ಉತ್ತರ ಕನ್ನಡದ ಗಾದೆಗಳು

  • ಒಂದೇ ಮಳೆಗೆ ಒಂದು ಕೊಡೆ ಹರಿಯಬಾರದು
  • ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
  • ತಾನು ಕೆಟ್ಟು ಇರಬಹುದು; ತವರು ಕೆಟ್ಟು ಇರಲಾಗದು
  • ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ?
  • ಅಮಟೆ ಮರ ಅಪ್ಪನ ಮನೆಗೆ ಹೋದಂತೆ.
  • ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
  • ಅಜ್ಜಿ ಮುದುಕಿಯ ಕೋಳಿ ಕೂಗದೆಯೇ ಬೆಳಗಾಗುತ್ತದೆ.
  • ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
  • ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ
  • ಹೂವಲ್ಲದಿದ್ದರೆ ಹೂವಿನ ಎಸಳು.
  • ಬೆಲ್ಲವಿಲ್ಲದಿದ್ದರೂ ಬೆಲ್ಲದಂಥಾ ಮಾತು
  • ಅಜ್ಜ ಊರಿದ್ದಕ್ಕೂ ಮೊಮ್ಮಗ ಹಾರಿದ್ದಕ್ಕೂ ಸಮ.
  • ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ
  • ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ
  • ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
  • ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು
  • ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
  • ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
  • ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು.
  • ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
  • ಒಬ್ಬನೇ(ಳೇ) ಇದ್ದರೆ ಹೆದರಿ ಸಾಯುತ್ತಾನೆ(ಳೆ), ಇಬ್ಬರಿದ್ದರೆ ಹೊಡೆದಾಡಿ ಸಾಯುತ್ತಾರೆ.
  • ಕಾಣದಿದ್ದರೆ ಬೇಸರಿಕೆ, ಕಂಡರೆ ವಾಕರಿಕೆ.
  • ನಡುಗಿದವನನ್ನು ನಡುಗಿಸಿತ್ತು, ಮುಡುಗಿದವನನ್ನು ಮುಡುಗಿಸಿತ್ತು, ಎದ್ದೋಡುವವನ ಜೊತೆ ಗುದ್ದಾಡಲಾರೆನೋ ಎಂದಿತ್ತು ಚಳಿ.
  • ಸ್ವಾರ್ಥವೂ ಆಗಬೇಕು, ಸ್ವಾಮಿ ಸೇವೆಯೂ ಆಗಬೇಕು.
  • ಬೇರೆಯವರ ಹೆಳೆ, ತನ್ನ ಬೆಳೆ
  • ಸೋರೆಯಿಂದ ಏಳ (ಏಳುವುದಿಲ್ಲ), ಗುಂಜಿನಿಂದ ಬಿಡ (ಬಿಡುವುದಿಲ್ಲ).
  • ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
  • ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು
  • ಶಿದ್ದೆಯಂಥ ಮಕ್ಕಳಿದ್ದರೆ ಎದ್ದು ಗೇಯುವುದು ಬೇಡ.
  • ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು.
  • ಪಾತ್ರೆಯಲ್ಲಿದ್ದರೆ ಸೌಟಿಗೆ ಬರುತ್ತದೆ.
  • ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.
  • ನನಗೇ ಮದುವೆ ಬೇಡ ನಮ್ಮಪ್ಪ ಯಾರಿಗೆ ಹೆಣ್ಣು ಕೇಳುತ್ತಾನೆ?
  • ಕೊರಕ್ಲಜ್ಜಿಯ ಮನೆಯ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಂತೆ.
  • ‘ಸು’ ಅಂದರೆ ಸುಕನುಂಡೆ ಅಂದಿದ್ದ.
  • ಸಲಿಗೆ ಕೊಟ್ಟರೆ ನಾಯಿ ಸೊಟ್ಟಗ ನೆಕ್ಕಿತ್ತು.
  • ಸಲಿಗೆ ಕೊಟ್ಟರೆ ನಾಯಿ ನೊಸಲು (ಹಣೆ) ನೆಕ್ಕಿತ್ತು
  • ಮುಂಗೈ ಕೊಟ್ಟರೆ ಅಂಗೈಯನ್ನೇ ಹಿಡಿಯುತ್ತಾರೆ
  • ಹಾಡು ಹೇಳಿದವರಿಗೂ ಮೂರು ಸುಕನುಂಡೆ, ಹಾಡು ಹೇಳದಿದ್ದವರಿಗೂ ಮೂರು ಸುಕನುಂಡೆ.
  • ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ, ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
  • ಸಡಗರದಲ್ಲಿ ಸರಸಕ್ಕ ಮೈನೆರೆದಿದ್ದಳು.
  • ಹೊತ್ತಲ್ಲದ ಹೊತ್ತಿನಲ್ಲಿ ತೊತ್ತು ಮೈನೆರೆದಿದ್ದಳು.
  • ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.
  • ಶನಿ ಹಿಡಿದು ಸಂತೆಗೆ ಹೋದರೆ ಇಲಿ ಹಿಡಿದು ತಲೆ ಬೋಳಿಸಿತ್ತು
  • ಹೇಳೋದ್ರಲ್ಲೇ ಕಾಶಿ ಕಂಡ ತಿನ್ನೋದೆಲ್ಲಾ ಮಶಿಕೆಂಡ.
  • ಪುರಾಣ ಹೇಳೋಕೆ ಬದನೇಕಾಯಿ ತಿನ್ನೋಕೆ
  • ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ.
