿ ನಂಬಿಕೆ ಇರಬೇಕು. ಹಾಗೆಯೇ ಇತರರ ಶಕ್ತಿಯನ್ನು ಗೌರವಿಸಬೇಕು. ಅದಕ್ಕೆ ಭಯ ಪಡಬಾರದು.
- ಪರಿಶ್ರಮದಿಂದ ದೇಹಬಲ ಹೆಚ್ಚುವಂತೆ, ಕಷ್ಟಗಳಿಂದ ಮನೋಬಲ ಹೆಚ್ಚುತ್ತದೆ.
- ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳುತ್ತೇವೆ.
- ಎಷ್ಟು ದಿನ ಬದುಕಿದ್ದೀರಿ ಎಂಬುದು ಮುಖ್ಯವಲ್ಲ, ಎಷ್ಟು ಚೆನ್ನಾಗಿ ಬದುಕಿದ್ದೀರಿ ಎಂಬುದು ಮುಖ್ಯ.