ಹೆಲೆನ್ ಕೆಲರ್
- ಬದುಕೆಂಬುದಕ್ಕೆ ಅರ್ಥ ಇಷ್ಟೇ, ಒಂದೋ ಅದು ಧೈರ್ಯದಿಂದ ಎದುರಿಸಬೇಕಾದ ಸವಾಲು, ಇನ್ನೊಂದೋ ಅದು ಏನೂ ಅಲ್ಲ. ನಮಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳಬಹುದು.
- ಸಂತೋಷದ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ. ಆದರೆ ನಾವು ಎಲ್ಲಿಯವರೆಗೂ ಮುಚ್ಚಿದ ಬಾಗಿಲಿನ ಕಡೆಗೆ ನೋಡುತ್ತಿರುತ್ತೇವೆಯೋ ಅಲ್ಲಿ ತನಕ ನಮಗೆ ನಮಗಾಗಿ ತೆರೆದ ಇನ್ನೊಂದು ಬಾಗಿಲು ಕಾಣಿಸುವುದಿಲ್ಲ.
- ನಿಜವಾದ ಸಂತೋಷ ಸ್ವಯಂ ತೃಪ್ತಿಯ ಮೂಲಕ ಸಾಧಿಸಲಾಗುವುದಿಲ್ಲ, ಆದರೆ ಯೋಗ್ಯ ಉದ್ದೇಶಕ್ಕಾಗಿ ನಿಷ್ಠೆಯ ಮೂಲಕ ಸಾಧಿಸಲಾಗುತ್ತದೆ.