  • ಗಂಡ ಸತ್ತ ದುಃಖವಲ್ಲದೇ, ಬಡ್ದು ಕೂಪಿನ ಉರಿ ಬೇರೆ.
  • ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಬದುಕು ನೋಡದೆ ಹೋಯಿತು.
  • ಬೇಡವೆಂದು ಎಸೆಯುವ ಕಡ್ಡಿ ಹಲ್ಲಿನಲ್ಲಿ ಹಾಕುವುದಕ್ಕಾದರೂ ಬೇಕಾಗುತ್ತದೆ.
  • ಭಟ್ಟರ ಅಂಗವಸ್ತ್ರ ಆಗಬಾರದು, ವೈದ್ಯನ ಹೆಂಡತಿ ಆಗಬಾರದು.
  • ತಲೆಗೆ ಮಿಂದರೆ ಕಾಲಿಗೆ ಬರುತ್ತದೆ.
  • ಜೇನು ಕೊಯ್ದವನು ಕೈ ನೆಕ್ಕದೇ ಇರುತ್ತಾನಾ?
  • ಕದ್ದ ರೊಟ್ಟಿ ಬೇರೆ, ದೇವರ ಪ್ರಸಾದ ಬೇರೆ.
  • ಕದ್ದು ಹೋಳಿಗೆ ಕೊಟ್ಟರೆ ಬೆಲ್ಲ ಸಾಲದು ಎಂದಿದ್ದಳು.
  • ಅಭ್ಯಾಸ ಇಲ್ಲದ ಭಟ್ಟ ಅಗ್ನಿಕಾರ್ಯ ಮಾಡಲು ಹೋಗಿ ಗಡ್ಡ ಸುಟ್ಟುಕೊಂಡಿದ್ದನಂತೆ.
  • ಜುಟ್ಟು ಹಣ್ಣಾಗಿದೆ ಜಾಗಟೆ ಬಾರಿಸಲು ಬರುವುದಿಲ್ಲ ಎಂದಿದ್ದ.
  • ಎಂತೆಂಥವರೋ ಮಣ್ಣು ಮುಕ್ಕುತ್ತಿರುವಾಗ ಓತಿಕ್ಯಾತ ತಾನು ಮಾಡುತ್ತೇನೆ ಎನ್ನುತ್ತಿತ್ತು.
  • ಮುಳುಗಿಕೊಂಡು ಹೇತರೂ ತಲೆಯ ಮೇಲೆಯೇ ತೇಲುತ್ತದೆ.
  • ಮೂರು ಲೋಕವೂ ಕಾಣುತ್ತಿದೆ ಏನು ಹೇಳುತ್ತಿದ್ದಾಗ, ನಮ್ಮ ಮನೆಯ ಎಮ್ಮೆ ಕರು ಕಾಣುತ್ತಿದೆಯೇ ಎಂದು ಕೇಳಿದ್ದ.
  • ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ
  • ಬಾಯಿ ಮುಂದಿನ ಹಲ್ಲು, ಊರ ಹೊರಗಿನ ಜಮೀನು ಇವೆರಡರಿಂದಲೂ ಅನಾನುಕೂಲವೇ ಜಾಸ್ತಿ.
  • ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು.
  • ಹೆಣ ಹೊರುವವನಿಗೆ 'ಏನೋ' ಭಾರವಾ?
  • ಎತ್ತು ಹೌದು, ಕೋಡು ಅಲ್ಲ.
  • ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
  • ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು.
  • ಗಾದೆ ಹೇಳುವವನ ಬಾಯಿಗೆ ಬೂದಿ ಬೀಳುತ್ತದೆ.
  • ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ.
  • ಮುಂಡೆಯ ಮದುವೆಗೆ ಮುನ್ನೂರು ವಿಘ್ನ.
  • ಮುನ್ನೋಡಿ ಪಾಯಸ ಉಣ್ಣೋ ಮೂಳಾ ಎಂದರೆ ಯಾವ ಹೊಲದ ಗಸಗಸೆ ಎಂದು ಕೇಳಿದ.
  • ಮೂರು ದೋಸೆ ಕೊಡುತ್ತೇನೆ ಹಾಡು ದಾಸಯ್ಯ, ಆರು ದೋಸೆ ಕೊಡುತ್ತೇನೆ ನಿಲ್ಲಿಸು ದಾಸಯ್ಯ.
  • ಬಿಸಿಯ ಹೊರತೂ ಬೆಣ್ಣೆ ಕರಗುವುದಿಲ್ಲ.
  • ಹೆದ್ದಿನಿಸು ಹಿತ್ತಲಿಗೆ ಬಳಿ ಎಣ್ಣೆ ಬಚ್ಚಲಿಗೆ.
  • ಹಣ ಇದ್ದರೂ ಋಣ ಇದ್ದಷ್ಟೇ ತಿನ್ನುತ್ತಾರೆ.
  • ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ; ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
  • ಊರ ಉಪಕಾರಕ್ಕೆ ಹೋಗಿ ಮುಲ್ಲಾ ಸೊರಗಿದ್ದ.
  • ಆನು, ಮಾಣಿ, ಗೋವಿಂದ.
  • ಆದಷ್ಟು ಆಯಿತು ಮಾದೇವ ಭಟ್ಟರ ಪುರಾಣ.
  • ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.
  • ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು/ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
  • ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.
  • ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳುವ ಹಾಗಿದೆ.
