ಸ್ವಾಮಿ ವಿವೇಕಾನಂದ
ಭಾರತದ ಮಹಾನ್ ಪುರುಷ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
- ಆತ್ಮವಿಶ್ವಾಸದಂತಹ ಮಿತ್ರ ಬೇರೆ ಇಲ್ಲ. - ೧೧:೪೫, ೪ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮಾನವನ ಪರಿಪೂರ್ಣತೆ ತನ್ನ ಅಪೂರ್ಣತೆಯನ್ನು ತಿಳಿದುಕೊಳ್ಳುವುದರಲ್ಲಿದೆ. - ೦೭:೫೫, ೨೫ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಿವೇಕಿಯಾದ ಮನುಷ್ಯ ಬೇರೆಯವರ ತಪ್ಪನ್ನು ಕಂಡು ತನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಾನೆ. - ೦೯:೧೦, ೧೦ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ. - ೧೪:೦೧, ೨೧ ಏಪ್ರಿಲ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮೊದಲು ನೌಕರನಾಗುವುದನ್ನು ಕಲಿತುಕೊಂಡರೆ ಯಜಮಾನನಾಗುವ ಯೋಗ್ಯತೆ ತಾನಾಗಿಯೇ ಬರುತ್ತದೆ. - ೦೮:೩೧, ೨೩ ಮೇ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಂದು ನಯಾಪೈಸೆ ರೊಕ್ಕ ಇಲ್ಲದಿರುವ ಮನುಷ್ಯ ಬಡವನಲ್ಲ. ಆದರೆ ಕನಸುಗಳಿಲ್ಲದ ಮನುಷ್ಯ ಬಡವ. - ೧೦:೩೬, ೫ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಂದು ಕ್ಷಣದ ಸಿಟ್ಟಿನಿಂದ ನೀವು ಪಾರಾದರೆ, ನಾಲ್ಕು ದಿನದ ದುಃಖದಿಂದ ಪಾರಾದಿರಿ ಎನ್ನಬಹುದು. - ೦೮:೧೧, ೧೪ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೀತಿಯಿಂದ ಆಡಿದ ಪ್ರತಿ ನುಡಿಯೂ ಸಿಡಿಲಿನಂತೆ ಪರಿಣಾಮಕಾರಿ ಆಗಿರುತ್ತದೆ. - ೦೭:೦೩, ೩೦ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿನ್ನನ್ನು ನೀನು ನಂಬುವವರೆಗೂ ದೇವರಲ್ಲಿ ನಿನಗೆ ನಂಬಿಕೆ ಬರುವುದು ಅಸಾಧ್ಯ. - ೦೭:೨೫, ೨೩ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಅತ್ಯಂತ ಕಡುವೈರಿ ಎಂದರೆ ಮೌಢ್ಯ. - ೦೫:೪೫, ೩೦ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದಾನಕ್ಕಿಂತ ದೊಡ್ಡಗುಣ ಮತ್ತೊಂದಿಲ್ಲ. ಯಾರು ಕೊಡುವುದಕ್ಕೆ ಕೈ ಎತ್ತುವರೋ ಅವರೇ ಮಹಾಮಹಿಮರು. - ೦೭:೪೦, ೧೪ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಭಕ್ತಿ ಇರುವ ಮನುಷ್ಯ ಯಾರನ್ನೂ ದ್ವೇಷಿಸಲಾರ, ಅವನು ಎಲ್ಲರನ್ನೂ ಪ್ರೀತಿಸುತ್ತಾನೆ, ಎಂದೆಂದಿಗೂ ತೃಪ್ತ ಮನಸ್ಸಿನವನಾಗಿರುತ್ತಾನೆ. - ೦೬:೪೪, ೧೭ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಅಂತರಂಗದ ಪುಸ್ತಕ ತೆರೆಯುವ ತನಕ ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು. - ೦೩:೪೦, ೨೮ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಧರ್ಮವೆಂದರೆ ಆತ್ಮದ ಸಾಕ್ಷಾತ್ಕಾರ. - ೦೭:೪೪, ೭ ಅಕ್ಟೋಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲಾ ಶಕ್ತಿ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಹುದು. - ೦೭:೧೦, ೧ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆಧ್ಯಾತ್ಮಿಕ ಜೀವನದಲ್ಲಿ ಪವಾಡಗಳು ಒಂದು ದೊಡ್ಡ ಆತಂಕ. - ೧೪:೦೧, ೧೦ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರಪಂಚದಲ್ಲಿ ಎಲ್ಲವೂ ಭಯದಿಂದ ತುಂಬಿವೆ. ವೈರಾಗ್ಯದಲ್ಲಿ ಮಾತ್ರ ಭಯವಿಲ್ಲ. - ೦೫:೦೬, ೨೨ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸುವ ಯಾವುದನ್ನೇ ಆಗಲಿ ವಿಷ ಎಂಬಂತೆ ತಿರಸ್ಕರಿಸಿ. - ೧೨:೦೮, ೨೯ ಜನವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಂದು ಕೆಲಸದಲ್ಲಿ ತಲ್ಲೀನನಾಗಿರುವ ಸಮಯದಲ್ಲಿ ಮತ್ತೊಂದರತ್ತ ಮನಸ್ಸನ್ನು ಹರಿಯಬಿಡದಿರುವವನೇ ಸ್ಥಿತಪ್ರಜ್ಞ. - ೦೪:೪೫, ೧ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಿವೇಕಿಯಾದವ ಬೇರೆಯವರ ತಪ್ಪನ್ನು ಕಂಡು ತನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಾನೆ. - ೦೪:೫೩, ೮ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹೃದಯ ಮತ್ತು ಮೆದುಳಿನ ನಡುವೆ ಭಿನ್ನಮತ ಉಂಟಾದರೆ, ನಿನ್ನ ಹೃದಯದ ಕರೆಯನ್ನೇ ಅನುಸರಿಸು. - ೦೪:೫೮, ೨೬ ಫೆಬ್ರುವರಿ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಾವು ಏನನ್ನು ಬಿತ್ತುತ್ತೇವೆಯೋ ಅದರ ಫಸಲನ್ನೇ ಪಡೆಯುತ್ತೇವೆ. ನಮ್ಮ ಹಣೆಬರಹ ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು, ಯಾರನ್ನೂ ಪ್ರಶಂಸಿಸಬಾರದು. - ೦೬:೫೦, ೧ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಾವ ದಿನ ನಿನಗೆ ಯಾವೊಂದೂ ಸಮಸ್ಯೆ ಎದುರಾಗುವುದಿಲ್ಲವೋ ಆ ದಿನ ನೀನು ತಪ್ಪು ಹಾದಿಯಲ್ಲಿ ನಡೆಯುತ್ತಿದ್ದೀಯೆ ಎಂದರ್ಥ. - ೦೬:೦೮, ೧೮ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮನುಷ್ಯತ್ವದ ಮಹಿಮೆಯನ್ನು ಯಾವತ್ತೂ ಮರೆಯಬೇಡಿ. - ೦೯:೫೦, ೧೧ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇದೊಂದು ದೊಡ್ಡ ಸತ್ಯ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ; ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ,ತಳಮಳ, ದುರ್ಬಲತೆಯೇ ಮರಣ.
- ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.
- ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
- ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
- ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.
- ಎದ್ದೇಳಿ, ಕಾರ್ಯೋನ್ಮುಕರಾಗಿ ಈ ಬದುಕಾದರು ಎಷ್ಟು ದಿನ ಮಾನವರಾಗಿ ಹುಟ್ಟಿದಮೇಲೆ ಏನಾದರು ಸಾಧಿಸಿ
- ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.
- ಮೊಹಮ್ಮದ್ ಅಗಲಿ ಬುದ್ಧ ನಾಗಲಿ ಒಳ್ಳೆಯ ಮನುಷ್ಯನಾಗಿದ್ದರಿಂದ ನನಗಾಗ ಬೇಕಾದುದೇನು? ಅದು ನನ್ನ ಒಳ್ಳೆಯ ಅಥವಾ ಕೆಟ್ಟ ತನವನ್ನು ಬದಲಾಯಿಸುತ್ತದೆಯೇ? ನಾವು ನಮಗೋಸ್ಕರವಾಗಿಯೇ ಒಳ್ಳೆಯವರಾಗುವ ಜವಾಬ್ದಾರಿಯನ್ನು ತೆಗೆದುಕೊಳ್ಳೋಣ. ಯಾರೋ ಯಾವಾಗಲೋ ಹಿಂದೆ ಒಳ್ಳೆಯವರಾಗಿದ್ದರು ಎಂಬ ಕಾರಣಕ್ಕಲ್ಲ'. ವಿವೇಕಾನಂದರ ಸಿಂಹವಾಣಿ. , Jan 12, 2011, 11:56 IST
- ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು
- ಶಿಕ್ಷಣದ ಉದ್ದೇಶ ಪರಿಪೂರ್ಣ ಮಾನವನನ್ನು ತಯಾರಿಸುವುದು, ನಡೆದಾಡುವ ವಿಶ್ವಕೋಶವನ್ನು ತಯಾರಿಸುವುದಲ್ಲ
- ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ
- ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ
- ನಮ್ಮ ಅಂತರಂಗದ ಪುಸ್ತಕ ತೆರೆಯುವ ತನಕ, ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು. - ೧೯:೩೧, ೧೬ ಡಿಸೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಲ್ಲಾ ಬಗೆಯಲ್ಲಿ ಸ್ವಾವಲಂಬಿಯಾಗಿದ್ದರೂ ವಿನಮ್ರನೂ ಆಜ್ಞಾಧಾರಕನೂ ಆಗಿರುವುದೇ ಮನುಷ್ಯನ ನಿಜವಾದ ಲಕ್ಷಣ.