  • ಹೊಗಳಿದ ಎಮ್ಮೆ ಹೋರಿಗರು ಹಾಕಿತ್ತು.
  • ಹೊಗಳಿದ ಎಮ್ಮೆಯ ಮಜ್ಜಿಗೆ ಹುಳಿ ನಾರಿತ್ತು
  • ಕಂಡಿದ್ದು ಹೇಳೋ ಪಾರುಪತ್ಯಗಾರ ನನ್ನ ಮಠದಲ್ಲಿರಬೇಡ.
  • ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು.
  • ಕಲ್ಲಪ್ಪ ಗುಂಡಪ್ಪರ ನಡುವೆ ಕಾಯಪ್ಪ ಚಟ್ನಿಯಾಗಿ ಹೋದ.
  • ಕಡ ಹುಟ್ಟಿ ಬಡವ ಕೆಟ್ಟ.
  • ಕತ್ತಿಯ ಮೇಲೆ ಕುಂಬಳ ಕಾಯಿ ಬಿದ್ದರೂ ಒಂದೇ ಕುಂಬಳ ಕಾಯಿಯ ಮೇಲೆ ಕತ್ತಿ ಬಿದ್ದರೂ ಒಂದೇ.
  • ಕದ್ದವನು ಯಾರು? ಎಂದರೆ ಕಾನುಗೋಡು ಸುಬ್ಬ.
  • ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.
  • ಅಜ್ಜಿ ಸುಟ್ಟ ಹಾಗೂ ಆಯಿತು, ಚಳಿ ಕಾಯಿಸಿದ ಹಾಗೂ ಆಯಿತು.
  • ಊರ ಮುಂದೆ ಹೊಡೆದು ಒಲೆ ಮುಂದೆ ಎಣ್ಣೆ ಹಚ್ಚಿದಂತೆ.
  • ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.
  • ಕೋಲು ಕೊಟ್ಟು ಹೊಡೆಸಿಕೊಂಡಂತೆ/ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.
  • ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.
  • ಹೊಟ್ಟು ಗಡಿಗೆ, ಹುಳುಕು ತೊಗರಿ
  • ಕುರುಡ ಕತ್ತ ಹೊಸೆದಂತೆ.
  • ಕೆಪ್ಪಳಾದರೂ ನಮ್ಮೊಳೇ ವಾಸಿ.
  • ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಸುಟ್ಟುಹಾಕಿದ್ದಳು.
  • ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ದಾಸಯ್ಯನ ಜಾಗಟೆಗೆ ಹೆದರುತ್ತೀನಾ?
  • ಕರಡಿಗೇ ಹೆದರದವನು ನಾನು, ಕರಿ ಕಂಬಳಿಗೆ ಹೆದರುತ್ತೀನಾ?
  • ಅರಿಯೆನೆಂದರೆ ಅರವತ್ತು ಗುಣ, ಬಲ್ಲೆನೆಂದರೆ ಹೋಯ್ತವನ ಹೆಣ.
  • ಗುಡ್ಡ ಅಗೆದು ಇಲಿ ಹುಡುಕಿದಂತೆ.
  • ಗುರು ಕೊಟ್ಟ ಜೋಳಿಗೆಯೆಂದು ಗೂಟಕ್ಕೆ ನೇತು ಹಾಕಿದರೆ ಭಿಕ್ಷೆ ಬಂದು ಬೀಳುವುದಿಲ್ಲ.
  • ಗಂಗಾಳ ತೊಳೆಯಲು ಮಂಗಳ ವಾರವೇ ಏಕೆ ಬರಬೇಕು?
  • ಮೊಳ ನೇಯುವಷ್ಟರಲ್ಲಿ ಮಾರು ಹೋಗಿತ್ತು.
  • ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತಿ ಒಗೆದಿದ್ದ.
  • ಕುರುಡನಿಗೆ ಕಣ್ಣು ಬಂದಿದ್ದೇ ಗೊತ್ತು.
  • ಕಂಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ.
  • ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದ್ದನು.
  • ಒಕ್ಕಣ್ಣರ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು.
  • ಮೊದಲಿದ್ದವಳೇ ಒಳ್ಳೆಯವಳು ಎಬ್ಬಿಸಿದರಾದ್ರೂ ಉಣ್ಣೋಳು.
  • ಭತ್ತ ತಿನ್ನುವವನು ಹೋದರೆ ಉಮಿ ತಿನ್ನುವವನು ಬರುತ್ತಾನೆ
  • ಮುದುಕಿಯ ತುಪ್ಪ ಮೂಸಿ ನೋಡಿಯೇ ಖರ್ಚಾಗಿತ್ತು.
  • ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು.
  • ಮುರುಕು ಮಂಚ ಹೊತ್ತು ದನ ಕಾಯುತ್ತೀಯಾ ಅಥವಾ ಒಡಕು ಗಡಿಗೆಯಲ್ಲಿ ನೀರು ತರುತ್ತೀಯಾ?
  • ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು.
  • ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಮಗುಚಿದ್ದನು.
  • ಉದ್ಯೋಗ ಇಲ್ಲದ ಆಚಾರಿ ಮಗನ ಕುಂಡೆ ಕೆತ್ತಿ ಮೂರು ಮಣೆ ಮಾಡಿದ್ದನಂತೆ.
  • ಎಣ್ಣೆ ಬರುವ ಹೊತ್ತಿಗೆ ಕಣ್ಣು ಮುಚ್ಚಿಕೊಂಡಿದ್ದನು.
  • ಅಕ್ಕ ತಂಗಿಯರು ಕಾಶಿಗೆ ಹೋದಂತೆ.
  • ಮುಂಡೆಗೆ ಮುಂಡೆಯನ್ನು ಕಂಡರೆ ಉಂಡಷ್ಟೇ ಸಂತೋಷ.
  • ಹೆಂಡತಿ ಸತ್ತ ದುಃಖ, ಮೊಣಕೈ ಗಂಟಿನ ನೋವು ಬಹಳ ಕಾಲ ಇರುವುದಿಲ್ಲ.
  • ತಾನು ಮಾಡುವ ಭಾಗ್ಯಕ್ಕೆ ನಡು ಕಾನಿಗೆ ಹೋಗಿದ್ದನು.
  • ಬಾಗಿಲು ಹಾಕಿದರೆ ಒಂದೇ ದೂರು, ಬಾಗಿಲು ತೆಗೆದರೆ ನಾ ನಾ ದೂರು.
  • ಹೆಳೆ(ನೆಪ) ಇಲ್ಲದೇ ಅಳುವವನ ಹೆಂಡತಿ ಸತ್ತು ಹೋಗಿದ್ದಳಂತೆ.
  • ಅಳುವವನ ಮೈಮೇಲೆ ಗೋಡೆ ಬಿದ್ದಂತೆ
  • ಮಗಳೇ ಮಗಳೇ ಎಂದರೆ ಮನೆಯಿಡೀ ತೆವಳಿದ್ದಳು.
  • ಮಾಡುವವರನ್ನು ಕಂಡರೆ ನೋಡು ನನ್ನ ಸೇವೆ
  • ಹಾಕು ಮಣೆ, ನೂಕು ಮಣೆ, ತೋರು ಮಣೆ.
  • ಹೋಗು ಎನ್ನಲಾರದೇ ಹೊಗೆ ಹಾಕಿದರು
  • ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಮಾಡಿತ್ತು.
  • ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.
  • ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು.
  • ನಾವೇ ಸಾಯಬೇಕು ಸ್ವರ್ಗ ಕಾಣಬೇಕು.
  • ನಮ್ಮ ತಲೆಗೆ ನಮ್ಮ ಕೈ
  • ನಮಗೆ ನಾವು, ಗೋಡೆಗೆ ಮಣ್ಣು
  • ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.
  • ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.
  • ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.
  • ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.
  • ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ.
  • ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತ್ತು.
  • ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು
  • ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.
  • ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.
  • ದಾನಕ್ಕೆ ಬಂದ ಎಮ್ಮೆಯನ್ನು ಹಲ್ಲು ಹಿಡಿದು ನೋಡಿದ್ದನು.
  • ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.
  • ಕುನ್ನಿಗೆ ಕೆಲಸವಿಲ್ಲ ಕುಳಿತುಕೊಳ್ಳಲು ಪುರಸೊತ್ತಿಲ್ಲ/
  • ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.
  • ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು
  • ಅರಸ ಬರುವ ತನಕ ಹಲಸು ತಡೆಯುವುದಿಲ್ಲ.
  • ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.
  • ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.
  • ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆದ.
  • ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.
  • ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.
  • ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.
  • ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.
  • ಅಪ್ಪನಿಗೇ ಅಪ್ಪ ಎನ್ನುವುದಿಲ್ಲ ಚಿಕ್ಕಪ್ಪನಿಗೆ ಅಪ್ಪ ಎನ್ನುತ್ತಾನಾ?
  • ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ...
  • ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.
  • ಉಂತೇ ಸಾಯುವ ಮುದುಕಿಯನ್ನು ಒನಕೆಯಲ್ಲಿ ಹೊಡೆದು ಕೊಂದಂತೆ.
  • ತಿಥಿ ಮನೆಯಲ್ಲಿ ಉಂಡ ಭಟ್ಟ ಹುಲ್ಲು ಗೊಣಬೆಗೆ ಬೆಂಕಿ ಹಾಕಿದ್ದನಂತೆ.
  • ತೆರೆ ಕಳೆದು ಸಮುದ್ರ ಮುಳುಗಿದಂತೆ.
  • ಕದ ತಿನ್ನುವವನಿಗೆ ಹಪ್ಪಳ ಈಡಾ?
  • ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
  • ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು
  • ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ರಂಡೆ, ಮು0ಡೇರಾ ಎಂದಳು
  • ಶಾಲೆ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ.
  • ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.
  • ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.
  • ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.
  • ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ
  • ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.
  • ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.
  • ಅಜ್ಜ ತಿನ್ನುವ ಕಬ್ಬು ರಸದಾಳಿ.
  • ನನ್ನನ್ನು ಕಾಡುವ ದೆವ್ವ ನೆರೆಮನೆ ಬೊಮ್ಮಕ್ಕನನ್ನು ಕಾಡು.
  • ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.
  • ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.
  • ಕೇಳದೆಯೇ ಕುದುರೆ ಕೊಟ್ಟ ಕೇಳಿದರೆ ಹೆಂಡತಿಯನ್ನೂ ಕೊಡುತ್ತಾನೆ.
  • ಆಲದ ಮರವನ್ನು ನೋಡುತ್ತೀಯಾ? ಬ್ರಹ್ಮರಾಕ್ಷಸನನ್ನು ನೋಡುತ್ತೀಯಾ?
  • ಉಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.
  • ಪುಕ್ಕಟೆ ಸಿಗುವುದಿದ್ದರೆ ನನಗೊಂದಿರಲಿ, ನನ್ನ ಅಪ್ಪನಿಗೊಂದಿರಲಿ.
  • ಮದುವೆಯಾಗೋ ಬ್ರಹ್ಮಚಾರಿ ಅಂದರೆ ನೀನೇ ಹೆಂಡತಿಯಾಗು ಅಂದ.
  • ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.
  • ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.
  • ಕಟಕಟೆಯ ದೇವರಿಗೆ ಮರದ ಜಾಗಟೆ.
  • ಇಷ್ಟು ಕ0ಡ್ಯಾ (ಕಂಡೆಯಾ) ವಿಷ್ಣು ಭಟ್ಟ ಮುಪ್ಪಿನ ಕಾಲಕ್ಕೆ ಮೂರು ಹೆ೦ಡ್ರು.
  • ಕರುವಿನ ಹಾರಾಟ ಗೂಟದ ಕೆಳಗೆ.
  • ಸುಟ್ಟೇವು ಸುಡುವ ಮುದುಕಿಗೆ ಸಿಂಬಳ ತೆಗೆಯಲು ಇನ್ನೊಬ್ಬಳು.
  • ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.
  • ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.
  • ಹಾರುವ ಮಂಗಕ್ಕೆ ಏಣಿ ಹಾಕಿ ಕೊಟ್ಟಂತೆ.
  • ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.
  • ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.
  • ಮನೆ ದೇವರೇ ಮಣ್ಣು ತಿನ್ನುತ್ತಿರುವಾಗ ಮಾರಿಯಮ್ಮ ಹೋಳಿಗೆ ಕೇಳಿದ್ದಳು.
  • ಗುರುವಿಗೇ ಗುಟುಕು ನೀರು ಶಿಷ್ಯನಿಗೆಲ್ಲಿಂದ ಎಣ್ಣೆ ಮಜ್ಜನ?
  • ಗಂಡ ರಂಡೆ ಎಂದರೆ ಘಟ್ಟದ ಕೆಳಗಿನ ಭಟ್ಟನೂ ಹೇಳುತ್ತಾನೆ.
  • ಮನೆಯಲ್ಲಿ ಗದ್ದಲ ಎಂದು ಮಂಜುಗುಣಿ ತೇರಿಗೆ ಹೋಗಿದ್ದನಂತೆ.
  • ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡಿದ್ದನು.
  • ಮಾಣಿ, ಗೋಣಿ, ಓಣಿ ಈ ಮೂರು ಸಿಗದಿದ್ದರೆ ನಾಯಿ ಮೂರೂ ಮುಕ್ಕಾಲು ಘಳಿಗೆಯಲ್ಲಿ ಕಾಶಿಗೆ ಹೋಗುತ್ತಿತ್ತು.
  • ಮಾಡುವ ಕೆಲಸ ಬಿಟ್ಟು ಹಾಡುವ ದಾಸಯ್ಯನ ಜೊತೆ ಹೋಗಿದ್ದಳು.
  • ಹೊಳೆಗೆ ಮೂರು ಮಾರು ಇರುವಾಗಲೇ ಚಲ್ಲಾಣ ಮೇಲೇರಿಸಿದ್ದ.
  • ಕುದುರೆ ಕಂಡರೆ ಕಾಲು ನೋವು.
  • ಹೊತ್ತುಕೊಂಡು ಹೋಗುವವರಿದ್ದರೆ ಸತ್ತವರಂತೆ ಬಿದ್ದೇನು
  • ತಾಯಿ ಕಂಡರೆ ತಲೆ ಬೇನೆ.
  • ಸುಖ ಹೆಚ್ಚಾಗಿ ಶಾನೂಭೋಗನನ್ನು ಬಯಸಿದ್ದಳು.
  • ಅಗ್ಗಕ್ಕೆ ಮುಗ್ಗಿದ ಜೋಳ.
  • ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲ.
  • ಸಣ್ಣ ಹುಣ್ಣಿಗೆ ಸಣ್ಣ ಕ್ವಾಟಲೆ; ದೊಡ್ಡ ಹುಣ್ಣಿಗೆ ದೊಡ್ಡ ಕ್ವಾಟಲೆ.
  • ಭಟ್ಟನ ಮಗಳಿಗೆ ಹುಟ್ಟಲು ದಿನವಿಲ್ಲ.
  • ಉಂಡಾತಾ ಕೇಳಿದರೆ ಮುಂಡಾಸು ಮೂವತ್ಮೂರು ಮೊಳ ಎಂದಿದ್ದ.
  • ತೆಪ್ಪಾರ ಗೌಡ ಮುಂಡಾಸು ಸುತ್ತುವುದರೊಳಗೆ ಮಂಜುಗುಣಿ ತೇರು ನೆಲೆ ನಿಂತಿತ್ತು.
  • ಹಂಚು ಕಾಣದ ಮೂಳೆ (ಮುದುಕಿ) ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು.
  • ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ
  • ಕಾಶಿಗೆ ಹೋದರೆ ಕಾಸಿಗೊಂದು ಕುದುರೆ.