- ಗದ್ದಲವಿರುವ ಸಾಮಾಜಿಕ ಜೀವನ, ನಿಶ್ಶಬ್ದವಾದ ಏಕಾಂತದ ಬದುಕು ಎರಡರಲ್ಲೂ ಮನಸ್ಸು ಮಿಳಿತವಾಗಬೇಕು. - ೦೬:೨೦, ೧೯ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- "ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ. - ೧೦:೩೬, ೧೩ ಫೆಬ್ರುವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು. - ೦೩:೪೭, ೬ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ತನ್ನಲ್ಲಿ ಯಾರಿಗೆ ನಂಬಿಕೆಯಿಲ್ಲವೋ ಅವನೇ ನಾಸ್ತಿಕ. - ೦೪:೪೫, ೧೫ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇತರರಿಗೆ ಸಹಾಯ ಮಾಡಲು ನಿಮ್ಮ ಹಣ ನೆರವಾದರೆ ಅದಕ್ಕೆ ಮೌಲ್ಯವಿದೆ. ಇಲ್ಲವಾದಲ್ಲಿ ಅದೊಂದು ಕೆಡುಕುಗಳ ಮೊತ್ತ - ೧೨:೫೮, ೨೫ ಮಾರ್ಚ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೀತಿ ಇರುವವನು ಬಾಳುತ್ತಾನೆ. ಸ್ವಾರ್ಥಿ ಸಾಯುತ್ತಿರುತ್ತಾನೆ.- ೧೭:೨೦, ೫ ಏಪ್ರಿಲ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ತಮ್ಮನ್ನು ತಿದ್ದಿಕೊಂಡವರು ಲೋಕವನ್ನೂ ತಿದ್ದಲು ಯೋಗ್ಯರಾಗಿರುತ್ತಾರೆ. - ೦೭:೪೮, ೫ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮನಸ್ಸಾಕ್ಷಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡಬೇಡಿ.- ೦೭:೩೩, ೯ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿನ್ನನ್ನು ನೀನು ನಂಬುವುದಾದರೆ ಪರಮಾತ್ಮನನ್ನು ನಂಬಿದಂತೆ.- ೦೬:೪೨, ೧೫ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ, ನಾಲ್ಕು ದಿನಗಳ ದುಃಖದಿಂದ ಪಾರಾದಂತೆ. - ೦೮:೦೯, ೨೩ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೀತಿಯಿಂದಾಡಿದ ಪ್ರತಿಯೊಂದು ನುಡಿಯೂ ಸಿಡಿಲಿನಂತೆ ಪರಿಣಾಮಕಾರಿ. - ೦೬:೪೪, ೩೦ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಮ್ಮಷ್ಟಕ್ಕೆ ನೀವೇ ಬೆಳೆಯಬೇಕು. ಅದಕ್ಕಾಗಿ ಬೇರೊಬ್ಬ ಶಿಕ್ಷಕನಿರುವುದಿಲ್ಲ. - ೦೨:೪೯, ೧೭ ಜುಲೈ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಇತರರ ಸುಖವನ್ನು ಬಯಸುವುದೇ ನಾವು ಸುಖ ಪಡೆಯುವುದಕ್ಕಿರುವ ಸುಲಭ ಮಾರ್ಗ. - ೧೩:೩೬, ೨೨ ಅಕ್ಟೋಬರ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದೀನರು, ದುಃಖಿಗಳು ದೇವರಲ್ಲವೇ? ಮೊದಲು ಅವರನ್ನು ಪೂಜಿಸಬೇಕು.ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಮ್ಮ ಅಂತರಂಗದ ಪುಸ್ತಕ ತೆರೆಯುವ ತನಕ ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು.ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶುದ್ಧ ಚಾರಿತ್ರ್ಯವೊಂದೆ ಕಷ್ಟ ಪರಂಪರೆಗಳ ಅಭ್ಯೇದ್ಯ ಕೋಟೆ ಭೇಧಿಸಬಲ್ಲದು