  • ಅಡಿಕೆ ಕೊಯ್ಲು, ಅಗಚಯದ ಹೊತ್ತು; ಅಳುವ ಮಕ್ಕಳು, ಹೊರುವ ನೀರು; ಒದ್ದೆ ಕಟ್ಟಿಗೆ, ಒಡಕಲು ಗಡಿಗೆ; ಒದಕಲು ಎಮ್ಮೆ, ಬಡಕಲು (ಬಡಿಯುವ) ಗಂಡ ಇಷ್ಟಿದ್ದರೆ ಆ ಹೆಂಗಸಿಗೆ ಅಷ್ಟೈಶ್ವರ್ಯಕ್ಕೆ ಎಂಟೆ ಕಮ್ಮಿ.
  • ಬಕನ ಬಾರಿ, ಮಗನ ಮದುವೆ, ಹೊಳೆಯಿಂದ ಆಚೆ ಪರಾನ್ನ.



  • ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ
  • ತನ್ನ ಬಗುಲಲ್ಲಿ ಆನೆ ಸತ್ರು ಪರ್ವಾಗಿಲ್ಲ,ಬೇರೆಯವ್ರ ತಟ್ಟೆಲಿ ನುಶಿ ಸತ್ತಿದ್ದು ಕಾಣುತ್ತೆ ಇವರಿಗೆ
  • ವಾರಗಿತ್ತಿ ಎಂದಿದ್ರೂ ದಾರಿ ಮುಳ್ಳು
  • ರೋಣಿ ಮಳೆ ಹೊಯ್ದರೆ ಓಣಿಯೆಲ್ಲಾ ಕೆಸರು
  • ಸೋಜಿಗದ ಬೆಕ್ಕು ಮಜ್ಜಿಗೆ ಆಮ್ರ ಕುಡಿದಿತ್ತಂತೆ
  • ಮುನ್ನೋಡಿ ಪಾಯಸ ಉಣ್ಣೊ ಮೂಳಾ ಅಂದ್ರೆ ಅವ ಯಾವ ಹೊಲದ ಗಸಗಸೆ ಅಂದ್ನಂತೆ
  • ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ
  • ಮನೇಲಿ ಗದ್ಲ ಅಂತ ಮಂಜ್ಗುಣಿ ತೇರಿಗೆ ಹೋಗಿದ್ರಂತೆ
  • ಬೇರೆಯವ್ರ ಮನೆ ಎಮ್ಮೆ ಸಗಣಿನೂ ರುಚಿನೆ ಇವ್ರಿಗೆ.
  • ಆರು ಕೊಟ್ರೆ ಅತ್ತೆ ಕಡೆ,ಮೂರು ಕೊಟ್ರೆ ಮಾವನ ಕಡೆ
  • ಊರಿಗೊಂದು ದಾರಿ ಆದ್ರೆ ಪೋರನಿಗೊಂದು ದಾರಿ.



  • ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
  • ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು
  • ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ಗರತಿರಲ್ವಾ ಎಂದಳು
  • ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ
  • ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.
  • ಅಜ್ಜ ತಿನ್ನುವ ಕಬ್ಬು ರಸದಾಳಿ.
  • ನನ್ನನ್ನು ಕಾಡುವ ದೆವ್ವ ನೆರೆಮನೆ ಸರಸಕ್ಕನನ್ನು ಕಾಡು.
  • ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.
  • ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.
  • ಅಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.
  • ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.
  • ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.
  • ಇಷ್ಟು ಕಂಡ್ಯಾ (ಕಂಡೆಯಾ) ಯಂಕಭಟ್ರ ಮುಪ್ಪಿನ ಕಾಲಕ್ಕೆ ಮೂರು ಹೆಂಡ್ರು.
  • ಕರುವಿನ ಹಾರಾಟ ಗೂಟದ ಕೆಳಗೆ.
  • ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.
  • ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.
  • ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.
  • ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.
  • ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.
  • ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.
  • ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು
  • ನಾವೇ ಸಾಯಬೇಕು ಸ್ವರ್ಗ ಕಾಣಬೇಕು
  • ನಮಗೆ ನಾವು, ಗೋಡೆಗೆ ಮಣು
  • ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.
  • ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.
  • ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.
  • ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.
  • ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ
  • ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತು
  • ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.
  • ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.
  • ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು
  • ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.
  • ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.
  • ಅರಸ ಬರುವ ತನಕ ಹಲಸು ತಡೆಯುವುದಿಲ್ಲ.
  • ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.
  • ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.
  • ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆz
  • ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.
  • ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.
  • ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.
  • ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.
  • ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ...
  • ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.

ಹವ್ಯಕ ಭಾಷೆಯಲ್ಲಿರುವ ಗಾದೆಗಳು ಸಂಪಾದಿಸಿ

  • ಆಲೆ ಗಾಣಕ್ಕೆ ಅಂತ ಕಡ್ದ ಮರ, ಕತ್ತಿ ಹಿಡಿಗೂ ಬರ್ಲೆ.
  • ಸುರದು ಉಣ್ಣವಡ, ಗೊರದು ನಿದ್ದೆ ಮಾಡವಡ.
  • ಬ್ಯಾಣ ಸುಟ್ಟಾದ ಮೇಲೆ ದೆರಕು ಒಬಳಿಸಲ್ಲೆ ಹೋಗಿದ್ನಡ.
  • ವಕ್ಕಿದ್ ಮೇಲೆ ಪಳ್ಜಾ ಅಲ್ದಡಾ, ಮಿಕ್ಕಿದ್ ಮೇಲೆ ಹೆಣ್ ಅಲ್ದಡಾ
  • ಸೊಕ್ಕಿದ್ರೆ ಯಾಣ, ರೊಕ್ಕಿದ್ರೆ ಗೋಕರ್ಣ
  • ತೊವೆ ಸುರಿಯೋನಿಗೆ ಹೆಸರ ಧಾರಣೆ ಎಂತಕ್ಕೆ
  • ‎ಹನ್ನೊಂದು ಹೊನ್ನಿನ ಪುರಾಣಿಕಂಗೆ ಹನ್ನೊಂದೇ ಹೊನ್ನಡ
  • ಗೋಡೆ ಬಿದ್ರೆ ಜಗಲಿ ಮೇಲೆ, ಸಾಲ ಆದ್ರೆ ಮಗನ ತಲೆ ಮೇಲೆ
  • ಬೀದಿ ಕೂಸು ಬೆಳೀತಡ, ಕೊನೆ ಕೂಸು ಕೊಳೀತಡ
  • ಅಜ್ಜ ಅಜ್ಜ ಹೇಳಿ ಇಡೀ ಮನೆ ತವಳಿದಿದ್ನಡ
  • ದುಡ್ಡು ಕೊಟ್ಟು ಉಣ್ಣದಾದ್ರೆ ಅಕ್ಕನ ಮನೆನೇ ಆಗವ?
  • ಕರ್ಕರೇ ದೇವ್ರೀಗ್ ಮರದ ಗಂಟೆ
  • ಕರ್ದ್ ಹೆಣ್ ಕೊಟ್ರ್ ಅಳ್ಯಂಗ್ ಮಲರೋಗ್ವಡ
  • ಆಲೆ ಭಟ್ಟ ಸ್ವಾದಿಗೆ (ಸೋದೆಗೆ) ಹೋದಾಂಗೆ
  • ಭಟ್ರೇ ನೀವ್ ಉಂಡದ್ದಕ್ಕಲ್ಲ, ನಮ್ಮನೇ ಬೆಕ್ಕೀಗ್ ಅನ್ನಿಲ್ಲೆ ಹೇಳ್ದಾಂಗೆ
  • ಸುಬ್ರಾಯ್ ಶೆಟ್ಟಿ ನೊಣಾ ತಿಂದ್ ಜಾತಿ ಕೆಡ್ಸ್ ಕಂಡಿದ್ನಡ
  • ಭಟ್ರ್ ಬಾಯ್ ಶುದ್ಧ, ಗೋವ್ನ್ ಮುಕ್ಳ್ ಶುದ್ಧ
  • ಬೇಡ್ಕ ಬಂದ್ ಅಕ್ಕೀಲ್ ಬೆಕ್ ಉಚ್ಚಿ ಹೊಯ್ದಿತ್ತಡ
  • ಮುಚಗ್ಯಂಡು ತಿಂದ್ರೂ ಓಣಿಮನೆ ಬಕ್ಕೆ
  • ಹೆದ್ರದವಂಗ್ ಹೇಲ್ ದೈವ
  • ಹೆಸರಿಗೆ ಹೆಗಡೆರು ಮೊಸರಿಗೆ ಶಾನುಭೋಗರು
  • ಹೆಸ್ರೀಗ್ ಹೆಬ್ಬಾರ, ಮೊಸ್ರೀಗ್ ತತ್ವಾರ
  • ಅರಸನ ಮಗಳಿಗೆ ಭತ್ತದ ಚುಂಗು ಕಪ್ದಂಗೆ
  • ಕಂಡ್ರ್ ಮಾಣಿ, ಉಂಡ್ರ್ ಗೋಣಿ
  • ಹೊಪ್ಪಾಳ್ಶೀಗ್ ಹಶ್ವ್ ಹೆಚ್ಚು, ನಿಪ್ಪಾಳ್ಶೀಗ್ ನಿದ್ರ್ ಹೆಚ್ಚು
  • ಕಂಡರೆ ಕೈ ಮುಗಿ ಕಾಣದಿದ್ರೇ ಕಾಯ ಒಡಿ
  • ಕಾಶೀಗ್ ಹೋದ್ರ್ ಕಾಸಿಗ್ ಒಂದ್ ಕುದ್ರ್ಯಡ.
  • ಅಜ್ಜೀ ಸುಟ್ಟಾಂಗೂ ಆತೂ ಹೊಡಚ್ಲ್ ಕಾಸ್ದಾಂಗೂ ಆತೂ
  • ಮಳ್ಳಾದ್ರು ತಾಯಿ, ತೆಳ್ಳಾದ್ರು ಮಜ್ಜಿಗೆ
  • ಮಳೇಗಾಲ್ದ್ ಬಿಶ್ಲು, ಮನೇಗಂಡ್ನ ನೆಗೆ ನಂಬಲಾಗ್ದಡ
  • ಬಿದ್ ಹುಟ್ದ್ ಹಾಗಲ, ಹಾದರಕ್ ಹುಟ್ದ್ ಮಕ್ಕೋ, ಎರ್ಡೂ ಚೊಲೋ ಬೆಳೀತಡ
  • ಉಪ್ಳೆ ಬಸ್ವನ್ ಮೂಗಲ್ ಬೆಳ್ ಹೆಟ್ದಾಂಗೆ
  • ಬಂಗಾರ್ದ್ ಮೆಟ್ಟೂ ಹೇಳ್ ತಲೇಗ್ ಹಾಯ್ಕಂಬಲಾಗ್ತಾ?
  • ಊರ್ ಸುಟ್ರೂ ಹನ್ಮಂತ ಹೊರಗೆ
  • ಕರ್ದಾಗ ಬಾರದ ಅಳಿಯ ಕಡೀಗ್ ಬಂದ್ಕಂಡು ಒಳಲ್ಕಲ್ ನೆಕ್ಕಿದ್ನಡ
  • ಬೆಲ್ಲದ್ ಗಣಪತೀಗೆ ಮುಕಳೀ ಚೂಟ್ ನೈವೇದ್ಯ
  • ಅರಿಯೆ ಅಂದ್ರ್ ೬೦ ಗುಣ, ಅರೀವೆ ಅಂದ್ರ್ ಜೀಮೆಲ್ಲಾ ಹೆಣ
  • ಹರ್ಯೋ ನೀರೀಗೆ, ಉರ್ಯೋ ಬೆಂಕೀಗೆ, ಶಾಸ್ತ್ರ ಇಲ್ಲೆ.
  • ಉಕ್ಕಿದ ಮೇಲೆ ಪಳ್ಜಾ ಅಲ್ಲ, ಮಿಕ್ಕಿದ ಮೇಲೆ ಹೆಣ್ ಅಲ್ಲ
  • ಶೆಟ್ಟಿ ಉಟ್ಟು ಕೆಟ್ಟ, ಭಟ್ಟ ಉಂಡ್ ಕೆಟ್ಟ
  • ಅಮ್ಮಚ್ಚಿ ಗೋವಿಂದ ಕೊಳಗಿಬೀಸಿಗೆ ಹೋಗಿಬಂದ
  • ಗೌಡಾ, ಗೌಡಾ, ಭಾಗ್ಯ್ ಬಂದ್ರ್ ಯೇನ್ ಮಾಡ್ವೆ? ಕೇಳ್ರ್ ಉಂಬೆ, ಕೈ ತೊಳೇವೆ ಹೇಳಿದಿದ್ನಡ
  • ತಳದಲ್ಲಿ ಆನ್ನದ ಆಗಳು ಸಿಕ್ತು ಹೇಳಿ .. ನಾಯಿ ಅನ್ನದ ತಿಳಿ ಕುಡಿತಂತೆ!!
  • ಯಾಣದವು ಗೋಕರ್ಣಕ್ಕೆ ಹೋದ್ರೆ ಗೋಕರ್ಣದವು ಗಾಳಕ್ಕೆ ಹೊಗಿದ್ವಡಾ
  • ಶ್ಯಾನಭೋಗ್ರ ಎಮ್ಮೆ ಕಂಡಿದ್ದೆ ಹೇಳೂದೇ ತಪ್ಪು, ಹೊಡ್ಕ ಬಾ ಹೇಳ್ತ್ರು.
  • ಬಡಿ ಬಡಿ ಭಟ್ಟಂಗೆ ಹೆಡಿಗೆಯಂತ ಮುಂಡಾಸ !!
  • ತಲೇಗ್ ಮಿಂದ್ರ್ ಕಾಲೀಗ್ ಬತ್ತು
  • ಹೋದ್ರೆ ಕಲ್ಲು ಬಂದ್ರೆ ಅಪ್ಪೆಕಾಯಿ
  • ಅರೆಗುದಿ ಅನ್ನ ಅರಸಂಗು ಸಿಕ್ತಿಲ್ಯಡ
  • ಅರಸ ಬತ್ತಾ ಹೇಳಿ ಹಲಸಿನ ಹಣ್ಣು ನಿಲ್ತಿಲ್ಲೆ
  • ಒಬ್ಬವ ಅತ್ತು ಹೆದ್ರಿಸಿದ್ನಡ ಮತ್ತೊಬ್ಬವ ಹೇತು ಹೆದ್ರಸಿದ್ನಡ
  • ಕೋಣ ತಪ್ರೆ ಮಾವಿನಜಡ್ಡಿ...
  • ಭಟ್ರೇ ಭಟ್ರೇ ಏಕಾದಶಿ ಯಾವಾಗ ಕೇಳ್ದ್ರೆ ಹೆಂಡ್ತಿ ಸೀರೆ ನೋಡಿ ಹೇಳ್ತಿ ಅಂದ್ರು...
  • ಓದಿದ್ದೆಲ್ಲ ಕಾಶೀ ಖಂಡ, ತಿಂಬದೆಲ್ಲ ಮಶೀ ಕೆಂಡ
  • ಕಟ್ಟಗೆ ಹಸಿವಾದರೆ ನೆಟ್ಟಗೆ ಇಳಿತು
  • ಬಡಿ ದೇವರ ಕಂಡ್ರೆ ಬಿಲ್ವ ಪತ್ರೆನು ಹುಬ್ಬಹಾರ್ಸಿತ್ತಡ
  • ತಾಯಿ ಕಂಡ್ರೆ ತಲೆಬೇನೆ
  • ಪೋರ ಹೆಗಡೆ ಅಲ್ದಡ, ಹೋರಿ ಎತ್ತು ಅಲ್ದಡ
  • ಹಡಗು ತುಂಬಲೆ ಹೋದವ ಬಂದ್ನಡ, ಹೊಟ್ಟೆ ತುಂಬಲೆ ಹೋದವ ಬಂಜ್ನಿಲ್ಯಡ!

ಆಕರಗಳು ಸಂಪಾದಿಸಿ

ಇವನ್ನೂ ನೋಡಿ ಸಂಪಾದಿಸಿ